‘ಬಾಗ್ಲು ತೆಗಿ ಮೇರಿ ಜಾನ್​’ ಹಾಡು ಸೂಪರ್​ ಹಿಟ್​; ಮೂರೂವರೆ ಮಿಲಿಯನ್​ ದಾಟಿದ ವೀಕ್ಷಣೆ

‘ತೋತಾಪುರಿ’ ಚಿತ್ರದ ‘ಬಾಗ್ಲು ತೆಗಿ ಮೇರಿ ಜಾನ್​’ ಹಾಡು ಸೂಪರ್​ ಹಿಟ್​ ಆಗಿದೆ. ಜಗ್ಗೇಶ್​ ಮತ್ತು ಅದಿತಿ ಪ್ರಭುದೇವ ಮಸ್ತ್​ ಮನರಂಜನೆ ನೀಡಿದ್ದಾರೆ.

‘ಬಾಗ್ಲು ತೆಗಿ ಮೇರಿ ಜಾನ್​’ ಹಾಡು ಸೂಪರ್​ ಹಿಟ್​; ಮೂರೂವರೆ ಮಿಲಿಯನ್​ ದಾಟಿದ ವೀಕ್ಷಣೆ
ಅದಿತಿ ಪ್ರಭುದೇವ, ಜಗ್ಗೇಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Feb 04, 2022 | 12:06 PM

‘ನವರಸ ನಾಯಕ’ ಜಗ್ಗೇಶ್​ (Jaggesh) ಅಭಿನಯದ ಸಿನಿಮಾ ಎಂದರೆ ಅಲ್ಲಿ ಮಸ್ತ್​ ಕಾಮಿಡಿ ಇರಲೇಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಜಗ್ಗೇಶ್​ ಜೊತೆಗೆ ‘ನೀರ್​ ದೋಸೆ’ ಖ್ಯಾತಿಯ ನಿರ್ದೇಶಕ ವಿಜಯ್​ ಪ್ರಸಾದ್​ ಕೈ ಜೋಡಿಸಿದರೆ ಅಭಿಮಾನಿಗಳ ಪಾಲಿಗೆ ಅದು ಭರ್ಜರಿ ಕಾಂಬಿನೇಷನ್​. ಇವರಿಬ್ಬರು ಜೊತೆಯಾಗಿ ಮಾಡಿರುವ ‘ತೋತಾಪುರಿ’ ಸಿನಿಮಾ ಈಗಾಗಲೇ ಹಲವು ಕಾರಣದಿಂದ ಸೌಂಡು ಮಾಡುತ್ತಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಒಂದು ಚಿಕ್ಕ ಟೀಸರ್​ ಸಖತ್​ ಹೈಪ್​ ಸೃಷ್ಟಿ ಮಾಡಿತ್ತು. ಈಗ ಈ ಚಿತ್ರದ ಹಾಡು ಕೂಡ ಭರ್ಜರಿ ಯಶಸ್ಸು ಕಂಡಿದೆ. ಅದಿತಿ ಪ್ರಭುದೇವ  (Aditi Prabhudeva) ಮತ್ತು ಜಗ್ಗೇಶ್​ ಹೆಜ್ಜೆ ಹಾಕಿರುವ ‘ಬಾಗ್ಲು ತೆಗಿ ಮೇರಿ ಜಾನ್​..’ (Baglu Tegi Meri Jaan) ಹಾಡು ಜನಮನ ಗೆದ್ದಿದೆ. ಈ ಗೀತೆಯಿಂದಾಗಿ ‘ತೋತಾಪುರಿ’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತಾಗಿದೆ. ಯೂಟ್ಯೂಬ್​ನಲ್ಲಿ ಈ ಹಾಡನ್ನು ಈವರೆಗೆ 3.54 ಮಿಲಿಯನ್​, ಅಂದರೆ 35 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಮಾಡಿದ್ದಾರೆ ಸಿನಿಪ್ರಿಯರು. ಇದು ತಂಡದ ಸಂತಸಕ್ಕೆ ಕಾರಣ ಆಗಿದೆ.

ಈ ಹಾಡಿಗೆ ವಿಜಯ್​ ಪ್ರಸಾದ್​ ಸಾಹಿತ್ಯ ಬರೆದಿದ್ದಾರೆ. ಅನೂಪ್​ ಸಿಳೀನ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುರಳಿ ಅವರ ನೃತ್ಯ ನಿರ್ದೇಶನದಲ್ಲಿ ‘ಬಾಗ್ಲು ತೆಗಿ ಮೇರಿ ಜಾನ್​..’ ಹಾಡು ಸಖತ್​ ತಮಾಷೆಯಾಗಿ ಮೂಡಿಬಂದಿದೆ. ವ್ಯಾಸರಾಜ್​ ಸೋಸಲೆ, ಅನನ್ಯಾ ಭಟ್​ ಮತ್ತು ಸುಪ್ರಿಯಾ ರಾಮ್​ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ಜಗ್ಗೇಶ್​ ಅಭಿಮಾನಿಗಳಂತೂ ಈ ಗೀತೆಯಲ್ಲಿ ಸಖತ್​ ಮೆಚ್ಚಿಕೊಂಡಿದ್ದಾರೆ.

ಈ ಹಾಡು ಬಿಡುಗಡೆ ಆಗುವುದಕ್ಕೂ ಮುನ್ನ ಒಂದು ಚಿಕ್ಕ ಟೀಸರ್​ ರಿಲೀಸ್​ ಮಾಡಲಾಗಿತ್ತು. ಅದರಲ್ಲಿ ಇದ್ದ ಒಂದು ಪದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಆ ಕಾರಣದಿಂದ ‘ಬಾಗ್ಲು ತೆಗಿ ಮೇರಿ ಜಾನ್​..’ ವಿರೋಧ ಸೃಷ್ಟಿಸುವ ಸಾಧ್ಯತೆ ಕೂಡ ಇತ್ತು. ಅದೆಲ್ಲವನ್ನೂ ಮೀರಿ ಈಗ ಈ ಸಾಂಗ್​ ಸೂಪರ್​ ಹಿಟ್​ ಆಗಿದೆ. ಜಗ್ಗೇಶ್​ ಅವರ ಮ್ಯಾನರಿಸಂ, ಅದಿತಿ ಪ್ರಭುದೇವ ಅವರ ಡ್ಯಾನ್ಸ್, ಇತರೆ ಕಲಾವಿದರ ಅಭಿನಯದಿಂದಾಗಿ ಈ ಗೀತೆ ಯಶಸ್ವಿ ಆಗಿದೆ.

( ‘ಬಾಗ್ಲು ತೆಗಿ ಮೇರಿ ಜಾನ್​..’ ಹಾಡು ಇಲ್ಲಿದೆ)

ಹಾಡು ಹಿಟ್​ ಆಗಿದ್ದರ ಬಗ್ಗೆ ನಿರ್ದೇಶಕ ವಿಜಯ್​ ಪ್ರಸಾದ್​ ಅವರಿಗೆ ಸಖತ್​ ಖುಷಿ ಇದೆ. ‘ಈ ಗೆಲುವಿನ ಎಲ್ಲ ಕ್ರೆಡಿಟ್​ ಸಂಗೀತ ನಿರ್ದೇಶಕ ಅನೂಪ್​ ಸಿಳೀನ್​ ಅವರಿಗೆ ಸಲ್ಲಬೇಕು. ಕಂಟೆಂಟ್ ಚೆನ್ನಾಗಿದ್ದರೆ ಯಶಸ್ಸು ಸಿಗತ್ತೆ ಅನ್ನೋದಕ್ಕೆ ಈ ಹಾಡು ಸಾಕ್ಷಿ. ಶೇ.95ರಷ್ಟು ಜನರಿಗೆ ಹಾಡು ಇಷ್ಟ ಆಗಿದೆ. ಇದರಲ್ಲಿ ಬಳಸಿದ ಒಂದು ಪದದ ಬಗ್ಗೆ ಶೇ.5ರಷ್ಟು ಜನರು ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಆ ಪದಕ್ಕೆ ಮೂರ್ಖ ಎಂಬ ಅರ್ಥ ಇದೆ. ಅದನ್ನು ಖಚಿತಪಡಿಸಿಕೊಂಡೇ ನಾವು ಈ ಹಾಡನ್ನು ರಿಲೀಸ್​ ಮಾಡಿದ್ದು. ಸಾಹಿತ್ಯದಲ್ಲಿ ಹಿಂದಿ ಜಾಸ್ತಿ ಇದೆ ಅಂತ ಕೂಡ ಕೆಲವರು ಹೇಳಿದ್ದಾರೆ. ಚಿತ್ರದ ಕಥೆ ಏನು? ಪಾತ್ರಗಳು ಯಾಕೆ ಹಿಂದಿ ಮಾತಾಡ್ತವೆ ಅನ್ನೋದು ಜನರಿಗೆ ಈಗ ಗೊತ್ತಿಲ್ಲ. ಸಿನಿಮಾ ನೋಡಿದಾಗ ತಿಳಿಯುತ್ತೆ’ ಎಂದಿದ್ದಾರೆ ನಿರ್ದೇಶಕರು. ಕೆ.ಎ. ಸುರೇಶ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:

‘ಲೀಲಾವತಿ ರೀತಿ ಅದಿತಿ ಪ್ರಭುದೇವಗೂ ಒಳ್ಳೆಯ ಗುಣ ಇದೆ’: ಹಿರಿಯ ನಟ ಬೆಂಗಳೂರು ನಾಗೇಶ್​

ಭಾವಿ ಪತಿ ಜತೆ ಅದಿತಿ ಪ್ರಭುದೇವ ಹೊಸ ವರ್ಷದ ಸೆಲೆಬ್ರೇಷನ್​; ಫೋಟೋ ವೈರಲ್​

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ