AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇರುಮುಡಿ’ ಒಟಿಟಿ ಬಿಡುಗಡೆ ಮುಂದೂಡಿಕೆ? ಬ್ಲಾಕ್‌ಬಸ್ಟರ್ ಹಿಟ್ ಬಳಿಕ ನಿರ್ಮಾಪಕರ ಹೊಸ ಪ್ಲಾನ್

ಮಾಸ್ ಮಹಾರಾಜ ರವಿತೇಜ ಅಭಿನಯದ 'ಇರುಮುಡಿ' ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಥಿಯೇಟರ್‌ನಲ್ಲಿ ಸಿನಿಮಾ ಸೂಪರ್ ಹಿಟ್ ಆಗಿರುವ ಹಿನ್ನೆಲೆಯಲ್ಲಿ, ಮುಂಚಿತವಾಗಿ ಯೋಜಿಸಲಾಗಿದ್ದ ನೆಟ್‌ಫ್ಲಿಕ್ಸ್ ಒಟಿಟಿ ಬಿಡುಗಡೆ ದಿನಾಂಕವನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ.

'ಇರುಮುಡಿ' ಒಟಿಟಿ ಬಿಡುಗಡೆ ಮುಂದೂಡಿಕೆ? ಬ್ಲಾಕ್‌ಬಸ್ಟರ್ ಹಿಟ್ ಬಳಿಕ ನಿರ್ಮಾಪಕರ ಹೊಸ ಪ್ಲಾನ್
ಇರುಮುಡಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 10, 2026 | 8:14 AM

Share

ಮಾಸ್ ಮಹಾರಾಜ ರವಿತೇಜ ಅಭಿನಯದ ಇತ್ತೀಚಿನ ಚಿತ್ರ ‘ಇರುಮುಡಿ’ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶಿವ ನಿರ್ವಾಣ ನಿರ್ದೇಶನದ ಈ ಭಕ್ತಿ-ಥ್ರಿಲ್ಲರ್ ಸಿನಿಮಾದಲ್ಲಿ ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ. ಆಗಸ್ಟ್ 21 ರಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಚಿತ್ರವು ತಂದೆ-ಮಗಳ ಭಾವನಾತ್ಮಕ ಸಂಬಂಧ ಹಾಗೂ ಅಯ್ಯಪ್ಪ ಸ್ವಾಮಿಯ ಭಕ್ತಿ ಹಿನ್ನೆಲೆಯ ಕಥಾವಸ್ತುವಿನಿಂದಾಗಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬಿಡುಗಡೆಯಾದ ಮೂರು ವಾರಗಳ ನಂತರವೂ ಹಲವು ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ‘ಇರುಮುಡಿ’, ಈಗಾಗಲೇ 250 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಸಾಲಿಗೆ ಸೇರಿದೆ. ಗ್ರಾಮೀಣ ಭಾಗಗಳಲ್ಲಿ ಜನರು ಟ್ರ್ಯಾಕ್ಟರ್‌ ಮಾಡಿಕೊಂಡು ಚಿತ್ರಮಂದಿರಗಳಿಗೆ ಬರುತ್ತಿರುವುದು ಸಿನಿಮಾದ ಕ್ರೇಜ್‌ಗೆ ಸಾಕ್ಷಿಯಾಗಿದೆ.

ಈ ಭರ್ಜರಿ ಯಶಸ್ಸಿನ ನಡುವೆ, ಚಿತ್ರದ ಒಟಿಟಿ (OTT) ಬಿಡುಗಡೆ ಕುರಿತು ಮುಖ್ಯ ಸುದ್ದಿಯೊಂದು ಹೊರಬಿದ್ದಿದೆ. ‘ಇರುಮುಡಿ’ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ದೈತ್ಯ ಒಟಿಟಿ ಸಂಸ್ಥೆ ‘ನೆಟ್‌ಫ್ಲಿಕ್ಸ್’ ಭಾರಿ ಮೊತ್ತಕ್ಕೆ ಕೊಡುಕೊಂಡಿದೆ. ಒಪ್ಪಂದದ ಪ್ರಕಾರ, ಸಿನಿಮಾ ಬಿಡುಗಡೆಯಾದ ನಾಲ್ಕು ವಾರಗಳ ಬಳಿಕ, ಅಂದರೆ ಸೆಪ್ಟೆಂಬರ್ 18 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ ಎನ್ನಲಾಗಿತ್ತು.

ಆದರೆ, ಈಗ ಒಟಿಟಿ ಬಿಡುಗಡೆ ದಿನಾಂಕ ಮುಂದೂಡಲ್ಪಡುವ ಸಾಧ್ಯತೆಯಿದೆ. ಚಿತ್ರಮಂದಿರಗಳಲ್ಲಿ ಇಂದಿಗೂ ಅತ್ಯುತ್ತಮ ಕಲೆಕ್ಷನ್ ಬರುತ್ತವೆ. ಹೀಗಾಗಿ, ಥಿಯೇಟರ್ ಓಟಕ್ಕೆ ಧಕ್ಕೆಯಾಗದಂತೆ ಒಟಿಟಿ ರಿಲೀಸ್ ಅನ್ನು ಮತ್ತಷ್ಟು ದಿನ ತಡೆಹಿಡಿಯಲು ನಿರ್ಮಾಪಕರು ಯೋಜಿಸಿದ್ದಾರೆ. ಈ ಕುರಿತು ನೆಟ್‌ಫ್ಲಿಕ್ಸ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಧಿಕೃತ ದಿನಾಂಕ ಹೊರಬೀಳಲಿದೆ.

ಇದನ್ನೂ ಓದಿ: ‘ಇರುಮುಡಿ’ ಸಿನಿಮಾದಿಂದ ನಟ ರವಿ ತೇಜ ಗಳಿಸಿದ್ದು ಎಷ್ಟು? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರವಿತೇಜ ಮಗಳ ಪಾತ್ರದಲ್ಲಿ ನಟಿಸಿದ ನಕ್ಷತ್ರಾ ತಮ್ಮ ಅಭಿನಯದಿಂದ ಗಮನ ಸೆಳೆದಿದ್ದರೆ, ಸಾಯಿಕುಮಾರ್, ಅಜಯ್ ಘೋಷ್, ರಮೇಶ್ ಇಂದಿರಾ ಮತ್ತು ಸ್ವಸಿಕಾ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ನೀಡಿರುವ ಅದ್ಭುತ ಸಂಗೀತ ಚಿತ್ರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us