AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕರುನಾಡಿನ ಕೀರ್ತಿ ಪತಾಕೆ ಹಾರಿಸಿದ ಕನ್ನಡದ ಹೆಮ್ಮೆಯ ಸಿನಿಮಾಗಳು

ಕನ್ನಡ ಚಿತ್ರರಂಗವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸುತ್ತಿದೆ. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಸಿನಿಮಾದಿಂದ ಹಿಡಿದು ಯಶ್ ಅವರ 'ಕೆಜಿಎಫ್', ರಿಷಬ್ ಶೆಟ್ಟಿಯ 'ಕಾಂತಾರ' ಹಾಗೂ ರಕ್ಷಿತ್ ಅವರ '777 ಚಾರ್ಲಿ'ವರೆಗಿನ ಸಿನಿಮಾಗಳು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿ ಕರುನಾಡಿನ ಕೀರ್ತಿ ಹೆಚ್ಚಿಸಿವೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕರುನಾಡಿನ ಕೀರ್ತಿ ಪತಾಕೆ ಹಾರಿಸಿದ ಕನ್ನಡದ ಹೆಮ್ಮೆಯ ಸಿನಿಮಾಗಳು
Pan India Movies
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 04, 2026 | 11:10 AM

Share

ಮುಖ್ಯಾಂಶಗಳು

  • ಅಂದಿನ ಕಾಲದಲ್ಲೇ ಪ್ಯಾನ್ ಇಂಡಿಯಾ ಸಾಹಸ
  • ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಹಾದಿ
  • ಸಾವಿರ ಕೋಟಿ ಕ್ಲಬ್ ಸೇರಿರೋ ಯಶ್ ಸಿನಿಮಾ

ಕನ್ನಡ ಚಿತ್ರರಂಗ ಕಳೆದ ಕೆಲವು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಒಂದು ಕಾಲದಲ್ಲಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಸಿನಿಮಾಗಳು, ಇಂದು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿವೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದಾರೆ. ಅದ್ಭುತ ಮೇಕಿಂಗ್, ರೋಚಕ ಕಥಾಹಂದರ ಹಾಗೂ ತಾಂತ್ರಿಕ ಶ್ರೀಮಂತಿಕೆಯಿಂದಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿ ಕರುನಾಡಿನ ಹಿರಿಮೆಯನ್ನು ಹೆಚ್ಚಿಸಿದ ಪ್ರಮುಖ ಸಿನಿಮಾಗಳ ವಿವರ ಇಲ್ಲಿದೆ.

ಶಾಂತಿ ಕ್ರಾಂತಿ

ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಪರಿಕಲ್ಪನೆ ಇತ್ತೀಚೆಗೆ ಜನಪ್ರಿಯವಾಗಿದ್ದರೂ, ದಶಕಗಳ ಹಿಂದೆಯೇ ಅಂತಹದ್ದೊಂದು ಬ್ರಹ್ಮಾಂಡ ಸಾಹಸಕ್ಕೆ ಕೈಹಾಕಿದ್ದವರು ಕ್ರೇಜಿ ಸ್ಟಾರ್ ರವಿಚಂದ್ರನ್. 1991ರಲ್ಲಿ ತೆರೆಕಂಡ ‘ಶಾಂತಿ ಕ್ರಾಂತಿ’ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಿಸಲಾಗಿತ್ತು. ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ನಾಗಾರ್ಜುನ ಅವರಂತಹ ಘಟಾನುಘಟಿ ನಟರನ್ನು ಒಳಗೊಂಡಿದ್ದ ಈ ಸಿನಿಮಾ ಅಂದಿನ ಕಾಲಕ್ಕೆ ಅತ್ಯಂತ ದುಬಾರಿ ಬಜೆಟ್‌ನಲ್ಲಿ ಮೂಡಿಬಂದಿತ್ತು. ಈ ಸಾಹಸವು ವಾಣಿಜ್ಯಿಕವಾಗಿ ಸವಾಲನ್ನು ತಂದೊಡ್ಡಿದರೂ, ಕನ್ನಡ ಸಿನಿಮಾ ರಂಗದ ಗಡಿಗಳನ್ನು ವಿಸ್ತರಿಸುವಲ್ಲಿ ಪ್ರವರ್ತಕ ಹೆಜ್ಜೆಯಾಯಿತು.

ಕೆಜಿಎಫ್ ಚಾಪ್ಟರ್ 1-2

ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸರಣಿಯು ಕನ್ನಡ ಚಿತ್ರರಂಗದ ದಸೆಯನ್ನೇ ಬದಲಾಯಿಸಿತು. 2018ರಲ್ಲಿ ಬಂದ ‘ಕೆಜಿಎಫ್ ಚಾಪ್ಟರ್ 1’ ಜಾಗತಿಕ ಮಟ್ಟದಲ್ಲಿ ಸುಮಾರು 250 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆಯಿತು. ಇನ್ನು 2022ರಲ್ಲಿ ತೆರೆಕಂಡ ‘ಕೆಜಿಎಫ್ ಚಾಪ್ಟರ್ 2’ ಭಾರತೀಯ ಚಿತ್ರರಂಗವನ್ನೇ ತಲ್ಲಣಗೊಳಿಸಿತು. ಈ ಚಿತ್ರವು ವಿಶ್ವದಾದ್ಯಂತ ಬರೋಬ್ಬರಿ 1250 ಕೋಟಿಗೂ ಅಧಿಕ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಭಾರತದ ಅತ್ಯಧಿಕ ಗಳಿಕೆಯ ಸಿನಿಮಾಗಳ ಸಾಲಿನಲ್ಲಿ ಸ್ಥಾನ ಪಡೆಯಿತು.

ಕಾಂತಾರ-ಕಾಂತಾರ ಚಾಪ್ಟರ್ 1

ರಿಷಬ್ ಶೆಟ್ಟಿ ಅವರ ನಿರ್ದೇಶನ ಹಾಗೂ ನಟನೆಯ ‘ಕಾಂತಾರ’ ಸಿನಿಮಾ ಕನ್ನಡ ಸಿನಿಮಾ ರಂಗದ ಮತ್ತೊಂದು ಅದ್ಭುತ ಪವಾಡ. ಕರಾವಳಿಯ ಜಾನಪದ ದೈವಾರಾಧನೆಯ ಸತ್ಯ ಘಟನೆಗಳು ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಈ ಚಿತ್ರವು ಕೇವಲ 13 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿ, ವಿಶ್ವದಾದ್ಯಂತ ಬರೋಬ್ಬರಿ 400 ಕೋಟಿಗೂ ಅಧಿಕ ರೂಪಾಯಿ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿತು. ‘ಕಾಂತಾರ: ಚಾಪ್ಟರ್ 1’ ಚಿತ್ರ 900 ಕೋಟಿ ರೂಪಾಯಿ ಗಳಿಸಿದೆ.

ವಿಕ್ರಾಂತ್ ರೋಣ ಮತ್ತು 777 ಚಾರ್ಲಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 3D ಸಾಹಸಮಯ ‘ವಿಕ್ರಾಂತ್ ರೋಣ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡು ಸುಮಾರು 120-125 ಕೋಟಿ ರೂಪಾಯಿ ಗಳಿಕೆ ಕಂಡಿತು. ‘ಪೈಲ್ವಾನ್’ ಕೂಡ ಈ ಸಾಲಿಗೆ ಸೇರುತ್ತದೆ. ಇನ್ನು ರಕ್ಷಿತ್ ಶೆಟ್ಟಿ ನಟನೆಯ ಹಾಗೂ ಮಾನವ-ಶ್ವಾನದ ನಡುವಿನ ಬಾಂಧವ್ಯದ ಕಥೆ ಹೊಂದಿದ್ದ ‘777 ಚಾರ್ಲಿ’ ಸಿನಿಮಾ ಪ್ರೇಕ್ಷಕರ ಮನ ಗೆದ್ದು ಜಾಗತಿಕವಾಗಿ 105 ಕೋಟಿಗೂ ಅಧಿಕ ರೂಪಾಯಿ ಕಲೆಕ್ಷನ್ ಮಾಡಿ ಸ್ಯಾಂಡಲ್‌ವುಡ್ ಗೌರವವನ್ನು ಹೆಚ್ಚಿಸಿತು.

ಇದನ್ನೂ ಓದಿ: ರುಚಿ ರುಚಿಯಾಗಿ ಅಡುಗೆ ಮಾಡಿ ಸವಿದ ‘ಪ್ರೇಮದ ಊರಲಿ’ ನಟಿ ತಪಸ್ವಿನಿ ಪೂಣಚ್ಚ

‘ಸು ಫ್ರಮ್ ಸೋ’-ಪ್ರೇಮದ ಊರಲಿ ಚಿತ್ರ

ಮೊದಲು ಕನ್ನಡ ಸಿನಿಮಾ ಆಗಿ ತೆರೆಕಂಡ ‘ಸು ಫ್ರಮ್ ಸೋ’ ನಂತರ ತೆಲುಗಿಗೆ ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿ ರಿಲೀಸ್ ಆಯಿತು. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ‘ಪ್ರೇಮದ ಊರಲಿ’ ಸಿನಿಮಾ ಕೂಡ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್​​ನಲ್ಲಿ 130 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ಸೌಜನ್ಯ ಪ್ರಕರಣ: ಅದೊಂದು ರಿಪೋರ್ಟ್ ನಲ್ಲಿದೆ ಸೌಜನ್ಯ ಸಾವಿನ ರಹಸ್ಯ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ