ತೆಲುಗು ಸ್ಟಾರ್ ನಟನ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ: ನಿರ್ದೇಶಕ ಯಾರು?
ತಮಿಳು, ತೆಲುಗಿನ ದೊಡ್ಡ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಪರಭಾಷೆಯ ಕೆಲವು ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ಈಗಾಗಲೇ ನಟನೆ ಮಾಡಿದ್ದು, ಬಾಲಿವುಡ್ಗೆ ಪದಾರ್ಪಣೆ ಮಾಡುವ ಬಗ್ಗೆಯೂ ಮಾತುಕತೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಇದೀಗ ರುಕ್ಮಿಣಿ ವಸಂತ್ ಅವರಿಗೆ ತೆಲುಗಿನಲ್ಲಿ ದೊಡ್ಡ ಸಿನಿಮಾ ಒಮದರ ಅವಕಾಶ ಒದಗಿ ಬಂದಿದೆ.

ಮುಖ್ಯಾಂಶಗಳು
- ಕನ್ನಡತಿ ರುಕಮಿಣಿ ವಸಂತ್ ಈಗ ಪ್ಯಾನ್ ಇಂಡಿಯಾ ನಟಿ
- ಪರ ಭಾಷೆಯ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ
- ಇದೀಗ ತೆಲುಗಿನ ಸ್ಟಾರ್ ನಟನ ಸಿನಿಮಾನಲ್ಲಿ ಅವರು ನಟಿಸಲಿದ್ದಾರೆ
ರುಕ್ಮಿಣಿ ವಸಂತ್ ಕನ್ನಡದ ಸ್ಟಾರ್ ನಟಿ. ‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ತಮಿಳು, ತೆಲುಗಿನ ದೊಡ್ಡ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಪರಭಾಷೆಯ ಕೆಲವು ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ಈಗಾಗಲೇ ನಟನೆ ಮಾಡಿದ್ದು, ಬಾಲಿವುಡ್ಗೆ ಪದಾರ್ಪಣೆ ಮಾಡುವ ಬಗ್ಗೆಯೂ ಮಾತುಕತೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ. ಇದೀಗ ರುಕ್ಮಿಣಿ ವಸಂತ್ ಅವರಿಗೆ ತೆಲುಗಿನಲ್ಲಿ ದೊಡ್ಡ ಸಿನಿಮಾ ಒಮದರ ಅವಕಾಶ ಒದಗಿ ಬಂದಿದೆ.
ತೆಲುಗಿನ ಸ್ಟಾರ್ ನಟರುಗಳಲ್ಲಿ ಒಬ್ಬರಾಗಿರುವ ಹಾಗೂ ಅತಿ ಹೆಚ್ಚು ಕೌಟುಂಬಿಕ ಅಭಿಮಾನಿಗಳನ್ನು ಹೊಂದಿರುವ ನಾನಿಯ ಮುಂದಿನ ಸಿನಿಮಾಕ್ಕೆ ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ನಾನಿ ನಟನೆಯ ಭರ್ಜರಿ ಆಕ್ಷನ್ ಸಿನಿಮಾ ‘ದಿ ಪ್ಯಾರಡೈಸ್’ ಇತ್ತೀಚೆಗಷ್ಟೆ ರಿಲೀಸ್ ಆಗಿತ್ತು. ಸಿನಿಮಾಕ್ಕೆ ನಿರೀಕ್ಷಿತ ಪ್ರಶಂಸೆ ದೊರಕಲಿಲ್ಲ. ಆದರೆ ಬಾಕ್ಸ್ ಆಫೀಸ್ನಲ್ಲಿ ಹಿಟ್ ಅಂತೂ ಆಯ್ತು. ‘ದಿ ಪ್ಯಾರಡೈಸ್’ ನಾನಿಯ ಮೊಟ್ಟ ಮೊದಲ ಆಕ್ಷನ್ ಸಿನಿಮಾ ಆಗಿತ್ತು.
ಆಕ್ಷನ್ ಸಿನಿಮಾದ ಬಳಿಕ ನಾನಿ ಮತ್ತೆ ತಮ್ಮ ನೈಜ ಜಾನರ್ ಆಗಿರುವ ರೊಮ್ಯಾಂಟಿಕ್ ಕಾಮಿಡಿಗೆ ಮರಳುತ್ತಿದ್ದು, ಅವರ ಮುಂದಿನ ಸಿನಿಮಾಕ್ಕೆ ರುಕ್ಮಿಣಿ ವಸಂತ್ ನಾಯಕಿ. ನಾನಿಯ ಮುಂದಿನ ಸಿನಿಮಾ ಸರಳವಾದ ಪ್ರೇಮಕತೆ ಆಗಿದ್ದು, ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾ ‘96’ ನಿರ್ದೇಶನ ಮಾಡಿದ್ದ ಪ್ರೇಮ್ ಕುಮಾರ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ವಿಶೇಷ. ರುಕ್ಮಿಣಿ ಅವರ ಸಹಜವಾದ ನಟನೆ ಮತ್ತು ಸೌಂದರ್ಯದಿಂದಾಗಿ ನಿರ್ದೇಶಕ ಪ್ರೇಮ್ ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರಂತೆ. ರುಕ್ಮಿಣಿ ಅವರಿಗೆ ಇದೊಂದು ಬಹಳ ಒಳ್ಳೆಯ ಅವಕಾಶ ಆಗಿದ್ದು, ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:‘ಪ್ರೇಮದ ಊರಲಿ’ ಸಿನಿಮಾನಲ್ಲಿ ನಟಿಸಬೇಕಿತ್ತು ನಟಿ ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಜೂ ಎನ್ಟಿಆರ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ಮಲಯಾಳಂನಲ್ಲಿ ನಿವಿನ್ ಪೋಲಿ ನಟಿಸುತ್ತಿರುವ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ‘ಮಂಗಳ ಗೌರಿ’ ಹೆಸರಿನ ಹಾಸ್ಯಪ್ರಧಾನ ಥ್ರಿಲ್ಲರ್ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದಾರೆ. ತಮಿಳಿನ ಒಂದು ಸಿನಿಮಾವನ್ನು ಸಹ ರುಕ್ಮಿಣಿ ವಸಂತ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Tue, 13 October 26




