ವೀಕೆಂಡ್ನಲ್ಲಿ ಲಕ್ಷಕ್ಕೆ ಕುಸಿದ ‘ಥಗ್ ಲೈಫ್’ ಗಳಿಕೆ; ಹೀನಾಯ ಸ್ಥಿತಿಯಲ್ಲಿ ಕಮಲ್ ಸಿನಿಮಾ
ಕಮಲ್ ಹಾಸನ್ ನಟನೆಯ ಮತ್ತು ನಿರ್ಮಾಣದ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ನಷ್ಟ ಅನುಭವಿಸುತ್ತಿದೆ. 300 ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರ ಕೇವಲ 46 ಕೋಟಿ ರೂಪಾಯಿ ಮಾತ್ರ ಗಳಿಸಿದೆ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯಾಗದಿರುವುದು ಮತ್ತು ವಿವಾದಗಳಿಂದಾಗಿ ಚಿತ್ರಕ್ಕೆ ಹಿನ್ನಡೆಯಾಗಿದೆ.

ಕಮಲ್ ಹಾಸನ್ (Kamal Haasan) ನಟನೆಯ ‘ಥಗ್ ಲೈಫ್’ ಸಿನಿಮಾದ ಗಳಿಕೆ ದಿನ ಕಳೆದಂತೆ ಹೀನಾಯ ಸ್ಥಿತಿ ತಲುಪಿದೆ. ಈ ಚಿತ್ರದ ಬಜೆಟ್ 300 ಕೋಟಿ ರೂಪಾಯಿ ಎಂದು ತಂಡ ಬೀಗಿದೆ. ಆದಾಗ್ಯೂ ಸಿನಿಮಾದ ಗಳಿಕೆ ಮಾತ್ರ 46 ಕೋಟಿ ರೂಪಾಯಿ ಮಾತ್ರ. ಹೀಗೆ ಮುಂದುವರಿದರೆ ನಿರ್ಮಾಪಕ ಕಮಲ್ ಹಾಸನ್ಗೆ ಮತ್ತಷ್ಟು ನಷ್ಟ ಆಗಲಿದೆ. ಕರ್ನಾಟಕದಲ್ಲಿ ರಿಲೀಸ್ನ ಅವರು ಎದುರು ನೋಡುತ್ತಿದ್ದಾರೆ. ಒಂದೊಮ್ಮೆ ಅವರು ಕ್ಷಮೆ ಕೇಳಿ ಸಿನಿಮಾ ಇಲ್ಲಿ ರಿಲೀಸ್ ಆದರೂ ಪರಿಸ್ಥಿತಿಯಲ್ಲಿ ಅಂಥ ಬದಲಾವಣೆ ಏನನ್ನೂ ನಿರೀಕ್ಷಿಸಲಾಗದು.
‘ಥಗ್ ಲೈಫ್’ ಸಿನಿಮಾ ರಿಲೀಸ್ಗೂ ಮೊದಲೇ ವಿವಾದ ಮಾಡಿಕೊಂಡಿತು. ಈ ಚಿತ್ರದ ನಿರ್ಮಾಪಕ ಹಾಗೂ ನಟ ಕಮಲ್ ಹಾಸನ್ ಅವರು ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿಕೆ ನೀಡಿ ಕಷ್ಟಕ್ಕೆ ಸಿಲುಕಿದರು. ಆಮೇಲೆ ಪತ್ರದ ಮೇಲೆ ಪತ್ರ ಬರೆದ ಅವರು ಎಲ್ಲಿಯೂ ಕ್ಷಮೆ ಕೇಳಿಲ್ಲ. ಇದರಿಂದ ಸಿನಿಮಾ ರಿಲೀಸ್ಗೆ ಅವಕಾಶ ಸಿಕ್ಕಿಲ್ಲ. ಇದರ ಜೊತೆಗೆ ಸಿನಿಮಾ ಕೆಟ್ಟ ವಿಮರ್ಶೆ ಪಡೆಯಿತು. ಈ ಎರಡೂ ಕಾರಣಕ್ಕೆ ಸಿನಿಮಾಗೆ ದೊಡ್ಡ ನಷ್ಟ ಉಂಟಾಗಿದೆ.
‘ಥಗ್ ಲೈಫ್’ ಸಿನಿಮಾ ಶುಕ್ರವಾರ (ಜೂನ್ 13) 75 ಲಕ್ಷ ರೂಪಾಯಿ, ಶನಿವಾರ (ಜೂನ್ 14) 93 ಲಕ್ಷ ರೂಪಾಯಿ ಹಾಗೂ ಭಾನುವಾರ (ಜೂನ್ 15) 69 ಲಕ್ಷ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರ ಒಟ್ಟಾರೆ ಗಳಿಕೆ ಕೇವಲ 46.35 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ಯವಾಗಿದೆ. ಇದರಿಂದ ನಿರ್ಮಾಪಕರು ಅದೆಷ್ಟು ದೊಡ್ಡ ನಷ್ಟ ಅನುಭವಿಸಿರಬಹುದು ನೀವೇ ಊಹಿಸಿ.
ಇದನ್ನೂ ಓದಿ: ಗಿಫ್ಟ್ ಕೊಡಲು ಬಂದ ಅಭಿಮಾನಿ ಮೇಲೆ ಕಮಲ್ ಹಾಸನ್ ಗರಂ; ತಪ್ಪು ಯಾರದ್ದು?
ಬುಕ್ ಮೈ ಶೋನಲ್ಲಿ ‘ಥಗ್ ಲೈಫ್’ ಚಿತ್ರಕ್ಕೆ 4.9 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲಿ ಈ ಚಿತ್ರಕ್ಕೆ 4.3 ರೇಟಿಂಗ್ ಸಿಕ್ಕಿದೆ. ಈ ವಿಚಾರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:53 am, Mon, 16 June 25








