ಗಲ್ಲಿ ಬಾಯ್ ಬೆಡಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್, 2020ಯಲ್ಲಿ ಫುಲ್ ಬ್ಯುಸಿ

ಗಲ್ಲಿ ಬಾಯ್ ಬೆಡಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್, 2020ಯಲ್ಲಿ ಫುಲ್ ಬ್ಯುಸಿ

ಬಾಲಿವುಡ್ ಬ್ಯೂಟಿ ಆಲಿಯಾ ಭಟ್​ಗೆ 2020ಕ್ಕೆ ಹೊಸ ಸಂಚಲನ ಮುಡಿಸೋಕೆ ರೆಡಿಯಾಗಿದ್ದಾರೆ. ಅಂದ್ಹಾಗೆ 2020ಕ್ಕೆ ಆಲಿಯಾ ಭಟ್ ಸಿನಿಮಾಗಳ ಪಟ್ಟಿಯೂ ದೊಡ್ಡದಾಗಿದೆ. ಹೀಗಾಗಿ ಬಾಲಿವುಡ್ ಬ್ಯೂಟಿ ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಸಂಚಲನ ಮೂಡಿಸೋದು ಪಕ್ಕಾ ಆಗಿದೆ.

ಆಲಿಯಾ ಭಟ್.. ಬಾಲಿವುಡ್ ಬ್ಯೂಟಿ.. ಅದ್ಭುತ ಌಕ್ಟಿಂಗ್ ಮೂಲಕ ಬಿಟೌನ್​ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ ಚೆಲುವೆ. ಆಲಿಯಾ ಅಭಿನಯದ ಸಿನಿಮಾಗಳು 2019ರಲ್ಲಿಯೂ ರಿಲೀಸ್ ಆಗಿ ಹಿಟ್ ಲೀಸ್ಟ್ ಸೇರಿವೆ. 2019ರಲ್ಲಿ ಸಕ್ಸಸ್ ಫುಲ್ ನಟಿಮಣಿಯರ ಸಾಲಿಗೆ ಸೇರಿದ್ದ ಆಲಿಯಾ 2020ರಲ್ಲಿಯೂ ಲಕ್ಕಿ ಹೀರೋಹಿನ್ ಆಗಿ ಹೊರ ಹೊಮ್ಮೋ ಭರವಸೆ ಮೂಡಿಸಿದ್ದಾರೆ.

2020ಯಲ್ಲಿ 4 ಸಿನಿಮಾಗಳು ಬೆಳ್ಳಿ ಪರದೆ ಮೇಲೆ:
ಅಂದ್ಹಾಗೆ, 2019ರಲ್ಲಿ ಆಲಿಯಾ ಭಟ್ ಅಭಿನಯಸಿದ್ದ ಗಲ್ಲಿ ಬಾಯ್. ಕಳಂಕ್ ಸ್ಟುಡೆಂಟ್ ಆಫ್ ದಿ ಇಯರ್ ಸಿನಿಮಾಗಳು ಹಿಟ್ ಲಿಸ್ಟ್ ಸೇರಿದ್ವು. ಈಗ 2020ರಲ್ಲಿ ಕೂಡ ಆಲಿಯಾ ಅಭಿನಯಿಸಿರೋ 4 ಸಿನಿಮಾಗಳು ಬೆಳ್ಳಿ ಪರದೆ ಮೇಲೆ ಕಮಾಲ್ ಮಾಡಲಿವೆ.

ಬಾಲಿವುಡ್​ನ ಗಂಗೂ ಬಾಯಿ ಕಾತಿವಾಡಿ ಆಗಿ ಆಲಿಯಾ ವಿಭಿನ್ನ ಅವತಾರದಲ್ಲಿ ಮೋಡಿ ಮಾಡಲಿರೋದು ಒಂದು ಕಡೆಯಾದ್ರೆ. ಇನ್ನೊಂದು ಕಡೆ ಬಾಹುಬಲಿಯ ಮಾಂತ್ರಿಕ ನಿರ್ದೇಶಕ ರಾಜಮೌಳಿ ಌಕ್ಷನ್ ಕಟ್ ಹೇಳ್ತಿರೋ ಆರ್​ಆರ್​ಆರ್ ಸಿನಿಮಾದಲ್ಲಿಯೂ ಆಲಿಯಾ ನಟಿಸ್ತಿದ್ದಾರೆ. ಈ ಸಿನಿಮಾದಲ್ಲೂ ಆಲಿಯಾ ಭಟ್​ಗೆ ಸ್ಪೆಷಲ್ ಇಂಪಾರ್ಟೆನ್ಸ್ ನೀಡಲಾಗಿದ್ದು, ಆರ್​ಆರ್​ಆರ್​ ಮೂಲಕವೂ 2020ರಲ್ಲಿ ಅಬ್ಬರಿಸಲಿದ್ದಾರೆ.

ಇನ್ನು ಬಾಲಿವುಡ್​ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಸಡಕ್ -2 ಸಿನಿಮಾ ಮೂಲಕವೂ ಆಲಿಯಾ ಕಮಾಲ್ ಮಾಡಲಿದ್ದಾರೆ. ಬಹುತೇಕ ಜುಲೈನಲ್ಲಿ ರಿಲೀಸ್ ಆಗಲಿರೋ ಸಡಕ್ ಕೂಡ ಆಲಿಯಾ ಭಟ್​ ಬತ್ತಳಿಕೆಯ ಲಕ್ಕಿ ಸಿನಿಮಾ ಆಗಲಿದೆ. ಇದೆಲ್ಲದರ ಜೊತೆಗೆ ಬಿಗ್ ಬಿ ಅಮಿತಾಭ್ ಬಚ್ಚನ್, ಶಾರುಖ್ ಮತ್ತು ರಣಬೀರ್ ಕಪೂರ್ ಸ್ಪೆಷಲ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರೋ ಬ್ರಹ್ಮಾಸ್ತ್ರ ಸಿನಿಮಾ ಕೂಡ ಆಲಿಯಾ ಪಾಲಿಗೆ ಸ್ಪೆಶಲ್ ಸಿನಿಮಾ ಆಗೋ ಭರವಸೆ ಮೂಡಿಸಿದೆ.

ಬೇರೆ ನಟಿಮಣಿಯರಿಗೆ ಕಂಪೇರ್ ಮಾಡಿದ್ರೆ, ಆಲಿಯಾ ಭಟ್ ನಟಿಸ್ತಿರೋ 4 ಸಿನಿಮಾಗಳು ಕೂಡ ತುಂಬಾ ಸ್ಪೆಷಲ್ ಆಗಿವೆ.. ಒಟ್ನಲ್ಲಿ 2020ರಲ್ಲಿ ಆಲಿಯಾ ಭಟ್ ಪಾಲಿಗೆ ಲಕ್ಕಿ ಸಿನಿಮಾಗಳಾಗಿದ್ದು, ಗಲ್ಲಿ ಬಾಯ್ ಬೆಡಗಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗೋ ಭರವಸೆ ಮೂಡಿಸಿವೆ.

 

Click on your DTH Provider to Add TV9 Kannada