AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲು ಪ್ರೀತಿಯಿಂದ ಹಾಕಿಸಿಕೊಂಡಿದ್ದ ಟ್ಯಾಟೂ ಅಳಿಸಿ ಹಾಕಿದ ಸಮಂತಾ

Samantha Ruth Prabhu: ನಟಿ ಸಮಂತಾ ಋತ್ ಪ್ರಭು ಬಹಳ ಇಷ್ಟಪಟ್ಟು ಹಾಕಿಸಿದ್ದ ಟ್ಯಾಟೂ ಅನ್ನು ಕೊನೆಗೂ ಅಳಿಸಿಹಾಕಿದ್ದಾರೆ. ಸಮಂತಾ ಋತ್ ಪ್ರಭು ವೃತ್ತಿ ಜೀವನಕ್ಕೆ ಹಾಗೂ ಖಾಸಗಿ ಜೀವನದಲ್ಲಿಯೂ ಅತ್ಯಂತ ಮಹತ್ವ ಹೊಂದಿದ್ದ ಸಿನಿಮಾದ ಹೆಸರನನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ವಿಚ್ಛೇದನದ ಬಳಿಕವೂ ಅದನ್ನು ತೆಗೆದಿರಲಿಲ್ಲ. ಆದರೆ ಈಗ ಅದನ್ನು ತೆಗೆದು ಹಾಕಿದ್ದಾರೆ.

ಬಲು ಪ್ರೀತಿಯಿಂದ ಹಾಕಿಸಿಕೊಂಡಿದ್ದ ಟ್ಯಾಟೂ ಅಳಿಸಿ ಹಾಕಿದ ಸಮಂತಾ
Samantha Ruth Prabhu
ಮಂಜುನಾಥ ಸಿ.
|

Updated on: Jun 07, 2025 | 3:07 PM

Share

ನಟಿ ಸಮಂತಾ ಋತ್ ಪ್ರಭು, ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದು ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಸಮಂತಾ, ತಮ್ಮ ಮದುವೆಗೆ ಧರಿಸಿದ್ದ ಉಡುಪನ್ನು ಮರು ವಿನ್ಯಾಸಗೊಳಿಸಿ ವಾರಿಯರ್ ರೀತಿಯ ಉಡುಗೆ ಮಾಡಿಸಿಕೊಂಡಿದ್ದಾರೆ. ಮದುವೆಗೆ ಮುಂಚೆ ಇದ್ದ ಅನೇಕ ವಸ್ತುಗಳೊಟ್ಟಿಗೆ ತಮ್ಮ ಸೆಂಟಿಮೆಂಟ್ ಅನ್ನು ಅಂತ್ಯಗೊಳಿಸಿದ್ದಾರೆ. ಆದರೆ ಮದುವೆಗೆ ಮುಂಚೆ ಹಾಕಿಸಿಕೊಂಡಿದ್ದ ಒಂದು ಟ್ಯಾಟೂ ಅನ್ನು ಮಾತ್ರ ತೆಗೆಯದೆ ಹಾಗೆಯೇ ಉಳಿಸಿಕೊಂಡಿದ್ದರು. ಇದೀಗ ಅದನ್ನೂ ಅಳಿಸಿ ಹಾಕಿದ್ದಾರೆ.

ಸಮಂತಾ ಋತ್ ಪ್ರಭು, ಚಿತ್ರರಂಗಕ್ಕೆ ಪರಿಚಯಗೊಂಡಿದ್ದು ‘ಏ ಮಾಯ ಚೇಸಾವೆ’ ಸಿನಿಮಾ ಮೂಲಕ. ಅದೇ ಸಿನಿಮಾದಲ್ಲಿ ನಾಗ ಚೈತನ್ಯ ಸಹ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿ ಸಮಂತಾ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಕಾರಣವಾಗಿತ್ತು. ಅಲ್ಲದೆ ಅವರಿಗೆ ನಾಗ ಚೈತನ್ಯ ಸಿಕ್ಕಿದ್ದು ಸಹ ಅದೇ ಸಿನಿಮಾದಿಂದ. ಇದೇ ಕಾರಣಕ್ಕೆ ‘ಏ ಮಾಯ ಚೇಸಾವೆ’ ಸಿನಿಮಾ ಮೇಲೆ ಸಮಂತಾಗೆ ವಿಶೇಷ ಪ್ರೀತಿ. ಆ ಸಿನಿಮಾದ ಹೆಸರನ್ನು ನಟಿ ಸಮಂತಾ ತಮ್ಮ ಬೆನ್ನ ಮೇಲೆ, ಕತ್ತಿನ ಕೆಳಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದರು.

ವಿಚ್ಛೇದನ ಆದ ಬಳಿಕ ಬೇರೆ ಕೆಲವು ಟ್ಯಾಟೂಗಳನ್ನು ಅಳಿಸಿ ಹಾಕಿದ್ದ ಸಮಂತಾ, ಇದೀಗ ‘ಏ ಮಾಯ ಚೇಸಾವೆ’ ಟ್ಯಾಟೂ ಅನ್ನು ಸಹ ಅಳಿಸಿ ಹಾಕಿದ್ದಾರೆ. ಕತ್ತಿನ ಕೆಳ ಭಾಗದಲ್ಲಿ ‘ವೈಎಂಸಿ’ (ಯೇ ಮಾಯ ಚೇಸಾವೆ) ಎಂದು ಟ್ಯಾಟೂ ಹಾಕಿಸಿಕೊಂಡಿದ್ದರು. ಸಮಂತಾರ ಇತ್ತೀಚೆಗಿನ ಕೆಲ, ಫೋಟೊ ವಿಡಿಯೋಗಳಲ್ಲಿಯೂ ಸಹ ಆ ಟ್ಯಾಟೂ ಕಾಣಿಸಿತ್ತು. ಆದರೆ ಇದೀಗ ಆ ಟ್ಯಾಟೂ ಸಮಂತಾ ಬೆನ್ನ ಮೇಲೆ ಇಲ್ಲ. ಇನ್​ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಸಮಂತಾರ ಚಿತ್ರ ನೋಡಿದ ಕೆಲವು ನೆಟ್ಟಿಗರು ಇದನ್ನು ಗುರುತಿಸಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Video: ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್

2022 ರಲ್ಲಿ ಅಂದರೆ ನಾಗ ಚೈತನ್ಯ ಜೊತೆ ವಿಚ್ಛೇದನ ಆದ ಬಳಿಕ ಒಮ್ಮೆ ಅಭಿಮಾನಿಗಳೊಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಸಂವಾದ ಮಾಡಿದ್ದ ಸಮಂತಾಗೆ, ಈಗಿರುವ ಸಮಂತಾ, ಹತ್ತು ವರ್ಷದ ಹಿಂದೆ ಇದ್ದ ಸಮಂತಾಗೆ ಸಲಹೆ ಕೊಡುವುದಾದರೆ ಏನೆಂದು ಸಲಹೆ ಕೊಡುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿದ್ದ ನಟಿ. ‘ಯಾವುದೇ ಕಾರಣಕ್ಕೆ ಟ್ಯಾಟೂಗಳನ್ನು ಹಾಕಿಸಿಕೊಳ್ಳಬೇಡ, ಯಾವುದೇ ಕಾರಣಕ್ಕೆ ಬೇಡ’ ಎಂದು ಸಲಹೆ ಕೊಡುತ್ತೇನೆ ಎಂದಿದ್ದರು. ಆ ಮೂಲಕ ‘ಏ ಮಾಯ ಚೇಸಾವೆ’ ಟ್ಯಾಟೂ ಹಾಗೂ ನಾಗ ಚೈತನ್ಯ ಕುರಿತಾಗಿ ಟ್ಯಾಟೂ ಹಾಕಿಸಿದ್ದು ದೊಡ್ಡ ತಪ್ಪು ಎಂದು ಪರೋಕ್ಷವಾಗಿ ಹೇಳಿದ್ದರು.

ವಿಚ್ಛೇದನದ ಬಳಿಕ ನಾಗ ಚೈತನ್ಯ ಈಗಾಗಲೇ ನಟಿ ಶೋಭಿತಾ ಜೊತೆಗೆ ವಿವಾಹವಾಗಿದ್ದಾರೆ. ನಟಿ ಸಮಂತಾ ಹೆಸರು ನಿರ್ದೇಶಕನ ಜೊತೆಗೆ ಹೆಸರು ಕೇಳಿ ಬರುತ್ತಿದೆ. ರಾಜ್ ಜೊತೆಗೆ ಸಮಂತಾ ಸಾಕಷ್ಟು ಸುತ್ತಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
ಮನೆಯ ಎದುರು ಕುರ್ಚಿ ಮೇಲೆ ಕುಳಿತಿದ್ಧ ವೃದ್ಧೆ ಮೇಲೆ ಕೋತಿಗಳ ದಾಳಿ
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!