ರವಿಚಂದ್ರನ್​ಗೆ ಜೂಜು ಎಂದರೆ ಇಷ್ಟವಿಲ್ಲ ಏಕೆ? ವಿವರಿಸಿದ್ದ ನಟ

ರವಿಚಂದ್ರನ್ ಅವರಿಗೆ ಇಂದು 64ನೇ ಹುಟ್ಟುಹಬ್ಬ. ನಟ, ನಿರ್ದೇಶಕ, ನಿರ್ಮಾಪಕರಾಗಿ ಅವರ ಸಾಧನೆ ಅಪಾರ. ಅವರ ಹಳೆಯ ಸಂದರ್ಶನದಲ್ಲಿ ಚಿತ್ರರಂಗವೇ ತನ್ನ ಜೂಜು ಎಂದು ಹೇಳಿಕೊಂಡಿದ್ದರು. ತಮ್ಮ ತಂದೆಯ ರೇಸ್ ಕೋರ್ಸ್ ಹವ್ಯಾಸದ ಬಗ್ಗೆಯೂ ಮಾತನಾಡಿದ್ದರು. ‘ಪ್ರೇಮಲೋಕ 2’ ಸಿನಿಮಾದ ಅಪ್ಡೇಟ್ಗಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ.

ರವಿಚಂದ್ರನ್​ಗೆ ಜೂಜು ಎಂದರೆ ಇಷ್ಟವಿಲ್ಲ ಏಕೆ? ವಿವರಿಸಿದ್ದ ನಟ
ರವಿಚಂದ್ರನ್
Updated By: ರಾಜೇಶ್ ದುಗ್ಗುಮನೆ

Updated on: May 30, 2025 | 8:44 AM

ನಟ ರವಿಚಂದ್ರನ್ (Ravichandran) ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರಿಗೆ ಈಗ 64 ವರ್ಷ. ಈ ವಯಸ್ಸಿನಲ್ಲೂ ಅವರು ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ನಿರ್ದೇಶನದ ‘ಪ್ರೇಮಲೋಕ 2’ ಸಿನಿಮಾ ಬರಲಿದೆ ಎಂದು ಈ ಮೊದಲು ಘೋಷಣೆ ಮಾಡಿದ್ದರು. ಅದರ ಬಗ್ಗೆ ಇಂದು ಅಪ್​ಡೇಟ್ ಸಿಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಹೀಗಿರುವಾಗಲೇ ಅವರ ಹಳೆಯ ಸಂದರ್ಶನದಲ್ಲಿ ಅವರು ಜೂಜಿನ ಬಗ್ಗೆ ಆಡಿದ ಮಾತನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ರವಿಚಂದ್ರನ್ ಅವರು ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಸಿನಿಮಾದಲ್ಲಿನ ಹಾಡುಗಳು ಸಾಕಷ್ಟು ಗಮನ ಸೆಳೆದಿವೆ. ಅವರು ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿ ಕೈ ಸುಟ್ಟಿಕೊಂಡಿದ್ದು ಇದೆ. ಆದರೆ, ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಅವರೇ ಹೇಳಿದಂತೆ ಚಿತ್ರವೇ ಅವರಿಗೆ ಜೂಜು. ಇದನ್ನು ಬಿಟ್ಟು ಬೇರೆ ಜೂಜು ಬೇಡ ಎಂದು ಅವರು ಹೇಳಿಕೊಂಡಿದ್ದರು.

ರವಿಚಂದ್ರನ್ ಅವರ ತಂದೆ ವೀರಸ್ವಾಮಿ ರೇಸ್​ಕೋರ್ಸ್ ಹೋಗುತ್ತಿದ್ದರಂತೆ. ಅವರು ಟರ್ಫ್​ ಕ್ಲಬ್​ನ ಸದಸ್ಯರು ಕೂಡ ಆಗಿದ್ದರು. ಆದರೆ, ರವಿಚಂದ್ರನ್​ಗೆ ಅದು ಇಷ್ಟ ಇರಲಿಲ್ಲ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ವಿವರಿಸಿದ್ದು ಹೀಗೆ.

ಇದನ್ನೂ ಓದಿ
ಎಚ್​ಎಸ್​ ವೆಂಕಟೇಶ​ಮೂರ್ತಿ ನಿಧನ; ಖ್ಯಾತ ಸಾಹಿತಿ, ಕವಿ ಇನ್ನಿಲ್ಲ
ಹೊಂಬಾಳೆ ನಿರ್ಮಾಣದ ಹೃತಿಕ್ ಚಿತ್ರಕ್ಕೆ ದಕ್ಷಿಣದ ಖ್ಯಾತ ಹೀರೋ ಡೈರೆಕ್ಷನ್
ಸುಹಾಸಿನಿ ಸರಳತೆ; ಬೀದಿ ಬದಿ ಕಲಾವಿದ ಹಾಡು ಕೇಳಿ ಮೆಚ್ಚುಗೆ
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದು ಕರೆದ ಅಭಿಮಾನಿ; ನಟಿಯ ಪ್ರತಿಕ್ರಿಯೆ ಏನು?

‘ನನಗೆ ಓದು ಕಡಿಮೆ. ಚಿತ್ರರಂಗದಲ್ಲೇ ಹೆಚ್ಚು ಆಸಕ್ತಿ. ತಂದೆ ರೇಸ್​ಕೋರ್ಸ್​ಗೆ ಹೋಗುತ್ತಿದ್ದರು. ನಾನೇ ಅವರನ್ನು ಬಿಟ್ಟು ಬರುತ್ತಿದ್ದೆ. ಸಿನಿಮಾನೇ ನನಗೆ ಜೂಜಾಟ. ನನ್ನ ತಂದೆ ನಿಧನದ ಬಳಿಕ ಟರ್ಫ್​ಕ್ಲಬ್ ಮೆಂಬರ್​ಶಿಪ್ ರದ್ದು ಮಾಡಿದೆ. ನನ್ನನ್ನು ನಾನು ಅರಿತುಕೊಳ್ಳಬೇಕಿತ್ತು. ನಾನು ಶೂಟಿಂಗ್​ನಲ್ಲಿ ಇರ್ತೀನಿ ಇಲ್ಲವೇ ಮನೆಯಲ್ಲಿ ಇರ್ತೀನಿ. ನಾನು ಯಾವುದೇ ಸಿನಿಮಾ ನೋಡಿ ಬರೆಯೊಲ್ಲ. ಕೂತುಕೊಂಡು ಬರೆದಿರೋ ಸಿನಿಮಾಗಳು ಇವು’ ಎಂದಿದ್ದರು ಅವರು.

ಇದನ್ನೂ ಓದಿ: ರಾಕೇಶ್ ನಿಧನದ ಬಳಿಕ ನಟ ರವಿಚಂದ್ರನ್​ಗೆ ಕಡಿಮೆ ಆಯಿತು ಜೀವನದ ಮೇಲಿನ ನಂಬಿಕೆ

ರವಿಚಂದ್ರನ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಆಗಿನ ಕಾಲದಲ್ಲೇ ಹಲವು ಭಾಷೆಗಳಲ್ಲಿ ಏಕ ಕಾಲಕ್ಕೆ ಸಿನಿಮಾನ ಶೂಟ್ ಮಾಡಿ  ಅವರು ಬಿಡುಗಡೆ ಮಾಡಿದರು. ಇದು ಅವರ ಹೆಚ್ಚುಗಾರಿಕೆ. ಈಗಲೂ ಸಿನಿಮಾ ನಿರ್ಮಾಣದಲ್ಲೇ ಅವರ ತುಡಿತ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.