AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್​​ಗೆ ಶಿವಣ್ಣ ಬಗ್ಗೆ ಇರೋ ಕೇರ್​ ನೋಡಿ; ಕಣ್ಣಲ್ಲೆ ಸನ್ನೆ ಕೊಟ್ಟ ರಾಕಿ

'ಟಾಕ್ಸಿಕ್' ಸಿನಿಮಾದ ಈವೆಂಟ್‌ನಲ್ಲಿ ನಟ ಯಶ್ ಅವರು ಹಿರಿಯ ನಟ ಶಿವರಾಜ್‌ಕುಮಾರ್ ಅವರ ಮೇಲಿಟ್ಟಿರುವ ಗೌರವ ಹಾಗೂ ಕಾಳಜಿ ಎಲ್ಲರ ಗಮನ ಸೆಳೆದಿದೆ. ಕಾರ್ಯಕ್ರಮದಿಂದ ಅರ್ಧಕ್ಕೆ ತೆರಳಿದ ಶಿವಣ್ಣ ಅವರನ್ನು ಕಾರಿನವರೆಗೆ ಸುರಕ್ಷಿತವಾಗಿ ಕಳುಹಿಸಲು ತಮ್ಮ ಬಾಡಿಗಾರ್ಡ್‌ಗೆ ಸೂಚಿಸಿದ ಯಶ್ ಅವರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

ಯಶ್​​ಗೆ ಶಿವಣ್ಣ ಬಗ್ಗೆ ಇರೋ ಕೇರ್​ ನೋಡಿ; ಕಣ್ಣಲ್ಲೆ ಸನ್ನೆ ಕೊಟ್ಟ ರಾಕಿ
ಯಶ್ Image Credit source: Neelakkuyil Entertainments Instagram
ರಾಜೇಶ್ ದುಗ್ಗುಮನೆ
|

Updated on:Aug 10, 2026 | 10:42 AM

Share

ಮುಖ್ಯಾಂಶಗಳು

  • ಶಿವಣ್ಣನಿಗೆ ಗೌರವ ತೋರಿದ ರಾಕಿ ಭಾಯ್
  • ಬಾಡಿಗಾರ್ಡ್‌ಗೆ ಕಣ್ಣಲ್ಲೇ ಸನ್ನೆ ಮಾಡಿದ ಯಶ್
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವೀಡಿಯೋ

ರಾಕಿಂಗ್ ಸ್ಟಾರ್ ಯಶ್ ಅವರು ತುಂಬಾನೇ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಅವರು ಈಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ‘ಟಾಕ್ಸಿಕ್’ (Toxic Movie) ಹಾಗೂ ರಾಮಾಯಣದಂತಹ ಬಿಗ್ ಬಜೆಟ್ ಸಿನಿಮಾ ಅವರ ಕೈಯಲ್ಲಿ ಇದೆ. ಇಷ್ಟೆಲ್ಲ ಎತ್ತರಕ್ಕೆ ಬೆಳೆದರೂ ಅವರಿಗೆ ತಮಗಿಂತಲೂ ಹಿರಿಯ ನಟರ ಮೇಲೆ ಇರುವ ಗೌರವ ಹಾಗೂ ಪ್ರೀತಿ ಸ್ವಲ್ಪವೂ ಕಡಿಮೆ ಆಗಿಲ್ಲ. ಇದಕ್ಕೆ ಇತ್ತೀಚೆಗೆ ರಿಲೀಸ್ ಆದ ‘ಟಾಕ್ಸಿಕ್’ ಈವೆಂಟ್​​​ನಲ್ಲಿ ನಡೆದ ಘಟನೆಯೇ ಉತ್ತಮ ಸಾಕ್ಷಿ.

‘ಟಾಕ್ಸಿಕ್’ ಸಿನಿಮಾದ ಈವೆಂಟ್ ಬೆಂಗಳೂರಿನ ಎಎಂಬಿ ಸಿನಿಮಾಸ್​​ನಲ್ಲಿ ನಡೆದಿದೆ. ಈ ಈವೆಂಟ್​​ಗೆ ಇಡೀ ಟಾಕ್ಸಿಕ್ ತಂಡ ಹಾಜರಿತ್ತು. ಕಿಯಾರಾ ಅಡ್ವಾಣಿ, ನಯನತಾರಾ ಸೇರಿದಂತೆ ಅನೇಕರು ವೇದಿಕೆ ಮೇಲೆ ಇದ್ದರು. ಶಿವರಾಜ್​ಕುಮಾರ್ ಅವರು ಟಾಕ್ಸಿಕ್ ಟ್ರೇಲರ್ ಲಾಂಚ್​​ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ವೇದಿಕೆ ಮೇಲೆ ಬಂದು ಇಡೀ ತಂಡಕ್ಕೆ ಹರಸಿದರು.

‘ಟಾಕ್ಸಿಕ್’ ಟ್ರೇಲರ್ ಲಾಂಚ್ ಮಾಡಿದ ಬಳಿಕ ಶಿವರಾಜ್​ಕುಮಾರ್ ಬೇರೆ ಅನಿವಾರ್ಯ ಕಾರಣದಿಂದ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರಟು ನಿಂತರು. ಆಗ ಶಿವಣ್ಣ ಅವರು ತಮ್ಮ ಬಾಡಿಗಾರ್ಡ್​ಗೆ ಕಣ್ಣಲ್ಲೇ ಸನ್ನೆ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.

‘ಶಿವಣ್ಣ ಹೊರಟಿದ್ದಾರೆ. ಅವರನ್ನು ಕಾರಿನವರೆಗೆ ಬಿಟ್ಟು ಬನ್ನಿ’ ಎಂದು ರಾಕಿ ಭಾಯ್ ತಮ್ಮ ಬಾಡಿಗಾರ್ಡ್​​ಗೆ ಹೇಳಿದರು. ತಕ್ಷಣ ಬಾಡಿಗಾರ್ಡ್ ಶಿವರಾಜ್‌ಕುಮಾರ್ ಅವರಿಗೆ ಬೆಂಗಾವಲಾಗಿ ಕಾರಿನವರೆಗೆ ಬಿಟ್ಟು ಬಂದಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಯಶ್ ಅವರ ಈ ಕಾಳಜಿಯನ್ನು ಎಲ್ಲರೂ ಕೊಂಡಾಡಿದ್ದಾರೆ.

ಇದನ್ನೂ ಓದಿ: ವೈರಲ್ ಆಗುತ್ತಿದೆ ಯಶ್ ಬೆತ್ತಲೇ ಸೀನ್​​, ರಣ್​​ಬೀರ್ ಕಪೂರ್ ಜೊತೆ ಹೋಲಿಕೆ ಏಕೆ?

ಶಿವಣ್ಣನಿಗೆ ಅವರದ್ದೇ ಆದ ಬಾಡಿಗಾರ್ಡ್ ಇರುತ್ತಾರೆ. ಅವರು ಕಾರ್ಯಕ್ರಮದಿಂದ ಹೊರಟು ನಿಂತಾಗ ಯಶ್ ಆ ಬಗ್ಗೆ ತಲೆಕೆಡಿಸಿಕೊಳ್ಳದೆಯೂ ಇರಬಹುದಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಶಿವರಾಜ್​​ಕುಮಾರ್ ಬಗ್ಗೆ ನಿಜವಾದ ಕಾಳಜಿ ತೋರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:40 am, Mon, 10 August 26

Follow Us
ರಸ್ತೆ ಗುಂಡಿಯಲ್ಲಿ 'ಕೆರೆ-ದಂಡೆ' ಆಟ
ರಸ್ತೆ ಗುಂಡಿಯಲ್ಲಿ 'ಕೆರೆ-ದಂಡೆ' ಆಟ
ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆ: ಎರಡನೇ ದಿನಕ್ಕೆ HDD ಸಾಥ್
ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಪಾದಯಾತ್ರೆ: ಎರಡನೇ ದಿನಕ್ಕೆ HDD ಸಾಥ್
ಇಂದು ಪಾಪನಾಶಿನಿ ದ್ವಾದಶಿ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಪಾಪನಾಶಿನಿ ದ್ವಾದಶಿ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಗಲ್ಲ ಅಂದ್ರೆ ಹೋಗ್ರಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ
ಆಗಲ್ಲ ಅಂದ್ರೆ ಹೋಗ್ರಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ
ಕಾಂಗ್ರೆಸ್​​ಗೆ ಹತ್ತಿರವಾಗುತ್ತಿದ್ದಾರಾ ಬಿಜೆಪಿಯ ಪ್ರೀತಂಗೌಡ?
ಕಾಂಗ್ರೆಸ್​​ಗೆ ಹತ್ತಿರವಾಗುತ್ತಿದ್ದಾರಾ ಬಿಜೆಪಿಯ ಪ್ರೀತಂಗೌಡ?
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ KSRTC ಬಸ್​​
ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ KSRTC ಬಸ್​​
ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ
ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ
ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ
ಯತೀಂದ್ರಗೆ ಮತ್ತೊಂದು ಜಾಕ್​​ ಪಾಟ್, ಸಿದ್ದರಾಮಯ್ಯ ಮುನಿಸು ತಣಿಸುವ ಪ್ರಯತ್ನ