AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕಿಂಗ್ ಸ್ಟಾರ್ ಯಶ್ ಹೇಳಿದ ಮಾತನ್ನು ನಿಜ ಮಾಡಲು ಹೊರಟ ಅಪ್ಪುವಿನ ‘ಗಂಧದ ಗುಡಿ’

ಇತ್ತೀಚೆಗೆ ನಡೆದ ‘ಗಂಧದ ಗುಡಿ’ಯ ಪ್ರೀ-ರಿಲೀಸ್ ಇವೆಂಟ್ ‘ಪುನೀತ ಪರ್ವ’ಕ್ಕೆ ಯಶ್ ಆಗಮಿಸಿದ್ದರು. ಅವರು ಪುನೀತ್ ಕೆಲಸವನ್ನು, ಅವರ ಜತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದರು.

ರಾಕಿಂಗ್ ಸ್ಟಾರ್ ಯಶ್ ಹೇಳಿದ ಮಾತನ್ನು ನಿಜ ಮಾಡಲು ಹೊರಟ ಅಪ್ಪುವಿನ ‘ಗಂಧದ ಗುಡಿ’
ಪುನೀತ್-ಯಶ್
TV9 Web
| Edited By: |

Updated on:Oct 26, 2022 | 1:05 PM

Share

‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ಅಕ್ಟೋಬರ್ 28ರಂದು ರಿಲೀಸ್ ಆಗುತ್ತಿದೆ. ಅಕ್ಟೋಬರ್ 29ಕ್ಕೆ ಪುನೀತ್ ರಾಜ್​ಕುಮಾರ್ ಅವರ ಪುಣ್ಯತಿಥಿ. ಹೀಗಾಗಿ, ಒಂದು ದಿನ ಮೊದಲು ‘ಗಂಧದ ಗುಡಿ’ ರಿಲೀಸ್ ಮಾಡಲಾಗುತ್ತಿದೆ. ವಿಶೇಷ ಎಂದರೆ ಅಕ್ಟೋಬರ್ 27ಕ್ಕೆ ರಾಜ್ಯದ ವಿವಿಧ ಕಡೆಗಳಲ್ಲಿ ‘ಗಂಧದ ಗುಡಿ’ಯ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿದೆ. ಇದಕ್ಕೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇತ್ತೀಚೆಗೆ ಯಶ್ ಹೇಳಿದ ಮಾತನ್ನು ನಿಜ ಮಾಡುವತ್ತ ‘ಗಂಧದ ಗುಡಿ’ ಸಾಗುತ್ತಿದೆ. ಯಶ್ ಏನು ಹೇಳಿದ್ದರು? ಸಾಕ್ಷ್ಯಚಿತ್ರದ ವಿಶೇಷತೆಗಳು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಯಶ್ ಹಾಗೂ ಪುನೀತ್ ನಡುವೆ ಸಾಕಷ್ಟು ಆಪ್ತತೆ ಇತ್ತು. ಈ ಕಾರಣಕ್ಕೆ ಪುನೀತ್ ರಾಜ್​ಕುಮಾರ್ ಅವರನ್ನು ಕಳೆದುಕೊಂಡಾಗ ಯಶ್ ಸಾಕಷ್ಟು ದುಃಖಪಟ್ಟಿದ್ದರು. ಇತ್ತೀಚೆಗೆ ನಡೆದ ‘ಗಂಧದ ಗುಡಿ’ಯ ಪ್ರೀ-ರಿಲೀಸ್ ಇವೆಂಟ್ ‘ಪುನೀತ ಪರ್ವ’ಕ್ಕೆ ಯಶ್ ಆಗಮಿಸಿದ್ದರು. ಅವರು ಪುನೀತ್ ಕೆಲಸವನ್ನು, ಅವರ ಜತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದರು. ಅಷ್ಟೇ ಅಲ್ಲ, ಯಶ್ ಒಂದು ಮಾತನ್ನು ಹೇಳಿದ್ದರು. ಆ ಮಾತನ್ನು ‘ಗಂಧದ ಗುಡಿ’ ನಿಜ ಮಾಡಲಿದೆಯೇ ಎಂಬುದು ಸದ್ಯದ ಕುತೂಹಲ.

ಪ್ರೀ ರಿಲೀಸ್​ನಲ್ಲಿ ಮಾತನಾಡಿದ್ದ ಯಶ್, ‘ಒಂದು ವರ್ಷದ ಕೆಳಗೆ ಇದೇ ಸಮಯದಲ್ಲಿ ನಾನು, ಅಪ್ಪ ಸರ್ ಹಾಗೂ ಶಿವಣ್ಣ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದೆವು. ಅದು ಕಣ್ಣಿಗೆ ಕಟ್ಟಿದಂತಿದೆ. ಅವತ್ತು ತುಂಬಾ ಮಾತನಾಡಿದ್ದೆವು. ಅವರ ತರ ಕೆಲಸ ಮಾಡಬೇಕು ಎಂದು ಅನೇಕರು ಚಿತ್ರರಂಗಕ್ಕೆ ಬಂದಿದ್ದಾರೆ. ಪುನೀತ್ ಬಾಳಲ್ಲಿ ನಡೆದ ಘಟನೆ ನನ್ನ ಜೀವನದಲ್ಲಿ ತುಂಬಾ ಪ್ರಭಾವ ಬೀರಿದೆ. ಅವರು ಇಲ್ಲದೆ ಇದ್ದರೂ ಅವರ ಕೆಲಸ ತೆರೆಮೇಲೆ ಬರುತ್ತಿದೆ. ಈ ಸಿನಿಮಾ ಎಲ್ಲಾ ರೆಕಾರ್ಡ್​ನ ಧೂಳಿಪಟ ಮಾಡಬೇಕು. ಕೆಜಿಎಫ್ ಕೂಡ ಇರಬಾರದು’ ಎಂದು ಕರೆ ನೀಡಿದ್ದರು.

ಇದನ್ನೂ ಓದಿ
Image
Gandhada Gudi Trailer: ಒಂದೇ ದಿನದಲ್ಲಿ 1 ಕೋಟಿ ಬಾರಿ ವೀಕ್ಷಣೆ ಕಂಡ ‘ಗಂಧದ ಗುಡಿ’ ಟ್ರೇಲರ್
Image
Gandhada Gudi: ರಮ್ಯಾ ಕೈ ಸೇರಿತು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​ ಆಮಂತ್ರಣ ಪತ್ರಿಕೆ
Image
Gandhada Gudi: ‘ಗಂಧದ ಗುಡಿ’ ಟ್ರೇಲರ್ ರಿಲೀಸ್ ವೇಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್ ಹೇಳಿದ್ದು ಒಂದೇ ಮಾತು..
Image
Gandhada Gudi: ಅ.21ರಂದು ‘ಗಂಧದ ಗುಡಿ’ ಪ್ರೀ-ರಿಲೀಸ್​ ಇವೆಂಟ್​; ವಿಶೇಷವಾಗಿ ಸಿದ್ಧವಾಗಿದೆ ಆಮಂತ್ರಣ ಪತ್ರಿಕೆ

ಇದನ್ನೂ ಓದಿ: ‘ಗಂಧದ ಗುಡಿ’ಗೆ ಪ್ರೀ-ಬುಕಿಂಗ್ ಆರಂಭ; ಹಬ್ಬಕ್ಕೆ ಸಾಕ್ಷಿ ಆಗಲಿದೆ ಅಕ್ಟೋಬರ್ 28

ಈಗ ‘ಗಂಧದ ಗುಡಿ’ಗೆ ಸಿಗುತ್ತಿರುವ ರೆಸ್ಪಾನ್ಸ್ ನೋಡಿದರೆ ಹಲವು ದಾಖಲೆಗಳನ್ನು ಈ ಸಾಕ್ಷ್ಯಚಿತ್ರ ನಾಶ ಮಾಡುವ ಸೂಚನೆ ಕೊಟ್ಟಿದೆ. ಅಕ್ಟೋಬರ್ 27ರಂದು ನಡೆವ ಪ್ರೀಮಿಯರ್ ಶೋನ ಎಲ್ಲಾ ಟಿಕೆಟ್​ಗಳು​ ಈಗಾಗಲೇ ಸೋಲ್ಡ್​ಔಟ್ ಆಗಿವೆ. ರಿಲೀಸ್​​ ದಿನ ಮುಂಜಾನೆ 6 ಗಂಟೆಗೆ ಶೋಗಳು ಆರಂಭ ಆಗುತ್ತಿವೆ. ಅದರ ಟಿಕೆಟ್​ಗಳು ಮಾರಾಟ ಆಗುತ್ತಿವೆ. ‘ಗಂಧದ ಗುಡಿ’ ಕರ್ನಾಟಕದ ವನ್ಯರಾಶಿ ಬಗ್ಗೆ ಮಾಡಿದ ಡಾಕ್ಯುಮೆಂಟರಿ ಆಗಿದೆ.

Published On - 1:05 pm, Wed, 26 October 22

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ