ಜಾಮೀನು ಸಿಗದೇ ಪರದಾಡುತ್ತಿರುವ ಪವಿತ್ರಾ ಗೌಡ; ಡಿ.3ಕ್ಕೆ ಅರ್ಜಿ ವಿಚಾರಣೆ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಅವರಿಗೆ ಈವರೆಗೂ ಜಾಮೀನು ಸಿಕ್ಕಿಲ್ಲ. ಜೈಲು ಸೇರಿ 5 ತಿಂಗಳು ಕಳೆದಿದ್ದರೂ ಕೂಡ ಅವರಿಗೆ ಜಾಮೀನು ಪಡೆಯಲು ಸಾಧ್ಯವಾಗಿಲ್ಲ. ದರ್ಶನ್, ಪವಿತ್ರಾ ಗೌಡ, ನಾಗರಾಜ್​ ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.

ಜಾಮೀನು ಸಿಗದೇ ಪರದಾಡುತ್ತಿರುವ ಪವಿತ್ರಾ ಗೌಡ; ಡಿ.3ಕ್ಕೆ ಅರ್ಜಿ ವಿಚಾರಣೆ
ಪವಿತ್ರಾ ಗೌಡ, ರೇಣುಕಾ ಸ್ವಾಮಿ
Follow us
ಮದನ್​ ಕುಮಾರ್​
|

Updated on: Nov 29, 2024 | 8:49 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ ಅವರಿಗೆ ಈತನಕ ಜಾಮೀನು ಸಿಕ್ಕಿಲ್ಲ. ಪರಪ್ಪನ ಅಗ್ರಹಾರ ಜೈಲು ಸೇರಿ ಐದು ತಿಂಗಳುಗಳು ಕಳೆದಿದ್ದರೂ ಕೂಡ ಅವರಿಗೆ ಜಾಮೀನು ಪಡೆಯಲು ಸಾಧ್ಯವಾಗಿಲ್ಲ. ಪವಿತ್ರಾ ಗೌಡ, ದರ್ಶನ್, ನಾಗರಾಜ್​ ಸೇರಿದಂತೆ ಈ ಕೇಸ್​ಗೆ ಸಂಬಂಧಿಸಿದ ಪ್ರಮುಖ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಇಂದು (ನವೆಂಬರ್​ 29) ಕೂಡ ಹೈಕೋರ್ಟ್​ನಲ್ಲಿ ವಾದ ಮಂಡನೆ ಆಗಿದೆ. ಆದರೆ ವಿಚಾರಣೆಯನ್ನು ಡಿಸೆಂಬರ್​ 3ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಎ2 ಆಗಿರುವ ದರ್ಶನ್ ಪರ ವಕೀಲರಾದ ಸಿ.ವಿ. ನಾಗೇಶ್ ಅವರು ಈ ಕೇಸ್​ನ ತನಿಖೆಯಲ್ಲಿ ಇರುವ ಕೆಲವು ಲೋಪಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ದರ್ಶನ್ ಮ್ಯಾನೇಜರ್​ ನಾಗರಾಜ್​ ಪರ ವಕೀಲ ಸಂದೇಶ್ ಚೌಟ ಅವರು ವಾದ ಮಾಡಿದ್ದಾರೆ. ಎ1 ಪವಿತ್ರಾ ಗೌಡ ಅವರಿಗೆ ಸಂಬಂಧಿಸಿದಂತೆ ಹೈಕೋರ್ಟ್​ನಲ್ಲಿ ವಾದ ಮಂಡನೆ ಆಗುವುದು ಇನ್ನೂ ಬಾಕಿ ಇದೆ.

ದರ್ಶನ್, ನಾಗರಾಜ್​ ಪರ ವಕೀಲರು ಜಾಮೀನಿಗಾಗಿ ವಾದ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಡಿಸೆಂಬರ್​ 3ರಂದು ಎಸ್​ಪಿಪಿ ವಾದ ಮಂಡನೆ ಮಾಡುವ ಸಾಧ್ಯತೆ ಇದೆ. ಡಿ.3ರಂದು ಹೈಕೋರ್ಟ್​ ತೀರ್ಪು ನೀಡಬಹುದು ಅಥವಾ ಆದೇಶ ಕಾಯ್ದಿರಿಸುವ ಸಾಧ್ಯತೆ ಇದೆ. ಪವಿತ್ರಾ ಗೌಡ ಅವರು ಜಾಮೀನು ಸಿಗುತ್ತೋ ಇಲ್ಲವೋ ಎಂಬ ಚಿಂತೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಅವರು ಜೈಲು ವಾಸ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಬಂತು ದರ್ಶನ್ ಹಾಡು; ಕುಣಿದಾಡಿದ ರಜತ್

ದರ್ಶನ್​ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದೆ. ಬಳ್ಳಾರಿ ಜೈಲಿನಲ್ಲಿ ಇದ್ದಾಗ ಅವರಿಗೆ ತೀವ್ರ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ವಿವಿಧ ಪರೀಕ್ಷೆ ಮಾಡಿ ಕೂಡಲೇ ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆ ಎಂದು ವೈದ್ಯರು ಸಲಹೆ ನೀಡಿದ್ದರು. ಹಾಗಾಗಿ ಅವರಿಗೆ ಹೈಕೋರ್ಟ್​ನಲ್ಲಿ ಮಧ್ಯಂತರ ಜಾಮೀನು ನೀಡಲಾಯಿತು. ಜಾಮೀನು ಪಡೆದು ಒಂದು ತಿಂಗಳು ಆಗಿದ್ದರೂ ಕೂಡ ದರ್ಶನ್ ಸರ್ಜರಿ ಮಾಡಿಸಿಲ್ಲ. ಈಗ ರೆಗ್ಯುಲರ್​ ಬೇಲ್​ ಪಡೆಯಲು ಅವರ ಪರ ವಕೀಲರು ಹೈಕೋರ್ಟ್​ನಲ್ಲಿ ವಾದ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ಕೆಪಿಸಿಸಿ ಸಂಯುಕ್ತ ಆಶ್ರಯದಲ್ಲಿ ಸಮಾವೇಶ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಸಿದ್ದರಾಮಯ್ಯ ಸರ್ಕಾರಕ್ಕೆ ಹಿಂದೂಗಳನ್ನು ಕಂಡರಾಗಲ್ಲ, ಅಲರ್ಜಿ: ಅಶೋಕ
ಬಾಯ್ಮುಚ್ಚಿಕೊಂಡಿರುವಂತೆ ಬಸನಗೌಡ ಯತ್ನಾಳ್​ರನ್ನು ಎಚ್ಚರಿಸಿದ ರೇಣುಕಾಚಾರ್ಯ
ಬಾಯ್ಮುಚ್ಚಿಕೊಂಡಿರುವಂತೆ ಬಸನಗೌಡ ಯತ್ನಾಳ್​ರನ್ನು ಎಚ್ಚರಿಸಿದ ರೇಣುಕಾಚಾರ್ಯ
ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಅಂಗವಿಕಲರ ಅನುದಾನ ಗ್ಯಾರಂಟಿಗಳಿಗೆ ಬಳಕೆ: ಸರ್ಕಾರದ ವಿರುದ್ಧ ಮತ್ತೊಂದು ಆರೋಪ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ
ಸಾಲ ಸಿಗದಿದ್ದರೆ ರೈತ ಸಂಕಷ್ಟ ಮತ್ತು ಶೋಷಣೆಗೆ ಒಳಗಾಗುತ್ತಾನೆ: ಸಿದ್ದರಾಮಯ್ಯ
ಹಾಸನ ಸಮಾವೇಶಕ್ಕೆ ಅಪಸ್ವರ ಎತ್ತಿದವರಿಗೆ ಹೈಕಮಾಂಡ್​ ಅಂಗಳದಿಂದಲೇ ಸ್ಪಷ್ಟನೆ
ಹಾಸನ ಸಮಾವೇಶಕ್ಕೆ ಅಪಸ್ವರ ಎತ್ತಿದವರಿಗೆ ಹೈಕಮಾಂಡ್​ ಅಂಗಳದಿಂದಲೇ ಸ್ಪಷ್ಟನೆ
ಕಾಂಗ್ರೆಸ್ ಸೇರುವಾಗ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಯೋಗೇಶ್ವರ್
ಕಾಂಗ್ರೆಸ್ ಸೇರುವಾಗ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿರಲಿಲ್ಲ: ಯೋಗೇಶ್ವರ್
ಜೈಲಿನಲ್ಲಿ ಕಣ್ಣೀರು ಹಾಕಿದ ಶೋಭಾ ಶೆಟ್ಟಿ, ಮನೆ ಮಂದಿಯ ಟಾರ್ಗೆಟ್ ಆದರೆ?
ಜೈಲಿನಲ್ಲಿ ಕಣ್ಣೀರು ಹಾಕಿದ ಶೋಭಾ ಶೆಟ್ಟಿ, ಮನೆ ಮಂದಿಯ ಟಾರ್ಗೆಟ್ ಆದರೆ?
ಒಂದೇ ಓವರ್​ನಲ್ಲಿ 28 ರನ್ ಚಚ್ಚಿದ ಹಾರ್ದಿಕ್ ಪಾಂಡ್ಯ; ವಿಡಿಯೋ ನೋಡಿ
ಒಂದೇ ಓವರ್​ನಲ್ಲಿ 28 ರನ್ ಚಚ್ಚಿದ ಹಾರ್ದಿಕ್ ಪಾಂಡ್ಯ; ವಿಡಿಯೋ ನೋಡಿ
ಎಲ್ಲ ಪಕ್ಷಗಳಂತೆ ಕಾಂಗ್ರೆಸ್​ನಲ್ಲೂ ಭಿನ್ನಮತವಿದೆ: ಸತೀಶ್ ಜಾರಕಿಹೊಳಿ
ಎಲ್ಲ ಪಕ್ಷಗಳಂತೆ ಕಾಂಗ್ರೆಸ್​ನಲ್ಲೂ ಭಿನ್ನಮತವಿದೆ: ಸತೀಶ್ ಜಾರಕಿಹೊಳಿ