AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಗಾನ್’ ಹೆಸರು ಹೇಳಿ ‘ಟಾಕ್ಸಿಕ್’ ಪರ ಅಜನೀಶ್ ಲೋಕನಾಥ್ ಮಾತು

Ajaneesh Loknath about Toxic: ‘ಕಾಂತಾರ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್, ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಮಾತನಾಡಿದ್ದು, ಸಿನಿಮಾಕ್ಕೆ ಬರುತ್ತಿರುವ ನೆಗೆಟಿವ್ ಕಮೆಂಟುಗಳಿಗೆ ಠಕ್ಕರ ಕೊಟ್ಟಿದ್ದಾರೆ. ‘ಟಾಕ್ಸಿಕ್’ ಸಿನಿಮಾಕ್ಕೆ ಬೆಂಬಲಿಸಿರುವ ಅಜನೀಶ್ ಲೋಕನಾಥ್, ಹಿಂದಿಯ ‘ಲಗಾನ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದ್ದಾರೆ.

‘ಲಗಾನ್’ ಹೆಸರು ಹೇಳಿ ‘ಟಾಕ್ಸಿಕ್’ ಪರ ಅಜನೀಶ್ ಲೋಕನಾಥ್ ಮಾತು
Toxic Lagaan
ಮಂಜುನಾಥ ಸಿ.
|

Updated on: Sep 01, 2026 | 4:58 PM

Share

ಮುಖ್ಯಾಂಶಗಳು

  • ಟಾಕ್ಸಿಕ್ ಬಗ್ಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತು
  • ಟಾಕ್ಸಿಕ್ ಸಿನಿಮಾಕ್ಕೆ ಅಜನೀಶ್ ಬೆಂಬಲ ವ್ಯಕ್ತಪಡಿಸಿದ್ದಾರೆ.
  • ‘ಲಗಾನ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದ್ದಾರೆ ಅಜನೀಶ್

ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ಸಿನಿಮಾ ಬಿಡುಗಡೆ ಆಗಿ ವಾರವಾಗುತ್ತಾ ಬಂದಿದೆ. ಸಿನಿಮಾ, ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಮೊದಲ ದಿನವಂತೂ ದಾಖಲೆಯ ಗಳಿಕೆಯನ್ನೇ ಸಿನಿಮಾ ಮಾಡಿದೆ. ಆದರೆ ಅಲ್ಲಲ್ಲಿ ಸಿನಿಮಾದ ಬಗ್ಗೆ ನೆಗೆಟಿವ್ ಕಮೆಂಟುಗಳ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸಿನಿಮಾದ ಪರವಾಗಿಯೂ ಸಾಕಷ್ಟು ಮಂದಿ ಮಾತನಾಡುತ್ತಿದ್ದಾರೆ. ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಇನ್ನೂ ಹಲವಾರು ಮಂದಿ ಸೆಲೆಬ್ರಿಟಿಗಳು ಸಹ ಸಿನಿಮಾದ ಪರವಾಗಿ ಮಾತನಾಡಿದ್ದಾರೆ. ಇದೀಗ ‘ಕಾಂತಾರ’, ‘ಮಹಾರಾಜ’ ಮುಂತಾದ ಚಿತ್ರಗಳ ಮೂಲಕ ಹೆಸರು ಮಾಡಿರುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ‘ಟಾಕ್ಸಿಕ್’ ಸಿನಿಮಾದ ಬೆಂಬಲಕ್ಕೆ ನಿಂತಿದ್ದು, ಆಮಿರ್ ಖಾನ್ ನಟನೆಯ ‘ಲಗಾನ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿ ‘ಟಾಕ್ಸಿಕ್’ ಸಿನಿಮಾಕ್ಕೆ ಬೆಂಬಲಿಸಿದ್ದಾರೆ.

ಅಜನೀಶ್ ಅವರು ಟ್ವಿಟ್ಟರ್ (ಎಕ್ಸ್) ಸಿನಿಮಾದ ಬಗ್ಗೆ ಸುದೀರ್ಘವಾದ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ವಿಮರ್ಶೆಗಳನ್ನು ಗಮನಿಸದೆ ‘ಟಾಕ್ಸಿಕ್’ ಚಿತ್ರವನ್ನು ವೀಕ್ಷಿಸುವಂತೆ ಕೋರಿದ್ದಾರೆ. ‘ಕೇವಲ ವಿಮರ್ಶೆಗಳನ್ನು ಓದಬೇಡಿ, ಸಿನಿಮಾವನ್ನು ಅನುಭವಿಸಿ. ನಾನು ‘ಟಾಕ್ಸಿಕ್’ ನೋಡಿದೆ ಮತ್ತು ನನಗೆ ಅದು ಇಷ್ಟವಾಯಿತು’ ಎಂದು ಬರೆದಿರುವ ಅಜನೀಶ್, ‘ಜನರು ಥಿಯೇಟರ್‌ಗಳಿಗೆ ಹೋಗಿ ಇದನ್ನು ವೀಕ್ಷಿಸಬೇಕು ಎಂದು ನಾನು ಭಾವಿಸುತ್ತೇನೆ. ಸಿನಿಮಾ ಎಂಬುದು ವೈಯಕ್ತಿಕ ಅನುಭವ. ನನ್ನ ಅಭಿರುಚಿ, ನನ್ನ ಆಲೋಚನಾ ಕ್ರಮ ಮತ್ತು ನನ್ನ ಅನುಭವವು ಬೇರೊಬ್ಬರಿಗಿಂತ ಸಂಪೂರ್ಣವಾಗಿ ಭಿನ್ನವಾಗಿರಬಹುದು. ವಿಮರ್ಶೆಗಳು ನಕಾರಾತ್ಮಕವಾಗಿದ್ದರೂ ನಾನು ಇಷ್ಟಪಟ್ಟ ಹಲವು ಚಿತ್ರಗಳನ್ನು ಕಳೆದ ವರ್ಷಗಳಲ್ಲಿ ನೋಡಿದ್ದೇನೆ, ಹಾಗೆಯೇ ಕೆಟ್ಟ ವಿಮರ್ಶೆಗಳಿಂದಾಗಿ ನಿಜಕ್ಕೂ ಒಳ್ಳೆಯದಾಗಿದ್ದ ಕೆಲವು ಚಿತ್ರಗಳನ್ನು ಕಳೆದುಕೊಂಡಿದ್ದೇನೆ’ ಎಂದಿದ್ದಾರೆ.

ಸಿನಿಮಾ ವಿಮರ್ಶೆ ಮಾಡುವಾಗ ‘ಜವಾಬ್ದಾರಿಯುತ’ರಾಗಿ ವಿಮರ್ಶಿಸುವಂತೆ ಕೇಳಿಕೊಂಡಿರುವ ಅವರು, ‘ಒಂದು ಸಿನಿಮಾ ಚೆನ್ನಾಗಿ ಪ್ರದರ್ಶನಗೊಳ್ಳದಿದ್ದಾಗ, ಕೇವಲ ನಿರ್ಮಾಪಕರು ಅಥವಾ ನಟರು ಮಾತ್ರ ಸಂಕಷ್ಟಕ್ಕೆ ಸಿಲುಕುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡುವ ನೂರಾರು ತಂತ್ರಜ್ಞರು ಮತ್ತು ಸಿಬ್ಬಂದಿ ವರ್ಗದವರು ಕೂಡ ಹಲವು ವರ್ಷಗಳವರೆಗೆ ಇದರಿಂದ ತೊಂದರೆ ಅನುಭವಿಸುತ್ತಾರೆ. ಸಿನಿಮಾವನ್ನು ನೋಡದೆ ಯಾವುದೇ ನಿರ್ಧಾರಕ್ಕೆ ಬಂದು ಇತರರ ಮೇಲೆ ಪ್ರಭಾವ ಬೀರಬೇಡ’ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ:‘ಇರುಮುಡಿ’ ಸಿನಿಮಾ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ‘ಟಾಕ್ಸಿಕ್’ ಡಿಸ್ಟ್ರಿಬ್ಯೂಟರ್

‘ಟಾಕ್ಸಿಕ್’ ಬಗ್ಗೆ ಹೇಳುವುದಾದರೆ, ನನಗೆ ಈ ಪ್ರಯತ್ನ ಮತ್ತು ವಿಶೇಷವಾಗಿ ಯಶ್ ಅವರ ಅಭಿನಯ ತುಂಬಾನೇ ಇಷ್ಟವಾಯಿತು. ಇಂತಹ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ನಾನು ಅವರನ್ನು ನಿಜಕ್ಕೂ ಮೆಚ್ಚುತ್ತೇನೆ. ಹೌದು, ನನಗೆ ಸರಿಹೋಗದ ಕೆಲವು ಸಣ್ಣಪುಟ್ಟ ವಿಷಯಗಳಿದ್ದವು, ಆದರೆ ಅವುಗಳನ್ನು ಸುಲಭವಾಗಿ ಕಡೆಗಣಿಸಬಹುದು. ಒಟ್ಟಾರೆಯಾಗಿ, ಇದು ಅತ್ಯಂತ ಒಳ್ಳೆಯ ಸಿನಿಮಾ’ ಎಂದು ಅಜನೀಶ್ ಬರೆದಿದ್ದಾರೆ.

ಅದೇ ಟ್ವೀಟ್​​ನಲ್ಲಿ ಆಮಿರ್ ಖಾನ್ ನಟನೆಯ ಕಲ್ಟ್ ಸಿನಿಮಾ ‘ಲಗಾನ್’ ಅನ್ನು ಪ್ರಸ್ತಾಪಿಸಿರುವ ಅಜನೀಶ್ ಲೋಕನಾಥ್, ‘25 ವರ್ಷಗಳ ಹಳೆಯ ಚಿತ್ರವೊಂದರ ಕುರಿತಾದ ಆಲೋಚನೆ. 25 ವರ್ಷಗಳ ಹಿಂದೆ ಬಿಡುಗಡೆಯಾಗಿ, ಈಗ 25ನೇ ವರ್ಷದ ಸಂಭ್ರಮಕ್ಕಾಗಿ ಮರುಬಿಡುಗಡೆಗೊಂಡಿರುವ ಒಂದು ಶ್ರೇಷ್ಠ ಚಿತ್ರದ ಟ್ರೇಲರ್ ಅನ್ನು ನಾನು ನೋಡಿದೆ. ಒಂದು ವೇಳೆ ಇದು ಇಂದು ಬಿಡುಗಡೆಗೊಂಡಿದ್ದರೆ, ಜನರು ಅದಕ್ಕೂ ಸಹ ‘ಲ್ಯಾಗ್’, ‘ಬೋರಿಂಗ್’ ಎಂದು ಕಾಮೆಂಟ್ ಮಾಡುತ್ತಿದ್ದರು ಮತ್ತು ಕಥೆಯನ್ನು ‘ಅಲ್ಲಿ ಒಂದು ಮ್ಯಾಚ್ ಇರುತ್ತೆ, ಭಾರತೀಯರು ಬ್ರಿಟಿಷರಿಗೆ ಸವಾಲು ಹಾಕುತ್ತಾರೆ, ಮ್ಯಾಚ್ ನಡೆಯುತ್ತೆ – ಅಷ್ಟೇ’ ಎಂದು ಹಗುರವಾಗಿ ತಳ್ಳಿಹಾಕುತ್ತಿದ್ದರು. ಕೇವಲ ಬೇಜವಾಬ್ದಾರಿ ಅಭಿಪ್ರಾಯಗಳಿಂದಾಗಿ ನಾವು ನಿಜಕ್ಕೂ ಒಂದು ಮಹಾನ್ ಸಿನಿಮಾವನ್ನು ಕಳೆದುಕೊಳ್ಳುತ್ತಿದ್ದೆವೆ’ ಎಂದಿದ್ದಾರೆ ಅಜನೀಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us