ನಾಯಕನ ಪತ್ನಿಯಿಂದಾಗಿ ಅವಕಾಶ ಕಳೆದುಕೊಂಡಿದ್ದೆ: ತಾಪ್ಸಿ ಪನ್ನು
ಬಾಲಿವುಡ್ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಂಡಿದ್ದಾರೆ. ಧೈರ್ಯವಂತ ನಟಿಯೆಂದೇ ಹೆಸರಾಗಿರುವ ತಾಪ್ಸಿ ಪನ್ನು, ಸಂದರ್ಶನಗಳಲ್ಲಿ ಸಹ ಧೈರ್ಯವಾಗಿ ಮಾತನಾಡುತ್ತಾರೆ. ತಮ್ಮೊಂದಿಗೆ ಆದ ಕೆಟ್ಟ ಅನುಭವಗಳ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ಹಿಂದೊಮ್ಮೆ ಸಿನಿಮಾದ ನಾಯಕನ ಪತ್ನಿಯ ಕಾರಣಕ್ಕೆ ತಾವು ಸಿನಿಮಾ ಅವಕಾಶ ಕಳೆದುಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಮುಖ್ಯಾಂಶಗಳು
- ತಾಪ್ಸಿ ಪನ್ನು ಬಾಲಿವುಡ್ನ ಸ್ಟಾರ್ ನಟಿ
- ತಾಪ್ಸಿ ಪನ್ನು ದಕ್ಷಿಣ ಭಾರತದಲ್ಲೂ ನಟಿಸಿದ್ದಾರೆ.
- ತಮ್ಮೊಟ್ಟಿಗೆ ಆದ ಕೆಟ್ಟ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.
ತಾಪ್ಸಿ ಪನ್ನು, ಬಾಲಿವುಡ್ನ ಸ್ಟಾರ್ ನಟಿಯರಲ್ಲಿ ಒಬ್ಬರು. ಆದರೆ ಅವರಿಗೆ ಮೊದಲು ಅವಕಾಶ ಮತ್ತು ಯಶಸ್ಸು ಸಿಕ್ಕಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿ. ತೆಲುಗು ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ತಾಪ್ಸಿ ಪನ್ನು, ಈಗ ಬಾಲಿವುಡ್ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಾ ತಮ್ಮದೇ ಆದ ಅಭಿಮಾನಿ ವರ್ಗವನ್ನು ಸಂಪಾದಿಸಿಕೊಂಡಿದ್ದಾರೆ. ಧೈರ್ಯವಂತ ನಟಿಯೆಂದೇ ಹೆಸರಾಗಿರುವ ತಾಪ್ಸಿ ಪನ್ನು, ಸಂದರ್ಶನಗಳಲ್ಲಿ ಸಹ ಧೈರ್ಯವಾಗಿ ಮಾತನಾಡುತ್ತಾರೆ. ತಮ್ಮೊಂದಿಗೆ ಆದ ಕೆಟ್ಟ ಅನುಭವಗಳ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ಹಿಂದೊಮ್ಮೆ ಸಿನಿಮಾದ ನಾಯಕನ ಪತ್ನಿಯ ಕಾರಣಕ್ಕೆ ತಾವು ಸಿನಿಮಾ ಅವಕಾಶ ಕಳೆದುಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
ಸಿನಿಮಾ ಒಂದಕ್ಕೆ ಡೇಟ್ಸ್ ಅಂತಿಮಗೊಂಡ ನಂತರವೂ ತಮ್ಮನ್ನು ಸಿನಿಮಾದಿಂದ ಬದಲಾಯಿಸಲಾಯಿತು ಎಂದು ನಟಿ ನೆನಪಿಸಿಕೊಂಡಿದ್ದಾರೆ. ನಾಯಕನ ಪತ್ನಿಗೆ ನಾನು ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ತನ್ನನ್ನು ಸಿನಿಮಾದಿಂದ ಕೈಬಿಡಲಾಗಿದೆ ಎಂದು ತಮಗೆ ತಿಳಿಸಲಾಗಿತ್ತು ಎಂದು ತಾಪ್ಸಿ ಹೇಳಿದ್ದಾರೆ. ಒಂದು ಸಿನಿಮಾವನ್ನು ಕಳೆದುಕೊಳ್ಳಲು ತಾನು ಕೇಳಿದ ಅತ್ಯಂತ ಕಳಪೆ ಕಾರಣಗಳಲ್ಲಿ ಇದು ಒಂದು ಎಂದು ನಟಿ ಬಣ್ಣಿಸಿದ್ದಾರೆ.
ಒಬ್ಬ ನಟ ಅಥವಾ ನಟಿ ಒಂದು ಪ್ರಾಜೆಕ್ಟ್‌ಗೆ ಒಪ್ಪಿಗೆ ಸೂಚಿಸಿದಾಗ, ಆ ದಿನಗಳನ್ನು ಸಾಮಾನ್ಯವಾಗಿ ಬೇರೆಡೆಗೆ ನೀಡದೆ ಮೀಸಲಿಡಲಾಗುತ್ತದೆ. ಅಂದರೆ, ಇದರರ್ಥ ಇತರ ದೊಡ್ಡ ಅವಕಾಶಗಳೂ ಕೈತಪ್ಪಿಹೋಗಬಹುದು. ಆದರೆ ನಾನು ಡೇಟ್ಸ್ ಕೊಟ್ಟ ಬಳಿಕ, ನಾಯಕನ ಪತ್ನಿಗೆ ನಾನು ಇಷ್ಟವಾಗಲಿಲ್ಲ ಎಂದು ನನ್ನನ್ನು ಸಿನಿಮಾದಿಂದ ಕೈಬಿಡಲಾಯ್ತು’ ಎಂದು ತಾಪ್ಸಿ ಹೇಳಿದ್ದಾರೆ. ಆದರೆ ಈ ಕೆಟ್ಟ ಅನುಭವ ಅವರಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಆಯ್ತೇ ಅಥವಾ ಬಾಲಿವುಡ್ನಲ್ಲಿಯೇ ಎಂಬ ಬಗ್ಗೆ ಅವರು ಹೇಳಿಲ್ಲ.
ಇದನ್ನೂ ಓದಿ:ಈ ವಾರ ಒಟಿಟಿಗೆ ಬರುತ್ತಿವೆ ಹಲವು ಹಿಟ್ ಸಿನಿಮಾ, ನಿಮ್ಮ ಆಯ್ಕೆ ಯಾವುದು?
ಈ ಹಿಂದೆ ಅವರು ತೆಲುಗು ಚಿತ್ರರಂಗದ ಬಗ್ಗೆ ಮಾತನಾಡಿದ್ದರು, ‘ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಹಿಳೆಯರ ಸೊಂಟದ ಮೇಲೆ ವಿಪರೀತ ಪ್ರೀತಿ, ನಾನು ನಟಿಸಿದ ಮೊದಲ ಸಿನಿಮಾನಲ್ಲಿ ನನ್ನ ಸೊಂಟಕ್ಕೆ ತೆಂಗಿನ ಕಾಯಿಗಳನ್ನು ಎಸೆಯಲಾಗಿತ್ತು ಎಂದಿದ್ದರು. ಬಳಿಕ ಮತ್ತೊಂದು ಸಂದರ್ಶನದಲ್ಲಿ, ದಕ್ಷಿಣದಲ್ಲಿ ಸಂಪೂರ್ಣ ಪುರುಷ ಪ್ರಧಾನ ವ್ಯವಸ್ಥೆ ಇದೆ. ನಾಯಕಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ. ಸಿನಿಮಾದ ಕತೆಯಲ್ಲಿ ಬದಲಾವಣೆ, ನಾಯಕಿಯ ಡಬ್ಬಿಂಗ್ ಯಾರಿಂದ ಮಾಡಿಸಬೇಕು ಇತ್ಯಾದಿ ವಿಷಯಗಳನ್ನು ಸಹ ನಾಯಕಿಯರ ಬಳಿ ಅವರು ಕೇಳುವುದಿಲ್ಲ’ ಎಂದು ಹೇಳಿದ್ದರು. ಆಗೆಲ್ಲ ತಾಪ್ಸಿ ಬಗ್ಗೆ ಟೀಕೆ ಸಹ ಕೆಲವರು ವ್ಯಕ್ತಪಡಿಸಿದ್ದರು. ಆದರೆ ತಾಪ್ಸಿ ಅದಕ್ಕೆಲ್ಲ ತಲೆ ಕೆಡಿಸಿಕೊಂಡಿರಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




