
‘ಮಿಲನ’ (Milana Movie) ಹಾಗೂ ‘ಪೃಥ್ವಿ’ ಚಿತ್ರಗಳಲ್ಲಿ ನಟಿಸಿ ಪಾರ್ವತಿ ಮೆನನ್ ಅವರು ಜನಪ್ರಿಯತೆ ಪಡೆದರು. ಈ ನಟಿ ಕನ್ನಡಿಗರಿಗೆ ಸಾಕಷ್ಟು ಪರಿಚಯ ಇದೆ. ಅವರು ಈಗ ಮಲಯಾಳಂ ಸಿನಿಮಾ ರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರಿಗೆ ಪುನೀತ್ ರಾಜ್ಕುಮಾರ್ ಜೊತೆ ಒಳ್ಳೆಯ ಒಡನಾಟ ಇತ್ತು. ಅವರು ಈ ಮೊದಲು ಪುನೀತ್ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದರು. ಅವರ ಜೊತೆ ಕೆಲಸ ಮಾಡಿದ್ದ ಅನುಭವ ಹೇಗಿತ್ತು ಎಂಬುದನ್ನು ಮನ ಬಿಚ್ಚಿ ಮಾತನಾಡಿದ್ದರು.
ಪುನೀತ್ ರಾಜ್ಕುಮಾರ್ ದೇಶ ಕಂಡ ಅತ್ಯುತ್ತಮ ನಟರಲ್ಲಿ ಒಬ್ಬರು. ಅವರು ಕೇವಲ ಹೀರೋ ಆಗಿರಲಿಲ್ಲ. ಅವರಿಗೆ ಮಾನವೀಯ ಗುಣಗಳು ಸಾಕಷ್ಟು ಇದ್ದವು. ಈ ಕಾರಣದಿಂದ ಪುನೀತ್ ರಾಜ್ಕುಮಾರ್ ಅವರು ಅನೇಕರಿಗೆ ಇಷ್ಟ ಆಗುತ್ತಿದ್ದರು. ಅವರ ಜೊತೆ ಕೆಲಸ ಮಾಡಿದ ಯಾರೊಬ್ಬ ಕಲಾವಿದನೂ ಕೂಡ ನೆಗೆಟಿವ್ ಆಗಿ ಮಾತನಾಡಿರಲಿಲ್ಲ. ಮಿಲನ ಪಾರ್ವತಿ ಕೂಡ ಇದೇ ಮಾತನ್ನು ಈ ಮೊದಲು ಹೇಳಿದ್ದರು.
‘ನಂಗೆ ಕಥೆ ಮುಖ್ಯ. ನಾನು ಮಿಲನ ಚಿತ್ರದ ಕಥೆಯ ಒಂದೆಳೆ ಕೇಳಿದೆ. ನನಗೆ ಇಷ್ಟ ಆಯ್ತು. ನಾನು ಪರಭಾಷೆಯವಳು ಆಗಿದ್ದರಿಂದ ಪುನೀತ್ ಯಾರು ಅಂತ ನನಗೆ ಗೊತ್ತಿರಲಿಲ್ಲ. ಹೀಗಾಗಿ ಟೆನ್ಷನ್ ಇರಲಿಲ್ಲ, ಭಯವೂ ಆಗಲಿಲ್ಲ. ದೊಡ್ಡ ಪ್ರೊಡಕ್ಷನ್ ಸಂಸ್ಥೆ, ದೊಡ್ಡ ಹೀರೋ ಎಂದಾಗಲೇ ಟೆನ್ಷನ್ ಆರಂಭ ಆಗುತ್ತದೆ. ಆದರೆ, ಇಲ್ಲಿ ಆ ರೀತಿ ಇರಲೇ ಇಲ್ಲ. ಅವರಿಗೆ ಆ್ಯಟಿಟ್ಯೂಡ್ ಇರಲೇ ಇಲ್ಲ’ ಎಂದಿದ್ದರು ಅವರು.
‘ಸೆಟ್ನಲ್ಲಿ ಯಾರೇ ಇದ್ದರು ಅವರ ಜೊತೆ ಒಂದೇ ರೀತಿ ಮಾತನಾಡುತ್ತಿದ್ದರು. ಈ ಕಾರಣಕ್ಕೆ ಅವರಿದ್ದಾಗ ನಮ್ಮವರು ಎನ್ನುವ ಭಾವನೆ ಬರುತ್ತಿತ್ತು’ ಎಂದು ಪಾರ್ವತಿ ಅವರು ಹೇಳಿಕೊಂಡರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ವ್ಯಕ್ತಿತ್ವ ಕೊಂಡಾಡಿದ ಬಾಲಿವುಡ್ ನಟಿ
2006ರ ‘ಔಟ್ ಆಫ್ ಸಿಲೆಬಸ್’ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2007ರಲ್ಲಿ ಅವರು ‘ಮಿಲನ’ ಸಿನಿಮಾ ಮಾಡಿ ಫೇಮಸ್ ಆದರು. ಇತ್ತೀಚೆಗೆ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು-ಇಲ್ಲೊಂದು ಸಿನಿಮಾ ಮಾಡಿ ಅವರು ಗಮನ ಸೆಳೆಯುತ್ತಾರೆ. ಇನ್ನು, ಪುನೀತ್ ಅವರು ನಮ್ಮ ಜೊತೆ ಇಲ್ಲ. ಅವರ ನಟನೆಯ ‘ಮಿಲನ’ ಈಗಲೂ ಅನೇಕರು ಫೇವರಿಟ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:51 am, Fri, 6 June 25