ಹೊಂಬಾಳೆ ನಿರ್ಮಾಣದ ಹೃತಿಕ್ ರೋಷನ್ ಚಿತ್ರಕ್ಕೆ ಡೈರೆಕ್ಷನ್ ಮಾಡಲಿದ್ದಾರೆ ದಕ್ಷಿಣದ ಖ್ಯಾತ ಹೀರೋ

ಕನ್ನಡದ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಹೃತಿಕ್ ರೋಷನ್ ಜೊತೆ ಸಿನಿಮಾ ಘೋಷಣೆ ಮಾಡಿದೆ. ಈ ವಿಚಾರ ಕನ್ನಡದ ಅನೇಕರಿಗೆ ಖುಷಿ ಕೊಟ್ಟಿದೆ. ಕನ್ನಡದ ಬ್ಯಾನರ್ ಒಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದು ಖುಷಿಯ ವಿಚಾರ. ಈಗ ಈ ಚಿತ್ರಕ್ಕೆ ನಿರ್ದೇಶನ ಯಾರು ಮಾಡಲಿದ್ದಾರೆ ಎನ್ನುವ ವಿಚಾರ ರಿವೀಲ್ ಆಗಿದೆ.

ಹೊಂಬಾಳೆ ನಿರ್ಮಾಣದ ಹೃತಿಕ್ ರೋಷನ್ ಚಿತ್ರಕ್ಕೆ ಡೈರೆಕ್ಷನ್ ಮಾಡಲಿದ್ದಾರೆ ದಕ್ಷಿಣದ ಖ್ಯಾತ ಹೀರೋ
ಹೃತಿಕ್ ರೋಷನ್

Updated on: May 30, 2025 | 7:41 AM

ವಿಜಯ್ ಕಿರಗಂದೂರು ನೇತೃತ್ವದ ‘ಹೊಂಬಾಳೆ ಫಿಲ್ಮ್ಸ್’ (Hombale Films) ಕನ್ನಡದಲ್ಲಿ ಯಶಸ್ಸು ಕಂಡ ಬಳಿಕ ತೆಲುಗು, ತಮಿಳು ಮೊದಲಾದ ಭಾಷೆಗಳಿಗೆ ತೆರಳಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಬಾಲಿವುಡ್​ನಲ್ಲೂ ಈ ಸಂಸ್ಥೆ ಸಿನಿಮಾ ನಿರ್ಮಿಸುತ್ತಿದ್ದೆ. ಬಾಲಿವುಡ್​ನ ಖ್ಯಾತ ನಟ ಹೃತಿಕ್ ರೋಷನ್ ಜೊತೆ ಹೊಂಬಾಳೆ ಕೈ ಜೋಡಿಸಿದೆ. ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ದಕ್ಷಿಣದ ನಟ ಹಾಗೂ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರು ಈ ಚಿತ್ರದ ಜವಾಬ್ದಾರಿ ಹೊತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಪೃಥ್ವಿರಾಜ್ ಹಾಗೂ ಹೊಂಬಾಳೆ ಫಿಲ್ಮ್ಸ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಈ ಮೊದಲು ಹೊಂಬಾಳೆ ನಿರ್ಮಾಣದ ‘ಸಲಾರ್’ ಚಿತ್ರದಲ್ಲಿ ಪೃಥ್ವಿರಾಜ್ ನಟಿಸಿದ್ದರು. ಈಗ ‘ಸಲಾರ್ 2’ ಚಿತ್ರಕ್ಕಾಗಿ ಅವರು ರೆಡಿ ಆಗುತ್ತಿದ್ದಾರೆ. ಈಗ ಅವರು ಈ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ನಿಜವಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇದನ್ನೂ ಓದಿ
ಸುಹಾಸಿನಿ ಸರಳತೆ; ಬೀದಿ ಬದಿ ಕಲಾವಿದ ಹಾಡು ಕೇಳಿ ಮೆಚ್ಚುಗೆ
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?
ಕಿಚ್ಚ ಸುದೀಪ್-ರಾಜೇಶ್ ಕೃಷ್ಣನ್ ಹಾಡಿನ್ ಜುಗಲ್​ಬಂದಿ; ಅಪರೂಪದ ವಿಡಿಯೋ
ಎ,ಓಂ ಚಿತ್ರವನ್ನು ನಾನು ಮಾಡಿದ್ದರೆ ನಿವೃತ್ತಿ ಪಡೆಯುತ್ತಿದ್ದೆ; ಸುಕುಮಾರ್

ಪೃಥ್ವಿರಾಜ್ ಅವರು ‘ಲುಸಿಫರ್’ ಹಾಗೂ ‘ಎಲ್​ 2: ಎಂಪುರಾನ್’ ಚಿತ್ರಗಳನ್ನು ನಿರ್ದೇಶಿಸಿದ್ದು ಇದಕ್ಕೆ ಮೋಹನ್​ಲಾಲ್ ಅವರು ಹೀರೋ. ಮೋಹನ್​ಲಾಲ್ ಅವರ ಸ್ಟಾರ್​ಗಿರಿಗೆ ತಕ್ಕಂತೆ ಸಿನಿಮಾನ ಕಟ್ಟಿಕೊಟ್ಟಿದ್ದರು. ಅಷ್ಟು ದೊಡ್ಡ ಹೀರೋನ ಉತ್ತಮವಾಗಿ ನಿಭಾಯಿಸಿದ್ದರು ಪೃಥ್ವಿರಾಜ್. ಈಗ ಹೃತಿಕ್ ಸಿನಿಮಾದ ಜವಾಬ್ದಾರಿಯನ್ನು ಹೊಂಬಾಳೆ ಇವರಿಗೆ ವಹಿಸಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಾವು ಸಂಭವಿಸಿದ್ದು ಕಾಂತಾರ ಚಿತ್ರೀಕರಣದ ವೇಳೆ ಅಲ್ಲ: ಹೊಂಬಾಳೆ ಫಿಲ್ಮ್ಸ್​ ಸ್ಪಷ್ಟನೆ

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುವ ಸಿನಿಮಾ ಒಂದನ್ನು ಪೃಥ್ವಿರಾಜ್ ಅವರು ನಿರ್ದೇಶನ ಮಾಡಬೇಕಿದೆ. ಈ ಸಂಸ್ಥೆ ಪೃಥ್ವಿರಾಜ್ ಕಾಲ್​ಶೀಟ್ ಪಡೆದು ಸಾಕಷ್ಟು ಸಮಯ ಆಗಿದೆ. ಈಗ ಅದಕ್ಕೆ ಮುಹೂರ್ತ ಕೂಡಿ ಬಂದಿದೆ ಎಂದು ಹೇಳಲಾಗುತ್ತಿದೆ. ಹೃತಿಕ್ ರೋಷನ್ ಅವರಿಗೆ ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಅವರ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.