‘ವಿಜಯ್​ನ ಎಲ್ಲ ವಿಚರಗಳೂ ಇಷ್ಟ’; ನಾಚುತ್ತಲೇ ಹೇಳಿದ ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಸಂಬಂಧದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ವಿಜಯ್ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ "ಗೀತ ಗೋವಿಂದಂ" ಮತ್ತು "ಡಿಯರ್ ಕಾಮ್ರೇಡ್" ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.

‘ವಿಜಯ್​ನ ಎಲ್ಲ ವಿಚರಗಳೂ ಇಷ್ಟ’; ನಾಚುತ್ತಲೇ ಹೇಳಿದ ರಶ್ಮಿಕಾ ಮಂದಣ್ಣ
ವಿಜಯ್-ರಶ್ಮಿಕಾ
Edited By:

Updated on: Jun 16, 2025 | 11:56 AM

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ಸಂಬಂಧದ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಿಲ್ಲ. ಇವರು ಹಾಯಾಗಿ ಸುತ್ತಾಡಿಕೊಂಡಿದ್ದನ್ನು ನೀವು ಗಮನಿಸಿರಬಹುದು. ಇವರು ಒಟ್ಟಾಗಿ ಫೋಟೋ ಪೋಸ್ಟ್ ಮಾಡದೇ ಇದ್ದರು, ಇವರ ನಡೆಗಳಿಂದ ಅದು ಸ್ಪಷ್ಟವಾಗುತ್ತಿದೆ. ಈಗ ವಿಜಯ್ ದೇವರಕೊಂಡ ಅವರ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ. ವಿಜಯ್ ದೇವರಕೊಂಡ ಬಗೆಗಿನ ಎಲ್ಲ ವಿಚಾರಗಳು ಇಷ್ಟ ಎಂದು ಅವರು ಹೇಳಿಕೆ ನೀಡಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಅವರು ಈ ಮೊದಲು ‘ಗೀತ ಗೋವಿಂದಂ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅಂದುಕೊಂಡಿದ್ದಕ್ಕಿಂತಲೂ ಸಿನಿಮಾ ಹಿಟ್ ಆಯಿತು ಮತ್ತು ವಿಜಯ್ ಹಾಗೂ ರಶ್ಮಿಕಾ ಜೋಡಿ ಯಶಸ್ಸು ಕಂಡಿತು. ಆ ಬಳಿಕ ಇವರ ಮಧ್ಯೆ ಪ್ರೀತಿ ಬೆಳೆದಿದೆ ಎನ್ನಲಾಗಿದೆ.

ಇದನ್ನೂ ಓದಿ
‘ಹೆಸರ ಜೊತೆ ಅಕ್ಕ ಸೇರಿದ್ರೆ ಅರ್ಥವೇ ಬೇರೆಯಾಗುತ್ತೆ’; ದೀಪಿಕಾ ಬೇಸರ
ಸಲ್ಲು ಮದುವೆ ಆಗದಿರಲು ವಿಚ್ಛೇದನದ ಭಯವೇ ಕಾರಣ; ಓಪನ್ ಆಗಿ ಮಾತನಾಡಿದ ನಟ
ವಮಿಕಾ ಕೊಹ್ಲಿಯ ಕೈ ಬರಹ ಎಷ್ಟು ಕ್ಯೂಟ್ ನೋಡಿ; ಫೋಟೋ ಹಂಚಿಕೊಂಡ ಅನುಷ್ಕಾ
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

ಸದ್ಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಒಟ್ಟಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇವರು ಶೀಘ್ರವೇ ವಿವಾಹ ಆದರೂ ಅಚ್ಚರಿ ಏನಿಲ್ಲ ಬಿಡಿ. ಇತ್ತೀಚೆಗೆ ವೇದಿಕೆ ಒಂದರ ಮೇಲೆ ರಶ್ಮಿಕಾ ಅವರಿಗೆ ವಿವಿಧ ಕಲಾವಿದರ ಬಗ್ಗೆ ಕೇಳಲಾಗಿದೆ. ಆ ಹೀರೋಗಳಲ್ಲಿ ಯಾವ ವಿಚಾರ ಇಷ್ಟ ಎಂಬುದನ್ನು ರಶ್ಮಿಕಾ ಅವರು ಹೇಳಬೇಕಿತ್ತು.

ರಶ್ಮಿಕಾ ಅವರಿಗೆ ಮೊದಲು ಅಲ್ಲು ಅರ್ಜುನ್ ಬಗ್ಗೆ ಕೇಳಿದರು. ಈ ವೇಳೆ ಅವರು ‘ಅಲ್ಲು ಅರ್ಜುನ್ ಅವರ ಸ್ವ್ಯಾಗ್ ಇಷ್ಟ’ ಎಂದರು. ಆ ಬಳಿಕ ಆ್ಯಂಕರ್ ವಿಜಯ್ ದೇವರಕೊಂಡ ಹೆಸರನ್ನು ತೆಗೆದುಕೊಂಡರು. ‘ಅವರಲ್ಲಿ ನನಗೆ ಎಲ್ಲವೂ ಇಷ್ಟ’ ಎಂದು ರಶ್ಮಿಕಾ ಮಂದಣ್ಣ ಹೇಳಿದರು. ಈ ವೇಳೆ ಅವರು ಸಾಕಷ್ಟು ನಗುತ್ತಿದ್ದರು. ಅವರು ನಾಚುತ್ತಿದ್ದರು, ಮತ್ತು ಅಭಿಮಾನಿಗಳ ಕೂಗು ಜೋರಾಯಿತು.

ಇದನ್ನೂ ಓದಿ: ಭೀಕರ ವಿಮಾನ ದುರಂತ; ಯಶ್, ರಾಧಿಕಾ ಪಂಡಿತ್, ರಮ್ಯಾ, ರಶ್ಮಿಕಾ ಮಂದಣ್ಣ ಸಂತಾಪ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ‘ಗೀತ ಗೋವಿಂದ’ ಸಿನಿಮಾದಲ್ಲಿ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರೆ. ಆ ಬಳಿಕ ಇವರು ಮತ್ತೆ ಒಟ್ಟಾಗಿ ನಟಿಸಲು ಸಾಧ್ಯವಾಗಿಲ್ಲ. ಇವರು ಮತ್ತೆ ತೆಮೇಲೆ ಒಟ್ಟಾಗಿ ಕಾಣಿಸಿಕೊಳ್ಳಬೇಕು ಎಂಬುದು ಅಭಿಮಾನಿಗಳ ಕೋರಿಕೆಯೇ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:56 am, Mon, 16 June 25