ಶ್ರೀದೇವಿ ಜೊತೆ ಕದ್ದುಮುಚ್ಚಿ ಸಂಸಾರ ಮಾಡಿದ್ದ ಸ್ಟಾರ್ ನಟ ಮಿಥುನ್ ಚಕ್ರವರ್ತಿ
ಮಿಥುನ್ ಚಕ್ರವರ್ತಿಯವರ 75ನೇ ಜನ್ಮದಿನದಂದು, ಅವರ ಮತ್ತು ಶ್ರೀದೇವಿ ಅವರ ರಹಸ್ಯ ಪ್ರೇಮಕಥೆಯನ್ನು ನೆನಪಿಸಿಕೊಳ್ಳೋಣ. ಇಬ್ಬರೂ ಚಿತ್ರೀಕರಣದ ಸಮಯದಲ್ಲಿ ಒಟ್ಟಿಗೆ ಇದ್ದರು ಎಂದು ಹೇಳಲಾಗುತ್ತದೆ. ಈ ಸಂಬಂಧ 1985 ರಿಂದ 1988 ರವರೆಗೆ ಇತ್ತು ಎನ್ನಲಾಗಿದೆ. ಈ ಪ್ರೇಮಕಥೆ ಕುರಿತು ಮಿಥುನ್ ಚಕ್ರವರ್ತಿಯವರು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

ಮಿಥುನ್ ಚಕ್ರವರ್ತಿ (Mithun Chakravarthy) ಅವರು ಒಂದು ಕಾಲದಲ್ಲಿ ಬೇಡಿಕೆಯ ಹೀರೋ ಆಗಿದ್ದರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಇಂದು (ಜೂನ್ 16) ಜನ್ಮದಿನ. ಅವರಿಗೆ ಈಗ 75 ವರ್ಷ ವಯಸ್ಸು. ಈ ಕಾರಣದಿಂದಲೇ ಸಿನಿಮಾಗಳಲ್ಲಿ ನಟಿಸುವುದನ್ನು ಅವರು ಕಡಿಮೆ ಮಾಡಿದ್ದಾರೆ ಎನ್ನಬಹುದು. ಮಿಥುನ್ ಚಕ್ರವರ್ತಿ ಜನ್ಮದಿನದ ವೇಳೆ ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳೋಣ. ಅವರು ಶ್ರೀದೇವಿ ಅವರನ್ನು ವಿವಾಹ ಆಗಲು ಬಯಸಿದ್ದರು. ಅವರ ಜೊತೆ ಪ್ರೀತಿಯಲ್ಲಿ ಇದ್ದರು. ಆದರೆ ಅವರು ವಿವಾಹ ಆಗಲು ಸಾಧ್ಯವಾಗಿಲ್ಲ.
ಶ್ರೀದೇವಿ ಅವರು ಅದ್ಭುತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಅವರ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆ ಆಗಿತ್ತು. ಅವರ ಬದುಕಲ್ಲಿ ಏರಿಳಿತಗಳನ್ನು ನೋಡಿದ್ದರು. ಅವರು ಹಲವು ವಿವಾದಗಳನ್ನು ಮಾಡಿಕೊಂಡಿದ್ದರು. ಮಿಥುನ್ ಚಕ್ರವರ್ತಿ ಹಾಗೂ ಶ್ರೀದೇವಿ ಪ್ರೀತಿಯಲ್ಲಿ ಇದ್ದರು. ಆದರೆ, ಪ್ರೀತಿ ಯಶಸ್ಸು ಕಾಣಲೇ ಇಲ್ಲ.
ಮಿಥುನ್ ಚಕ್ರವರ್ತಿ ಮತ್ತು ಶ್ರೀದೇವಿ ಪ್ರೀತಿಯಲ್ಲಿ ಇದ್ದರು ಎಂಬುದನ್ನು ಹಿರಿಯ ನಟಿ ಸುಜಾತಾ ಮೆಹ್ತಾ ಅವರು ಈ ಮೊದಲು ಹೇಳಿದ್ದರು. ಶ್ರೀದೇವಿಯು ಬ್ರೇಕಪ್ ಬಳಿಕ ವಿಚಲಿತರಾಗಿದ್ದರು. ಅವರು ಶೂಟಿಂಗ್ ಮುಗಿದ ಬಳಿಕ ಒಂದು ಮೂಲೆಯಲ್ಲಿ ಸುಮ್ಮನೆ ಕೂರುತ್ತಿದ್ದರಂತೆ. ‘ಮಿಥುನ್ ಅವರನ್ನು ಶ್ರೀದೇವಿ ಹುಚ್ಚುತನದಿಂದ ಪ್ರೀತಿಸುತ್ತಿದ್ದರು’ ಎಂದು ತಿಳಿದು ಬಂದಿತ್ತು.
‘ಜಾಗ್ ಉಟಾ ಇನ್ಸಾನ್’ ಚಿತ್ರದ ಶೂಟ್ನಲ್ಲಿ ಶ್ರೀದೇವಿ ಹಾಗೂ ಮಿಥುನ್ ಚಕ್ರವರ್ತಿ ಭೇಟಿ ಆದರು. 1985ರಲ್ಲಿ ಇವರು ರಹಸ್ಯವಾಗಿ ಮದುವೆ ಆದರು ಎನ್ನಲಾಗಿತ್ತು. ಇಬ್ಬರೂ 1985ರಿಂದ 1988ರವರೆಗೆ ಸಂಸಾರ ನಡೆಸಿದರು ಎಂದು ಕೂಡ ಹೇಳಲಾಗಿದೆ. ಈ ಸಮಯದಲ್ಲಾಗಲೇ ಮಿಥುನ್ ಯೋಗೀತಾ ಬಾಲಿ ಅವರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದರು.
1987ರಲ್ಲಿ ಬೋನಿ ಕಪೂರ್ ಅವರು ಶ್ರೀದೇವಿಗೆ ಹತ್ತಿರವಾದರು. ಆಗ ಮಿಥುನ್ ಹಾಗೂ ಶ್ರೀದೇವಿ ವಿಚಾರ ಹೊರಬಿತ್ತು. ನಂತರ ಬೋನಿ ಕಪೂರ್ ಮತ್ತು ಮಿಥುನ್ ಚಕ್ರವರ್ತಿ ಅವರ ಸ್ನೇಹವೂ ಹಳಸಿತು ಎಂದು ಹೇಳಲಾಗಿದೆ. ಶ್ರೀದೇವಿ 1988ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು ಮತ್ತು ಮಿಥುನ್‌ನಿಂದ ಬೇರ್ಪಟ್ಟರು ಎಂದು ವರದಿಗಳು ಈ ಮೊದಲು ಹರಿದಾಡಿದ್ದವು.
ಇದನ್ನೂ ಓದಿ: ಕನ್ನಡ ಸಿನಿಮಾಗೆ ‘ಕಮಲ್ ಶ್ರೀದೇವಿ’ ಟೈಟಲ್; ಇಂಥ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ಏನು?
ಈ ವಿಚಾರವನ್ನು ಮಿಥುನ್ ನೇರವಾಗಿ ಒಪ್ಪಿಕೊಳ್ಳಲೂ ಇಲ್ಲ, ಅಲ್ಲಗಳೆಯಲೂ ಇಲ್ಲ ಅನ್ನೋದು ವಿಶೇಷ. ‘ವೈರಲ್ ಸುದ್ದಿಯಲ್ಲಿ ಕೆಲವು ಸತ್ಯ, ಕೆಲವು ಸುಳ್ಳು’ ಎಂದು ಮಿಥುನ್ ಚಕ್ರವರ್ತಿ ಅವರು ಹೇಳಿದ್ದರು. ಆ ಬಳಿಕ ಶ್ರಿದೇವಿ ಅವರು ಬೋನಿ ಕಪೂರ್ ಅನ್ನು ಮದುವೆ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







