100 ದಿನಗಳ ಸನಿಹದಲ್ಲಿದೆ ಕನ್ನೇರಿ ಸಿನಿಮಾ..!
ಕನ್ನೇರಿ ಹೊಸ ಕ್ರೇಜ್ ಅನ್ನೇ ಸೃಷ್ಟಿಸಿದೆ. ರಿಲೀಸ್ ಆದಾಗಿನಿಂದ ತನ್ನ ಕ್ರೇಜ್ ಕಡಿಮೆ ಮಾಡಿಕೊಂಡಿಲ್ಲ.
ಒಂದು ಸಿನಿಮಾ 75 ದಿನ ದಾಟಿ ಅದರ ಮೇಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ ಎಂದರೆ ತಮಾಷೆಯ ವಿಚಾರವಲ್ಲ. ಒಬ್ಬರೋ ಇಬ್ಬರೋ ಪ್ರೇಕ್ಷಕರಲ್ಲ ಅದು ಚಿತ್ರಮಂದಿರ ಕಣ್ತುಂಬಿಕೊಳ್ಳುವಷ್ಟು ಪ್ರೇಕ್ಷಕರಿಂದ ಫಿಲ್ ಆಗಿದೆ ಎಂದಾಗ ನೂರು ದಿನ ಪೂರೈಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಸಾಲಿನಲ್ಲಿ ಕನ್ನೇರಿ ಸಿನಿಮಾ ಬಂದು ನಿಂತಿದೆ.
ಮೊನ್ನೆಯಷ್ಟೇ ಮಾಧ್ಯಮದವರ ಮುಂದೆ ಬಂದ ಚಿತ್ರತಂಡ 75 ದಿನಗಳ ಸಂಭ್ರಮವನ್ನು ಹಂಚಿಕೊಂಡಿತ್ತು. ದುಡಿದ ವರ್ಗಕ್ಕೆ ಗೌರವ ಸಲ್ಲಿಕೆ ಮಾಡಿತ್ತು. ಇದೀಗ ಮತ್ತೊಂದು ದೊಡ್ಡ ಸಂಭ್ರಮವನ್ನೇ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳಬೇಕಾಗುತ್ತೆ. ಕನ್ನೇರಿ ಹೊಸ ಕ್ರೇಜ್ ಅನ್ನೇ ಸೃಷ್ಟಿಸಿದೆ. ರಿಲೀಸ್ ಆದಾಗಿನಿಂದ ತನ್ನ ಕ್ರೇಜ್ ಕಡಿಮೆ ಮಾಡಿಕೊಂಡಿಲ್ಲ. ಯಾಕಂದ್ರೆ ಕಥೆಯ ಆಳ ಆ ರೀತಿಯದ್ದಾಗಿದೆ.
ಒಂದು ಹೆಣ್ಣಿನ ಕಥೆ ಸಿನಿಮಾದಲ್ಲಿ ಅಡಗಿದೆ. ಒಂದು ಬುಡಕಟ್ಟಿನ ಜೀವನದ ಸಾರಾಂಶ ಚಿತ್ರದಲ್ಲಿ ತೋರಿಸಿದ್ದಾರೆ. ಕಾಡನ್ನು ನಂಬಿದವರು ಪಟ್ಟಣಕ್ಕೆ ಬಂದಾಗ ಏನೆಲ್ಲಾ ಕಹಿ ಘಟನಾವಳಿಗಳು ನಡೆಯುತ್ತವೆ ಎಂಬುದನ್ನು ನೈಜವಾಗಿ ತೋರಿಸಿದ್ದಾರೆ. ಸಿನಿಮಾ ನೋಡುಗ ಒಂದು ಕ್ಷಣ ಮರುಗದೆ ಇರಲಾರ ಅಷ್ಟು ಅದ್ಭುತವಾಗಿ ಒಂದೊಂದು ಪಾತ್ರವನ್ನು ಬಿಂಬಿಸಲಾಗಿದೆ. ಹೀಗಾಗಿ ಸಿನಿಮಾ ನೋಡದವರು, ನೋಡಿದವರು ಕೂಡ ಚಿತ್ರಮಂದಿರದ ಮೆಟ್ಟಿಲನ್ನು ಮತ್ತೊಮ್ಮೆ ಹತ್ತುತ್ತಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಈ ಸಿನಿಮಾವನ್ನು ಥಿಯೇಟರ್ ನವರೇ ತೆಗೆದಿಲ್ಲ. ಎಚ್ ಡಿ ಕೋಟೆಯಲ್ಲೂ ಸಿನಿಮಾ ನೋಡುಗರ ಕ್ರೇಜ್ ಕಡಿಮೆಯಾಗಿಲ್ಲ. ಚಿತ್ರಮಂದಿರದಲ್ಲಿ ತುಂಬಿದ್ದ ಜನರ ವಿಡಿಯೋ ಮಾಡಿ, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಸಂಭ್ರಮಕ್ಕೆ ಚಿತ್ರತಂಡ ಕೂಡ ಎಚ್ ಡಿ ಕೋಟೆಯ ಅಭಿಮಾನಿಗಳು ಜೊತೆಗೆ ಅಲ್ಲಿನ ಸ್ಥಳೀಯ ಶಾಸಕ, ಸಚಿವರಿಗೂ ಮನತುಂಬಿ ಧನ್ಯವಾದ ತಿಳಿಸಿದ್ದಾರೆ.
ಇನ್ನು ಈ ಸಿನಿಮಾವನ್ನು ನೀನಾಸಂ ಮಂಜು ನಿರ್ದೇಶನ ಮಾಡಿದ್ದು, ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡು ಪಿ.ಪಿ. ಹೆಬ್ಬಾರ್ ಮತ್ತು ಚಂದ್ರಶೇಖರ್ ಬಂಡವಾಳ ಹಾಕಿದ್ದಾರೆ. ಅರ್ಚನಾ ಮಧುಸೂದನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅನಿತ ಭಟ್, ಕರಿ ಸುಬ್ಬು, ಅರುಣ್ ಸಾಗರ್, ಎಂ.ಕೆ. ಮಠ ಒಳಗೊಂಡ ಅನುಭವಿ ಕಲಾವಿದರ ಅಭಿನಯವಿದೆ. ಕೊಟಿಗಾನಹಳ್ಳಿ ರಾಮಯ್ಯ ಕಥೆ ಮತ್ತು ಸಾಹಿತ್ಯ, ಸುಜಿತ್ ಎಸ್ ನಾಯಕ್ ಸಂಕಲನ, ಗಣೇಶ್ ಹೆಗ್ಡೆ ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.