AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡುಗಡೆ ಆಯ್ತು ‘ಅಯೋಗ್ಯ 2’ ಸಿನಿಮಾದ ಹೊಸ ಹಾಡು

Ayogya 2 movie: ಎಂಟು ವರ್ಷ ಹಿಂದೆ ರಿಲೀಸ್ ಆಗಿದ್ದ ‘ಅಯೋಗ್ಯ’ ಸಿನಿಮಾದ ಕಾಮಿಡಿ, ಹಾಡುಗಳು, ಆಕ್ಷನ್ ಎಲ್ಲವೂ ಜನರಿಗೆ ಇಷ್ಟವಾಗಿತ್ತು. ಇದೀಗ ಅದೇ ತಂಡ ‘ಅಯೋಗ್ಯ 2’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಹೊಸ ಹಾಡೊಂದು ಇಂದು (ಜೂನ್ 20) ಬಿಡುಗಡೆ ಆಗಿದೆ. ಸಿನಿಮಾದ ಹಾಡು ಬಿಡುಗಡೆಗಾಗಿ ವಿಶೇಷ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು. ಇಂದು (ಜೂನ್ 20) ನಟ ಸತೀಶ್‌ ಹುಟ್ಟುಹಬ್ಬ ಆಗಿದ್ದು, ಇದೇ ದಿನ ಹಾಡು ಬಿಡುಗಡೆ ಮಾಡಲಾಗಿದೆ.

ಬಿಡುಗಡೆ ಆಯ್ತು ‘ಅಯೋಗ್ಯ 2’ ಸಿನಿಮಾದ ಹೊಸ ಹಾಡು
Ayogya 2
ಮಂಜುನಾಥ ಸಿ.
|

Updated on:Jun 20, 2026 | 10:46 PM

Share

ಸತೀಶ್‌ ನಿನಾಸಂ (Satish Neenasam) ಹಾಗೂ ರಚಿತಾ ರಾಮ್‌ ಅಭಿನಯದ ‘ಅಯೋಗ್ಯ’ ಸಿನಿಮಾ ಹಿಟ್ ಆಗಿತ್ತು. ಸಿನಿಮಾದ ಕಾಮಿಡಿ, ಹಾಡುಗಳು, ಆಕ್ಷನ್ ಎಲ್ಲವೂ ಜನರಿಗೆ ಇಷ್ಟವಾಗಿತ್ತು. ಇದೀಗ ಅದೇ ತಂಡ ‘ಅಯೋಗ್ಯ 2’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಹೊಸ ಹಾಡೊಂದು ಇಂದು (ಜೂನ್ 20) ಬಿಡುಗಡೆ ಆಗಿದೆ. ಸಿನಿಮಾದ ಹಾಡು ಬಿಡುಗಡೆಗಾಗಿ ವಿಶೇಷ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು. ಇಂದು (ಜೂನ್ 20) ನಟ ಸತೀಶ್‌ ಹುಟ್ಟುಹಬ್ಬ ಆಗಿದ್ದು, ಇದೇ ದಿನ ಹಾಡು ಬಿಡುಗಡೆ ಮಾಡಲಾಗಿದೆ.

‘ಅಯೋಗ್ಯ 2’ ಸಿನಿಮಾದ ‘ಪುಟ್‌ ಲಕ್ಷ್ಮೀ’ ಹಾಡನ್ನ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಮತ್ತು ಇತರೆ ಕೆಲವು ಪ್ರಮುಖರು ಬಿಡುಗಡೆ ಮಾಡಿದರು. ಹಾಡು ಬಿಡುಗಡೆ ಮಾಡಿ ಮಾತನಾಡಿದ ಅರ್ಜುನ್‌ ಜನ್ಯ, ‘ಈ 22 ವರ್ಷದಲ್ಲಿ ಇದೇ ಮೊದಲ ಬಾರಿಗೆ ನಾನು ಹಾಡೋಂದನ್ನ ಗೆಸ್ಟ್‌ ಆಗಿ ಬಿಡುಗಡೆ ಮಾಡ್ತಿರೋದು ಎಂದರು. ಹಾಡು ಹಾಡಿರೋ ಪೃಥ್ವಿ ಭಟ್‌ ತುಂಬಾ ಚೆನ್ನಾಗಿ ಹಾಡಿದ್ದಾರೆ ಎಂಟು ವರ್ಷದ ಹಿಂದೆ ‘ಅಯೋಗ್ಯ’ ಸಿನಿಮಾಗೆ ಹಾಡು ಕಂಪೋಸ್ ಮಾಡುವಾಗ ದಿನಗಳು ಹೇಗಿತ್ತು ಅನ್ನೋ ಹಳೆಯ ದಿನಗಳನ್ನು ಅವರು ನೆನಪು ಮಾಡಿಕೊಂಡರು.

ನಿರ್ದೇಶಕ ಮಹೇಶ್‌ ಕುಮಾರ್‌ ಮಾತನಾಡಿ ಇಡೀ ತಂಡದ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು. ಎಂಟು ವರ್ಷದ ನಂತರ ಬರ್ತಿದ್ದೀವಿ, ಈ ಹಾಡು ನಿಮ್ಮೆಲ್ಲರಿಗೂ ಖುಷಿ ಕೊಡುತ್ತೆ. ಶೂಟ್‌ ಸಮಯದಲ್ಲಿ ನಡೆದ ಘಟನೆಗಳನ್ನ ಮೆಲುಕು ಹಾಕಿದರು . ‘ಅಯೋಗ್ಯ’ ಸಿನಿಮಾಗಿಂತಲೂ ಅಯೋಗ್ಯ 2 ಚಿತ್ರದಲ್ಲಿ ಹೆಚ್ಚು ಎಂಟರ್ಟೈನ್ಮೆಂಟ್‌ ಇದೆ ಎಂದರು.

ಇದನ್ನೂ ಓದಿ: ‘ಕಾಲಘಟ್ಟ’ ಟ್ರೈಲರ್ ರಿಲೀಸ್, ಸಿನಿಮಾ ಬಗ್ಗೆ ಚಿತ್ರತಂಡ ಹೇಳಿದ್ದೇನು?

ಇನ್ನು ನಟ ಸತೀಶ್‌ ನಿನಾಸಂ ಹಾಗೂ ನಟಿ ರಚಿತಾ ರಾಮ್‌ ಇಬ್ಬರು ಒಟ್ಟಿಗೆ ವೇದಿಕೆಗೆ ಬಂದು ಹಾಡನ್ನ ಬರೆದಿರುವ ಚೇತನ್‌ ಕುಮಾರ್‌ ,ಹಾಡಿರೋ ಸಿದ್‌ ಶ್ರೀರಾಮ್‌ ಪೃಥ್ವಿ ಭಟ್‌ ಅವರಿಗೆ ಧನ್ಯವಾದ ಹೇಳಿದರು. ಜೊತೆಯಲ್ಲಿ ನಟಿಸಿದಕ್ಕಾಗಿ ಇಬ್ಬರು ಪರಸ್ಪರ ಧನ್ಯವಾದ ತಿಳಿಸಿದರು. ‘ಅಯೋಗ್ಯ 2’ ಸಿನಿಮಾವನ್ನು ಮುನೇಗೌಡ ನಿರ್ಮಾಣ ಮಾಡುತ್ತಿದ್ದಾರೆ. ‘ಅಯೋಗ್ಯ 2’ ಚಿತ್ರದ ಆಡಿಯೋ ಹಕ್ಕು ಒಳ್ಳೆಯ ಬೆಲೆಗೆ ಮಾರಾಟ ಆಗಿದೆ. ಆನಂದ್ ಆಡಿಯೋ ರೂ 2 ಕೋಟಿ ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದೆಯಂತೆ.

ಸಂಭಾಷಣೆಕಾರ ಮಾಸ್ತಿ ಮಾತನಾಡಿ ‘ಅಯೋಗ್ಯ 2’ ಸಿನಿಮಾದ ಡೈಲಾಗ್ಸ್‌ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ತಂಡದ ಜೊತೆ ಕೆಲಸ ಮಾಡೋದೇ ಖುಷಿ ಎಂದರು. ಸಿನಿಮಾದಲ್ಲಿ ಅಭಿನಯಿಸಿರೋ ಶಿವರಾಜ್‌ ಕೆಆರ್‌ ಪೇಟೆ , ಮಂಜು ಪಾವಗಡ ಹಾಗೂ ಕಿರಣ್‌ ನಾಯ್ಕ್‌ ಅಯೋಗ್ಯ೨ ಸಿನಿಮಾ ಅವಕಾಶ ಸಿಕ್ಕಿದ್ದು ಖುಷಿ ಇದೇ ಹೆಚ್ಚು ಕಲಾವಿದರು ಇರೋದ್ರಿಂದ ಎಂಟರ್ಟೈನೆಮೆಂಟ್‌ ಕೂಡ ಹೆಚ್ಚಾಗಿರುತ್ತೆ ಎಂದರು. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ. ಸಿನಿಮಾದ ಪ್ರಚಾರ ಕೆಲಸ ಶುರುವಾಗಿದ್ದು ಆಗಸ್ಟ್‌ 14 ರಂದು ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:16 pm, Sat, 20 June 26

Follow Us
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ