ಆಗಸ್ಟ್ 19ಕ್ಕೆ ಅಭಿಮಾನಿಗಳನ್ನು ಎದುರುಗೊಳ್ಳುತ್ತಿದ್ದಾರೆ ಕಿರಣ್ ರಾಜ್; ಏನಿದು ಸಮಾಚಾರ?
ಕೊವಿಡ್ ಎರಡನೇ ಅಲೆ ಕಡಿಮೆ ಆಗಿದೆ. ಹೀಗಾಗಿ, ಚಿತ್ರಮಂದಿರಗಳನ್ನು ಓಪನ್ ಮಾಡೋಕೆ ಅವಕಾಶ ನೀಡಲಾಗಿದೆ. ಈ ಕಾರಣಕ್ಕೆ ಆಗಸ್ಟ್ 19ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.
‘ಕನ್ನಡತಿ’ ಧಾರಾವಾಹಿ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಹೆಸರಾದವರು ಕಿರಣ್ ರಾಜ್. ಅವರು ಈಗ ಹಿರಿತೆರೆಗೂ ಕಾಲಿಟ್ಟಿದ್ದು, ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಹಾಭಾರತದ ಉಪಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ‘ಜೀವ್ನಾನೇ ನಾಟ್ಕ ಸಾಮಿ’ ಹೆಸರಿನ ಚಿತ್ರದಲ್ಲಿ ಕಿರಣ್ ರಾಜ್ ನಟಿಸಿದ್ದಾರೆ.
ಮಹಾಭಾರತದ ಉಪಕಥೆಯನ್ನು ಆಧರಿಸಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಡೆಯುವ ಕೆಲವು ವಿಷಯಗಳನ್ನು ಇಟ್ಟುಕೊಂಡು ಈ ಸಿನಿಮಾದ ಕಥೆ ಸಿದ್ಧಗೊಂಡಿದೆ. ಪಾಸಿಟಿವ್ ಹಾಗೂ ನೆಗೆಟಿವ್ ಆಲೋಚನೆಗಳನ್ನು ಎರಡು ಪಾತ್ರಗಳ ಮೂಲಕ ಹೇಳಹೊರಟಿದ್ದಾರೆ ನಿರ್ದೇಶಕರು. ಕಿರಣ್ ರಾಜ್ ಹಾಗೂ ಶ್ರೀಹರ್ಷ ಈ ಪಾತ್ರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ರಾಜು ಭಂಡಾರಿ ರಾಜವರ್ತ ಈ ಚಿತ್ರದ ನಿರ್ದೇಶಕರು.
ಕೊವಿಡ್ ಎರಡನೇ ಅಲೆ ಕಡಿಮೆ ಆಗಿದೆ. ಹೀಗಾಗಿ, ಚಿತ್ರಮಂದಿರಗಳನ್ನು ಓಪನ್ ಮಾಡೋಕೆ ಅವಕಾಶ ನೀಡಲಾಗಿದೆ. ಈ ಕಾರಣಕ್ಕೆ ಆಗಸ್ಟ್ 19ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಇದೊಂದು ಸಂಪೂರ್ಣ ಮನರಂಜನಾ ಚಿತ್ರ ಅನ್ನೋದು ಚಿತ್ರತಂಡದ ಅಭಿಪ್ರಾಯ.
‘ಇಂತಹ ಒಳ್ಳೆಯ ತಂಡದಲ್ಲಿ ಅಭಿನಯಿಸಿದ ಸಂತೋಷ ನನಗಿದೆ. ನನ್ನ ಧಾರಾವಾಹಿಯ ಅಭಿಮಾನಿಗಳು ಈ ಚಿತ್ರವನ್ನು ನೋಡಿ ಗೆಲಿಸುತ್ತಾರೆ’ ಎನ್ನುತ್ತಾರೆ ಕಿರಣ್ ರಾಜ್. ಈ ಚಿತ್ರದಲ್ಲಿ ಹರ್ಷ ಬರೀ ನಟನೆಯನ್ನಷ್ಟೇ ಮಾಡಿಲ್ಲ. ಜತೆಗೆ ಒಂದು ಹಾಡನ್ನು ಕೂಡ ಹಾಡಿದ್ದಾರೆ.
ತೆಲುಗು – ತಮಿಳು ಸಿನಿಮಾಗಳಲ್ಲಿ ನಟಿಸಿ, ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿರುವ ಪವಿತ್ರ ಕೋಟ್ಯಾನ್ ಹಾಗೂ ಅನಿಕ ರಮ್ಯ ಈ ಚಿತ್ರದ ನಾಯಕಿಯರು. ರಾಜಶೇಖರ್ ಶಿರಹಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಜುಲೈ 5ರಂದು ಕಿರಣ್ ರಾಜ್ ಜನ್ಮದಿನ ಆಚರಿಸಿಕೊಂಡಿದ್ದರು. ಈ ವಿಶೇಷ ದಿನದಂದು ಅವರ ನಟನೆಯ ‘ಬಹದ್ದೂರ್ ಗಂಡು’ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ನಲ್ಲಿ ಕಿರಣ್ ಆ್ಯಕ್ಷನ್ ದೃಶ್ಯಗಳ ಮೂಲಕ ಮಿಂಚಿದ್ದರು. ಅದೇ ದಿನ ಕಿರಣ್ ರಾಜ್ KINGS RAMPAGE ಹೆಸರಿನ ಬಟ್ಟೆ ಬ್ರ್ಯಾಂಡ್ ಪರಿಚಯಿಸಿದ್ದರು.
ಇದನ್ನೂ ಓದಿ: ಸಖತ್ ಆ್ಯಕ್ಷನ್ನಲ್ಲಿ ಮಿಂಚುತ್ತಿದ್ದಾರೆ ಕಿರಣ್ ರಾಜ್; ಇದಕ್ಕಾಗಿ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ
ನಟ ಕಿರಣ್ ರಾಜ್ ಪರಿಚಯಿಸಿದ್ರು ಹೊಸ ಬಟ್ಟೆ ಬ್ರ್ಯಾಂಡ್; ಇದರ ಹಿಂದಿದೆ ಒಂದೊಳ್ಳೆಯ ಉದ್ದೇಶ