‘ಕನ್ಯಾಸೆರೆಗೆ ನನ್ನ…’; ಆ ಲಿರಿಕ್ಸ್ನ ನಿಜವಾದ ಅರ್ಥ ಹೇಳಿದ ಮನೋಹರ್
1998ರಲ್ಲಿ ಬಿಡುಗಡೆಯಾದ ‘ಪ್ರೀತ್ಸೋದ್ ತಪ್ಪಾ...?’ ಚಿತ್ರದ ‘ರಾಜಾ ರಾಜ..’ ಹಾಡಿನ ಸಾಹಿತ್ಯ ವಿವಾದ ಸೃಷ್ಟಿಸಿತ್ತು. ಅಲ್ಲಿ ಬಳಕೆ ಆದ ಪದಗುಚ್ಛದ ತಪ್ಪು ಅರ್ಥೈಸುವಿಕೆಯಿಂದ ಉಂಟಾದ ಗೊಂದಲವನ್ನು ವಿ. ಮನೋಹರ್ ಅವರು ಸ್ಪಷ್ಟಪಡಿಸಿದ್ದಾರೆ. ಅವರು ಈ ಪದಗುಚ್ಛದ ನಿಜವಾದ ಅರ್ಥವನ್ನು ವಿವರಿಸಿದ್ದಾರೆ .

1998ರಲ್ಲಿ ಬಂದ ‘ಪ್ರೀತ್ಸೋದ್ ತಪ್ಪಾ..?’ (Preethsod Thappa) ಸಿನಿಮಾ ಮೆಚ್ಚುಗೆ ಪಡೆಯಿತು. ವಿ. ರವಿಚಂದ್ರನ್ ಅವರು ಈ ಚಿತ್ರವನ್ನು ನಿರ್ದೇಶಿಸಿ, ನಟಿಸಿದರು. ರಾಕ್ಲೈನ್ ವೆಂಕಟೇಶ್ ಈ ಚಿತ್ರದ ನಿರ್ಮಾಪಕರು. ಈ ಚಿತ್ರಕ್ಕಾಗಿ ಶಿಲ್ಪಾ ಶೆಟ್ಟಿಯನ್ನು ಮತ್ತೆ ಕನ್ನಡಕ್ಕೆ ಕರೆತರಲಾಯಿತು. ಈ ಸಿನಿಮಾದ ‘ರಾಜಾ ರಾಜ..’ ಹಾಡು ಗಮನ ಸೆಳೆದಿತ್ತು. ಈ ಚಿತ್ರದ ಹಾಡಿನ ಲಿರಿಕ್ಸ್ ಕೂಡ ಚರ್ಚೆ ಆಗಿತ್ತು. ಇದರಲ್ಲಿ ಬರೋ ಒಂದು ಸಾಲನ್ನು ತಪ್ಪಾಗಿ ಅರ್ಥೈಸಲಾಗಿತ್ತು. ಇದಕ್ಕೆ ಸಂಗೀತ ಸಂಯೋಜಕ ವಿ. ಮನೋಹರ್ ಸ್ಪಷ್ಟನೆ ನೀಡಿದ್ದಾರೆ.
‘ಪ್ರೀತ್ಸೀದ್ ತಪ್ಪಾ..?’ ಸಿನಿಮಾಗೆ ಮ್ಯೂಸಿಕ್ ನೀಡಿದ್ದು ಹಂಸಲೇಖ ಅವರು. ಅವರೇ ‘ರಾಜಾ ರಾಜ’ ಹಾಡಿಗೆ ಸಾಹಿತ್ಯ ಬರೆದಿದ್ದರು. ಈ ಸಿನಿಮಾದ ಲಿರಿಕ್ಸ್ ಗೊಂದಲಮಯವಾಗಿತ್ತು. ನಿಜಕ್ಕೂ ಆ ಲಿರಿಕ್ಸ್ನ ಹಾಗೆಯೇ ಬರೆಯಲಾಗಿತ್ತೇ? ಇದಕ್ಕೆ ಮನೋಹರ್ ಸ್ಪಷ್ಟನೆ ನೀಡಿದ್ದಾರೆ.
ಚರ್ಚೆ ಹುಟ್ಟು ಹಾಕಿದ್ದ ಲಿರಿಕ್ಸ್..
‘ಬತ್ತಾಬರ್ತಿದ್ದಾನಂತೆ ನನ್ನ ರೋಮಿಯೋ ಸುದ್ದಿ ಕೊಟ್ಟಿದೆ ನನ್ನ ಹೃದಯ ರೇಡಿಯೋ..ಬಂದ ಕೂಡಲೇ ಪ್ರೀತಿಯಿಂದಲೇ ಕನ್ಯಾಸೆರೆಗೆ ನನ್ನ ಟಾಟಾ ಚೆರಿಯೋ’ ಎಂಬುದು ಹಾಡಿನ ಲಿರಿಕ್ಸ್.
ಇದನ್ನೂ ಓದಿ: ಬ್ಯಾಚುಲರ್ಸ್ ವೇದಿಕೆ ಮೇಲೆ ರೊಮ್ಯಾಂಟಿಕ್ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಮನೋಹರ್ ಹೇಳಿದ್ದೇನು?
‘ಶ್ರೀಗಂಧ ಟಿವಿ’ ಹೆಸರಿನ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿರೋ ಮನೋಹರ್, ‘ರಾಜಾ ರಾಜ ಹಾಡಿನಲ್ಲಿ ಕನ್ಯಾಸೆರೆಗೆ ನನ್ನ ಟಾಟಾ ಚೆರಿಯೋ ಎಂದಿದೆ. ಟಾಟಾ ಚೆರಿಯೋ ಎಂದರೆ ವಿದಾಯ ಎಂದರ್ಥ. ಆದರೆ ಇದನ್ನು ‘ಡಾಶ್ ತೆರಿಯೋ’ ಎಂದರ್ಥ ಕಲ್ಪಿಸಿಕೊಂಡರು. ನಾನು ಈ ಲಿರಿಕ್ಸ್ ವಿಚಾರವಾಗಿ ಜಗಳ ಆಡಿದೆ’ ಎಂದಿದ್ದಾರೆ ಮನೋಹರ್.
(ಈ ಹಾಡಿನ ವಿವರಣೆ ವಿಡಿಯೋ ಆರಂಭ ಆದ 10 ನಿಮಿಷದಿಂದ ಇದೆ..)
‘ಅಲ್ಲಿ ಬಳಕೆ ಆಗಿದ್ದು ಟಾಟಾ ಚಿರಿಯೋ ಎಂಬುದಾಗಿ ಸ್ಪಷ್ಟನೆ ಕೊಟ್ಟರು. ಇಂಗ್ಲಿಷರು ಟಾಟಾ ಚಿರಿಯೋ ಬಾಯ್ ಎನ್ನುತ್ತಿದ್ದರು. ಆ ಬಳಿಕ ಅದು ಟಾಟಾ ಬಾಯ್ ಬಾಯ್ ಆಯ್ತು. ಈಗ ಬಾಯ್ ಅಷ್ಟೇ ಇದೆ. ಕನ್ಯಾ ಸೆರೆಗೆ ಟಾಟಾ ಚೀರಿಯೊ ಎಂದರೆ ಕನ್ಯಾ ಸೆರೆಗೆ ನನ್ನ ವಿದಾಯ ಎಂದರ್ಥ. ಇದನ್ನು ಬೇರೆ ರೀತಿ ಅರ್ಥೈಸಲು ಹೋದರು. ಆ ಬಳಿಕ ಅಭಿಮಾನಿಗಳು ಬೈದ ಬಳಿಕ ವಿವಾದ ತಣ್ಣಗಾಯ್ತು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:36 am, Sat, 21 June 25