AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಡಿಗೆ ಹಣವೇ ಗತಿ, ನಟನೆ ಬಿಟ್ಟು ಊರಿಗೆ ಹೋಗುವ ನಿರ್ಧಾರ: ಅವಕಾಶಗಳಿಲ್ಲ ಎಂದ ದಿಗಂತ್

Diganth Manchale movie: ನಟ ದಿಗಂತ್ ಚಿತ್ರರಂಗಕ್ಕೆ ಕಾಲಿರಿಸಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಿಗಂತ್ ಅವರ ಹೊಸ ಸಿನಿಮಾ ‘ರುದ್ರ ಕಾಲ’ ಸೆಟ್ಟೇರಿದೆ. ಸಿನಿಮಾ ಮುಹೂರ್ತದಲ್ಲಿ ಕನ್ನಡ ಚಿತ್ರರಂಗ, ಇಲ್ಲಿನ ನಟರ ಪರಿಸ್ಥಿತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ದಿಗಂತ್, ತಾವು ನಟನೆ ಬಿಟ್ಟು ಊರಿಗೆ ಹೋಗಿ ಕೃಷಿ ಮಾಡುವ ನಿರ್ಧಾರ ಮಾಡಿದ್ದಾಗಿ ಹೇಳಿದ್ದಾರೆ.

ಬಾಡಿಗೆ ಹಣವೇ ಗತಿ, ನಟನೆ ಬಿಟ್ಟು ಊರಿಗೆ ಹೋಗುವ ನಿರ್ಧಾರ: ಅವಕಾಶಗಳಿಲ್ಲ ಎಂದ ದಿಗಂತ್
Diganth
ಮಂಜುನಾಥ ಸಿ.
|

Updated on: Apr 25, 2026 | 3:39 PM

Share

ನಟ ದಿಗಂತ್ (Diganth) ಕನ್ನಡ ಚಿತ್ರರಂಗದ ಬಲು ಜನಪ್ರಿಯ ನಟ. ಚಿತ್ರರಂಗಕ್ಕೆ ಕಾಲಿರಿಸಿ ಇಪ್ಪತ್ತು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಕೆಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ತೆಲುಗಿನ ಸ್ಟಾರ್ ನಟಿ ಸಮಂತಾರ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಕನ್ನಡದಲ್ಲಿಯೂ ದಿಗಂತ್ ಅವರ ಹೊಸ ಸಿನಿಮಾ ‘ರುದ್ರ ಕಾಲ’ ಸೆಟ್ಟೇರಿದೆ. ಸಿನಿಮಾ ಮುಹೂರ್ತದಲ್ಲಿ ಕನ್ನಡ ಚಿತ್ರರಂಗ, ಇಲ್ಲಿನ ನಟರ ಪರಿಸ್ಥಿತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ದಿಗಂತ್, ತಮಗೆ ಸಹ ಅವಕಾಶಗಳ ಕೊರತೆ ಕಾಡುತ್ತಿದೆ ಎಂದಿದ್ದಾರೆ.

ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವಾರು ನಿರ್ಮಾಪಕರು ಸಿನಿಮಾ ಮಾಡಲು ಭಯ ಪಡುತ್ತಿದ್ದಾರೆ. ಸಿನಿಮಾಗಳು ಗೆಲ್ಲದಂತೆ ಆಗಿವೆ. ಒಟಿಟಿಗಳಂತೂ ಕನ್ನಡ ಸಿನಿಮಾಗಳಿಗೆ ಯಾವ ರೀತಿಯಲ್ಲೂ ಸಹಾಯ ಮಾಡುತ್ತಿಲ್ಲ. ಸ್ವತಃ ನನಗೆ ಅವಕಾಶಗಳ ಕೊರತೆ ಎದುರಾಗಿದ್ದು, ನಟನೆ ಬಿಟ್ಟು ಊರಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಳ್ಳೋಣ ಎನಿಸಿದೆ’ ಎಂದಿದ್ದಾರೆ.

ಇದನ್ನೂ ಓದಿ:ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್

‘ಆರು ತಿಂಗಳ ಹಿಂದೆ ಎರಡು ನಿರ್ಮಾಪಕರು ಸಿನಿಮಾ ಮಾಡೋಣ ಎಂದು ಬಂದರು. ಆದರೆ ಅದಾದ ಮೇಲೆ ಇಲ್ಲ ಈಗ ಸಮಯ ಸರಿಯಾಗಿಲ್ಲ ಈಗ ಬೇಡ ಎಂದರು. ಯಾವ ಮಟ್ಟಿಗೆ ಪರಿಸ್ಥಿತಿ ಆಗಿದೆಯೆಂದರೆ. ನಂದಿ ಬೆಟ್ಟದ ಸಮೀಪ ಗೇಟೆಡ್ ಕಮ್ಯೂನಿಟಿಯಲ್ಲಿ ನನ್ನ ಒಂದು ಮನೆ ಇತ್ತು. ಅದನ್ನು ಬಾಡಿಗೆ ಕೊಟ್ಟೆ, ಅದರಿಂದ ಬರುವ ಹಣದಲ್ಲಿ ಜೀವನ ನಡೆಸುವಂತಾಗಿತ್ತು. ತೀರ್ಥಹಳ್ಳಿಗೆ ವಾಪಸ್ಸಾಗಿ, ಅಲ್ಲಿ ಕೃಷಿ ಮಾಡೋಣ, ನಟನೆ ಸಾಕು ಎಂದು ನಿರ್ಧರಿಸಿದ್ದೆ’ ಎಂದು ದಿಗಂತ್ ಹೇಳಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಆದರೆ ಇತ್ತೀಚೆಗೆ ಸಿನಿಮಾ ಮಾಡಲು ಮುಂದೆ ಬರುವವರ ಸಂಖ್ಯೆಯೇ ಕಡಿಮೆ ಆಗಿಬಿಟ್ಟಿದೆ. ಎಲ್ಲರಿಗೂ ಆತಂಕ ಇದೆ. ಚಿತ್ರರಂಗದಲ್ಲಿ ಯಾಕೆ ಯಶಸ್ಸಿನ ಸಂಖ್ಯೆ ಕಡಿಮೆ ಆಯ್ತೋ ತಿಳಿಯುತ್ತಿಲ್ಲ’ ಎಂದಿದ್ದಾರೆ. ದಿಗಂತ್ ಪ್ರಸ್ತುತ ‘ರುದ್ರ ಕಾಲ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ತೆಲುಗಿನಲ್ಲಿ ಸಮಂತಾ ಋತ್ ಪ್ರಭು ಜೊತೆಗೆ ‘ಮಾ ಇಂಟಿ ಬಂಗಾರಂ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ತೆಲುಗಿನಲ್ಲಿ ತುಸು ಅವಕಾಶಗಳು ಸಿಗುವ ನಿರೀಕ್ಷೆಯಲ್ಲಿದ್ದಾರೆ ನಟ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?