AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chocolate Day 2026: ನಿಮ್ಮ ಸಂಗಾತಿಗಾಗಿ ಪ್ರೀತಿಯಿಂದ ಮನೆಯಲ್ಲೇ ತಯಾರಿಸಿ ಸ್ಪೆಷಲ್ ಚಾಕೊಲೇಟ್;‌ ಇಲ್ಲಿದೆ ರೆಸಿಪಿ

Valentine’s Week 2026: ವ್ಯಾಲೆಂಟೈನ್‌ ವೀಕ್‌ನ ಮೂರನೇ ದಿನ ಚಾಕೋಲೆಟ್‌ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಹೆಚ್ಚಿನವರು ಮಾರುಕಟ್ಟೆಯಿಂದ ದುಬಾರಿ ಚಾಕೊಲೇಟ್‌ಗಳನ್ನು ಖರೀದಿಸಿ, ತಮ್ಮ ಪ್ರೀತಿಯ ವ್ಯಕ್ತಿಗೆ ಗಿಫ್ಟ್‌ ನೀಡುತ್ತಾರೆ. ಇದರ ಬದಲು ಸ್ಪೆಷಲ್‌ ಆಗಿ ಮನೆಯಲ್ಲಿಯೇ ರುಚಿಕರವಾದ ಮತ್ತು ಆರೋಗ್ಯಕರವಾದ ಚಾಕೊಲೇಟ್‌ಗಳನ್ನು ತಯಾರಿಸಿ, ನಿಮ್ಮ ಸಂಗಾತಿಗೆ ನೀಡಬಹುದು. ಇಲ್ಲಿದೆ ನಿಮಗಾಗಿ ಚಾಕೊಲೇಟ್‌ ರೆಸಿಪಿ.

Chocolate Day 2026: ನಿಮ್ಮ ಸಂಗಾತಿಗಾಗಿ ಪ್ರೀತಿಯಿಂದ ಮನೆಯಲ್ಲೇ ತಯಾರಿಸಿ ಸ್ಪೆಷಲ್ ಚಾಕೊಲೇಟ್;‌ ಇಲ್ಲಿದೆ ರೆಸಿಪಿ
ಚಾಕೊಲೇಟ್‌ ರೆಸಿಪಿImage Credit source: unsplash
ಮಾಲಾಶ್ರೀ ಅಂಚನ್​
| Edited By: |

Updated on:Feb 08, 2026 | 2:42 PM

Share

ಫೆಬ್ರವರಿಯನ್ನು ಪ್ರೀತಿ ಮತ್ತು ಪ್ರಣಯದ ತಿಂಗಳು ಎಂದೇ ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಫೆಬ್ರವರಿ 7 ರಂದು ರೋಸ್‌ ಡೇಯೊಂದಿಗೆ ಪ್ರೇಮಿಗಳ ವಾರ ಪ್ರಾರಂಭವಾಗುತ್ತದೆ. ಫೆಬ್ರವರಿ 9 ರಂದು ಚಾಕೊಲೇಟ್ ದಿನವನ್ನು (Chocolate Day) ಆಚರಿಸಲಾಗುತ್ತದೆ. ಈ ದಿನದಂದು, ಜನರು ತಮ್ಮ ಸಂಗಾತಿಗೆ ತರಹೇವಾರಿ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಮಾರುಕಟ್ಟೆಯಲ್ಲಿ ಸಿಗುವಂತಹ ಹಲವು ರೀತಿಯ ಚಾಕೊಲೇಟ್‌ಗಳನ್ನೇ ಗಿಫ್ಟ್‌ ಆಗಿ ನೀಡುತ್ತಾರೆ. ಈ ಬಾರಿಯ ಚಾಕೊಲೇಟ್‌ ಡೇ ಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದರೆ, ನೀವು ನಿಮ್ಮ ಪ್ರೇಮಿಗಾಗಿ ಪ್ರೀತಿಯಿಂದ ಮನೆಯಲ್ಲಿಯೇ ಚಾಕೊಲೇಟ್‌ ತಯಾರಿಸಬಹುದು.  ಖಂಡಿತವಾಗಿಯೂ ಇದು ಯಾವುದೇ ದುಬಾರಿ ಚಾಕೊಲೇಟ್‌ಗಳಿಗಿಂತಲೂ ತುಂಬಾನೇ ಸ್ಪೆಷಲ್‌ ಆಗಿರುತ್ತದೆ.

ಚಾಕೊಲೇಟ್‌ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

ಕೋಕೋ ಪೌಡರ್ ಅರ್ಧ ಕಪ್, ಹಾಲಿನ ಪುಡಿ, 2 ಚಮಚ ಬೆಣ್ಣೆ, ಅರ್ಧ ಕಪ್ ಪುಡಿ ಸಕ್ಕರೆ, ಅರ್ಧ ಟೀ ಚಮಚ ವೆನಿಲ್ಲಾ ಎಸೆನ್ಸ್‌ ಮತ್ತು ನೀರು.

ಮನೆಯಲ್ಲಿ ಚಾಕೊಲೇಟ್ ತಯಾರಿಸುವುದು ಹೇಗೆ?

  • ಮೊದಲು, ಸಕ್ಕರೆ ಪಾಕವನ್ನು ತಯಾರಿಸಿ. ಇದನ್ನು ಮಾಡಲು, ಒಂದು ಪ್ಯಾನ್‌ನಲ್ಲಿ 1/4 ಕಪ್ ನೀರು ಮತ್ತು ಸಕ್ಕರೆ ಪುಡಿಯನ್ನು ಸೇರಿಸಿ ಮತ್ತು ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ಸಕ್ಕರೆ ಕರಗಿದ ನಂತರ, ಅದನ್ನು 3-4 ನಿಮಿಷಗಳ ಕಾಲ ಕುದಿಸಲು ಬಿಡಿ.
  • ಈಗ ತಯಾರಾದ ಈ ಸಿರಪ್‌ಗೆ 2 ಚಮಚ ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೆಣ್ಣೆ ಸಂಪೂರ್ಣವಾಗಿ ಕರಗುವವರೆಗೆ ನಿರಂತರವಾಗಿ ಬೆರೆಸಿಕೊಳ್ಳಿ.
  • ಮಿಶ್ರಣವು ಸ್ವಲ್ಪ ತಣ್ಣಗಾದ ನಂತರ, ಕೋಕೋ ಪುಡಿ ಮತ್ತು ಹಾಲಿನ ಪುಡಿಯನ್ನು ಅದಕ್ಕೆ ಶೋಧಿಸಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಉಂಡೆಗಳಾಗದಂತೆ ನಿರಂತರವಾಗಿ ಮಿಕ್ಸ್‌ ಮಾಡಿಕೊಳ್ಳಿ.
  • ಈಗ ಅರ್ಧ ಟೀ ಚಮಚ ವೆನಿಲ್ಲಾ ಎಸೆನ್ಸ್ ಅನ್ನು ತಯಾರಾದ ಚಾಕೊಲೇಟ್‌ ಮಿಶ್ರಣಕ್ಕೆ ಸೇರಿಸಿ. ಇದು ಚಾಕೊಲೇಟ್‌ಗೆ ಆಹ್ಲಾದಕರ ಪರಿಮಳ ಮತ್ತು ಸುವಾಸನೆಯನ್ನು ನೀಡುತ್ತದೆ.
  • ಈಗ ತಯಾರಾದ ಚಾಕೊಲೇಟ್ ಬ್ಯಾಟರ್ ಅನ್ನು ಸಿಲಿಕಾ ಮೋಲ್ಡ್ (ಅಚ್ಚು) ಅಥವಾ ಯಾವುದೇ ಟ್ರೇಗೆ ಸುರಿದು, ಅದನ್ನು 2-3 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿ. ನೀವು ಈ ಚಾಕೊಲೇಟ್‌ ಮಿಶ್ರಣಕ್ಕೆ ಡ್ರೈಫೂಟ್ಸ್‌, ಚಾಕೋ ಚಿಪ್ಸ್‌ಗಳನ್ನು ಕೂಡಾ ಸೇರಿಸಬಹುದು.
  • ಚಾಕೊಲೇಟ್ ಗಟ್ಟಿಯಾದ ನಂತರ, ಅದನ್ನು ಅಚ್ಚಿನಿಂದ ತೆಗೆದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಚಾಕೊಲೇಟ್ ಸಿದ್ಧ. ಅದನ್ನು ಚೆನ್ನಾಗಿ ಪ್ಯಾಕ್ ಮಾಡಿ ಮತ್ತು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಿ. ‌

ಇದನ್ನೂ ಓದಿ: ವ್ಯಾಲೆಂಟೈನ್ವೀಕ್ನಲ್ಲಿ ಚಾಕೊಲೇಟ್ ಡೇ ಆಚರಿಸುವುದೇಕೆ? ಇದರ ಹಿಂದೆಯೂ ಇದೆ ಕಾರಣ

ಮನೆಯಲ್ಲಿ ತಯಾರಿಸಿದ ಚಾಕೊಲೇಟ್‌ಪ್ರಯೋಜನಗಳೇನು?

ಮನೆಯಲ್ಲೇ ತಯಾರಿಸಿದ ಚಾಕೊಲೇಟ್‌ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಚಾಕೊಲೇಟ್‌ಗಿಂತ ಶುದ್ಧ ಮತ್ತು ಹೆಚ್ಚು ಆರೋಗ್ಯಕರವಾಗಿದೆ. ಇದರಲ್ಲಿ ಯಾವುದೇ ಸಂರಕ್ಷಕಗಳಿರುವುದಿಲ್ಲ. ಮುಖ್ಯವಾಗಿ ದುಬಾರಿ ಚಾಕೊಲೇಟ್‌ಗಿಂತ ನಿಮ್ಮ ಕೈಯಾರೆ ತಯಾರಿಸಿದ ಚಾಕೊಲೇಟ್‌ ತುಂಬಾನೇ ಸ್ಪೆಷಲ್‌ ಆಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:42 pm, Sun, 8 February 26

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ