Rishab Shetty: ದೇಶಾದ್ಯಂತ ‘ಕಾಂತಾರ’ ಗೆದ್ದಿದ್ದು ಯಾಕೆ? ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ರಿಷಬ್​ ಶೆಟ್ಟಿ

Kantara Movie | Chetan Bhagat: ‘ಕಾಂತಾರ’ ಸಿನಿಮಾ ದೇಶಾದ್ಯಂತ ಯಶಸ್ಸು ಕಂಡಿದ್ದಕ್ಕೆ ಕಾರಣ ಏನು ಇರಬಹುದು ಎಂದು ರಿಷಬ್​ ಶೆಟ್ಟಿ ವಿಶ್ಲೇಷಣೆ ಮಾಡಿದ್ದಾರೆ. ಈ ಕುರಿತು ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Rishab Shetty: ದೇಶಾದ್ಯಂತ ‘ಕಾಂತಾರ’ ಗೆದ್ದಿದ್ದು ಯಾಕೆ? ಬಹಿರಂಗ ವೇದಿಕೆಯಲ್ಲಿ ಕಾರಣ ತಿಳಿಸಿದ ರಿಷಬ್​ ಶೆಟ್ಟಿ
ರಿಷಬ್ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on:Nov 27, 2022 | 5:17 PM

ಕನ್ನಡದ ‘ಕಾಂತಾರ’ ಸಿನಿಮಾ (Kantara Movie) ದೇಶಾದ್ಯಂತ ಈ ಪರಿ ಯಶಸ್ಸು ಕಾಣುತ್ತದೆ ಎಂದು ಬಹುತೇಕರು ನಿರೀಕ್ಷಿಸಿರಲಿಲ್ಲ. ಸೆ.30ರಂದು ಸಿನಿಮಾ ಬಿಡುಗಡೆ ಆದ ಬಳಿಕ ಜನರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಕ್ಕಿತು. ನಂತರ ಬೇರೆ ಭಾಷೆಗಳಿಗೂ ಡಬ್​ ಆಗಿ ಅಲ್ಲಿಯೂ ಉತ್ತಮ ಪ್ರದರ್ಶನ ಕಾಣಲು ಆರಂಭಿಸಿತು. ಅಂತಿಮವಾಗಿ ಈ ಚಿತ್ರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿ ಸೈ ಎನಿಸಿಕೊಂಡಿತು. ‘ಕಾಂತಾರ’ ಸಿನಿಮಾದಿಂದ ನಟ, ನಿರ್ದೇಶಕ ರಿಷಬ್​ ಶೆಟ್ಟಿ (Rishab Shetty) ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತು. ಇಂದು ಅನೇಕ ಕಾರ್ಯಕ್ರಮಗಳಿಗೆ ಅವರು ಅತಿಥಿಯಾಗಿ ತೆರಳುತ್ತಿದ್ದಾರೆ. ಇತ್ತೀಚೆಗೆ ಅವರು ಖ್ಯಾತ ಲೇಖಕ ಚೇತನ್​ ಭಗತ್​ (Chetan Bhagat) ಜೊತೆ ‘ಕಾಂತಾರ’ ಯಶಸ್ಸಿನ ಕುರಿತು ಮಾತನಾಡಿದ್ದಾರೆ.

‘ಟೈಮ್ಸ್​ ನೌ ಸಮಿಟ್​ 2022’ ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ನಟ ಅನುಪಮ್​ ಖೇರ್​, ಲೇಖಕ ಚೇತನ್​ ಭಗತ್​ ಜೊತೆ ರಿಷಬ್​ ಶೆಟ್ಟಿ ಅವರು ಚರ್ಚೆ ನಡೆಸಿದ್ದಾರೆ. ಈ ವೇಳೆ ಬಾಲಿವುಡ್​ ಸಿನಿಮಾಗಳ ಸೋಲು ಮತ್ತು ದಕ್ಷಿಣ ಭಾರತದ ಚಿತ್ರಗಳ ಗೆಲುವಿನ ಬಗ್ಗೆ ಮಾತನಾಡಲಾಗಿದೆ. ಅದರಲ್ಲಿ ‘ಕಾಂತಾರ’ ಚಿತ್ರವನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಲಾಯ್ತು. ಈ ವೇಳೆ ಮಾತನಾಡುತ್ತ, ತಮ್ಮ ಸಿನಿಮಾ ದೇಶಾದ್ಯಂತ ಯಶಸ್ಸು ಕಂಡಿದ್ದಕ್ಕೆ ಕಾರಣ ಏನು ಇರಬಹುದು ಎಂದು ರಿಷಬ್​ ಶೆಟ್ಟಿ ವಿಶ್ಲೇಷಣೆ ಮಾಡಿದ್ದಾರೆ.

‘ಲಾಕ್​ಡೌನ್​ ಬಳಿಕ ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ನಮ್ಮ ನೆಲೆದ ಕಥೆಗಳನ್ನು ಹೆಚ್ಚಾಗಿ ವೀಕ್ಷಿಸಲು ಬಯಸುತ್ತಿದ್ದಾರೆ. ಭಾರತದ ಬಹುತೇಕ ಕಮರ್ಷಿಯಲ್​ ಸಿನಿಮಾಗಳು ಪಾಶ್ಚಿಮಾತ್ಯ ಚಿತ್ರಗಳಿಗೆ ಪ್ರಭಾವಿತ ಆಗಿರುತ್ತವೆ. ಭಾರತದ ನೆಲದ ಕಥೆಗಳು ಒಟಿಟಿಯಲ್ಲಿ ಸಿಗಲ್ಲ. ಅದು ಸಿಗೋದು ನಮ್ಮ ಹಳ್ಳಿಗಳಲ್ಲಿ’ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ
Image
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Image
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Image
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Image
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

‘ಕಾಂತಾರ ಚಿತ್ರದಲ್ಲಿ ನಾನು ನನ್ನ ಹಳ್ಳಿಯ ಕಥೆಯನ್ನು ಹೇಳಿದ್ದೇನೆ. ಪ್ರಾದೇಶಿಕ ವಿಷಯವೇ ಹೆಚ್ಚು ಸಾರ್ವತ್ರಿಕ ಆಗುತ್ತದೆ ಅಂತ ನಾನು ನಂಬಿದ್ದೇನೆ. ದೈವಾರಾಧನೆ ಬಗ್ಗೆ ನಾವು ಸಿನಿಮಾ ಮಾಡಿದ್ದೇವೆ. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ನಮ್ಮ ಬದುಕಿನ ಶೈಲಿ ಕೃಷಿಗೆ ಅಂಟಿಕೊಂಡಿರುತ್ತದೆ. ಕಾಂತಾರದಲ್ಲಿ ದೈವಾರಾಧನೆ ತೋರಿಸಿದ ರೀತಿಯೇ ದೇಶದ ಪ್ರತಿ ಹಳ್ಳಿಯ ಜನರು ಒಂದು ಶಕ್ತಿಯನ್ನು ನಂಬುತ್ತಾರೆ. ಅದು ನಮ್ಮೆಲ್ಲರ ಭಾವನೆಯ ವಿಷಯ. ಪ್ರಾಯಶಃ ಆ ವಿಚಾರವೇ ಎಲ್ಲರಿಗೂ ಕನೆಕ್ಟ್​ ಆಗಿದೆ’ ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

‘ಭಾರತೀಯ ಚಿತ್ರರಂಗಕ್ಕೆ ಹಿಂದಿ ಸಿನಿಮಾಗಳ ದೊಡ್ಡ ಕೊಡುಗೆ ಇದೆ. ಅವು ಕೂಡ ಗೆಲ್ಲುತ್ತಿವೆ. ದಿ ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ನಾವು ಏನು ಹೇಳಬೇಕು’ ಎಂದು ಹೇಳುವ ಮೂಲಕ ಬಾಲಿವುಡ್​ನಲ್ಲೂ ಗೆಲ್ಲುವ ಚಿತ್ರಗಳು ಬರುತ್ತಿವೆ ಎಂದು ರಿಷಬ್​ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:17 pm, Sun, 27 November 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ