AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಪ್ರಭಾಸ್ ಆಪ್ತ ಗೆಳೆಯ

Sharwananda movie: ಪ್ರಚಾರದ ವೇಳೆ ನಟರು ನಾನಾ ಅವತಾರಗಳೆತ್ತುತ್ತಾರೆ. ಇದ್ದಕ್ಕಿದ್ದಂತೆ ಪ್ರೇಕ್ಷಕರು ಭಗವಂತರಂತೆ ಕಾಣುತ್ತಾರೆ, ಪ್ರೇಕ್ಷಕರನ್ನು ತಮ್ಮ ಸಿನಿಮಾಗಳತ್ತ ಸೆಳೆಯಲು ಏನೇನೋ ಮಾಡುತ್ತಾರೆ. ಕೆಲವು ಕಣ್ಣೀರು ಸಹ ಹಾಕಿದ್ದುಂಟು. ಇದೀಗ ತೆಲುಗಿನ ಖ್ಯಾತ ನಟರೊಬ್ಬರು ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ.

ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಪ್ರಭಾಸ್ ಆಪ್ತ ಗೆಳೆಯ
Biker Movie
ಮಂಜುನಾಥ ಸಿ.
|

Updated on:Apr 05, 2026 | 4:05 PM

Share

ಸಿನಿಮಾ (Cinema) ಪ್ರಚಾರದ ವೇಳೆ ನಟರು ನಾನಾ ಅವತಾರಗಳೆತ್ತುತ್ತಾರೆ. ಇದ್ದಕ್ಕಿದ್ದಂತೆ ಪ್ರೇಕ್ಷಕರು ಭಗವಂತರಂತೆ ಕಾಣುತ್ತಾರೆ, ಪ್ರೇಕ್ಷಕರನ್ನು ತಮ್ಮ ಸಿನಿಮಾಗಳತ್ತ ಸೆಳೆಯಲು ಏನೇನೋ ಮಾಡುತ್ತಾರೆ. ಕೆಲವು ಕಣ್ಣೀರು ಸಹ ಹಾಕಿದ್ದುಂಟು. ಇದೀಗ ತೆಲುಗಿನ ಖ್ಯಾತ ನಟರೊಬ್ಬರು ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ನಟನ ಈ ವರ್ತನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನಾನಾ ರೀತಿಯ ಕಮೆಂಟ್​​ಗಳು ಹರಿದು ಬರುತ್ತಿವೆ.

ಪ್ರಭಾಸ್ ಅವರ ಆಪ್ತ ಗೆಳೆಯರೂ ಆಗಿರುವ ನಟ ಶರವಾನಂದ ಅವರು ‘ಬೈಕರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈ ಸಿನಿಮಾಕ್ಕಾಗಿ ಸಾಕಷ್ಟು ತೂಕ ಕಳೆದುಕೊಂಡು, ಫಿಟ್ ಆಗಿದ್ದು ಮಾತ್ರವೇ ಅಲ್ಲದೆ, ಬೈಕ್ ರೈಡಿಂಗ್ ಅನ್ನು ಸಹ ಕಲಿತಿದ್ದಾರೆ ಶರವಣ. ಸಿನಿಮಾನಲ್ಲಿ ಕೆಲವಾರು ಸ್ಟಂಟ್ ದೃಶ್ಯಗಳನ್ನು ಖುದ್ದಾಗಿ ಮಾಡಿದ್ದಾರೆ ನಟ. ಇದೇ ಕಾರಣಕ್ಕೆ ಸಿನಿಮಾದ ಭರ್ಜರಿ ಪ್ರಚಾರದಲ್ಲಿ ಶರವಾನಂದ ಭಾಗಿ ಆಗಿದ್ದಾರೆ.

ತೆಲಂಗಾಣದ ಹೈದರಾಬಾದ್​ನ ಮೂಸಾಪೇಟನಲ್ಲಿರುವ ಶ್ರೀರಾಮುಲು ಥಿಯೇಟರ್​​ಗೆ ನಟ ಶರವಾನಂದ ಭೇಟಿ ನೀಡಿದ್ದರು. ಈ ವೇಳೆ ನಟ ರಾಜಶೇಖರ್ ಸಹ ಅವರೊಟ್ಟಿಗಿದ್ದರು. ಈ ವೇಳೆ ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದ ನಟ ಶರವಾನಂದ, ‘ನಾನು ಒಳ್ಳೆಯ ಸಿನಿಮಾಗಳನ್ನು ಮಾಡಿದ್ದೇನೆ. ನಿಮಗೆ ಇಷ್ಟವಾದ ಕೆಲ ಸಿನಿಮಾಗಳನ್ನು ಮಾಡಿದ್ದೇನೆ, ಕೆಲವು ಬಹಳ ಒಳ್ಳೆಯ ಸಿನಿಮಾಗಳನ್ನೂ ಮಾಡಿದ್ದೇನೆ. ಆದರೆ ಮತ್ತೊಮ್ಮೆ, ಅಭಿಲಾಷ್ (‘ಬೈಕರ್’ ಸಿನಿಮಾ ನಿರ್ದೇಶಕ) ನನ್ನನ್ನು ಇಲ್ಲಿಗೆ ಕರೆತಂದು ನಿರ್ದೇಶಕನೊಬ್ಬ ತನ್ನ ನಾಯಕನನ್ನು ನಿಜವಾಗಿಯೂ ಪ್ರೀತಿಸಿದಾಗ ಏನಾಗುತ್ತದೆ ಎಂಬುದನ್ನು ತೋರಿಸಿದ್ದಾನೆ. ನನ್ನ ಸಹೋದರ, ನನ್ನ ಚಿನ್ನ, ಭಾರತದ ಭವಿಷ್ಯ ಅಭಿಲಾಷ್ ಅದನ್ನು ತೋರಿಸಿದ್ದಾನೆ. ನಾನು ಇಂದು ಇಲ್ಲಿ ನಿಂತು ಪ್ರಮಾಣ ಮಾಡಿ ಹೇಳುತ್ತೇನೆ, ‘ಬೈಕರ್’ ನನ್ನ ಅತ್ಯುತ್ತಮ ಚಿತ್ರ. ಮತ್ತು ಈ ಕನಸನ್ನು ನನಗೆ ನೀಡಿದ ಈ ಚಿತ್ರಮಂದಿರಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು’ ಎನ್ನುತ್ತಾ, ಕೆಳಗೆ ಮಲಗಿ ಸಾಷ್ಟಾಂಗ ನಮಸ್ಕಾರವನ್ನು ಶರವಾನಂದ ಮಾಡಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಅವಧಿ 6 ಗಂಟೆ; ಚಿತ್ರತಂಡದ ಎದುರಿಗೆ ಇದೆ ದೊಡ್ಡ ಸವಾಲು

‘ಬೈಕರ್’ ಸಿನಿಮಾ ಹೆಸರೇ ಸೂಚಿಸುವಂತೆ ಬೈಕರ್ ಒಬ್ಬನ ಕತೆಯಾಗಿದೆ. ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಿನಿಮಾನಲ್ಲಿ ಶರವಾನಂದ ಜೊತೆಗೆ ಮಾಳವಿಕಾ ನಾಯರ್ ನಾಯಕಿಯಾಗಿ ನಟಿಸಿದ್ದಾರೆ. ರಾಜಶೇಖರ್ ಅವರು ತಂದೆ ಪಾತ್ರದಲ್ಲಿ, ಅತುಲ್ ಕುಲಕರ್ಣಿ ಸಹ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ಅವರ ಪಾಲುದಾರಿಕೆ ಹೊಂದಿರುವ ಯುವಿ ಕ್ರಿಯೇಷನ್ಸ್ ‘ಬೈಕರ್’ ಸಿನಿಮಾಕ್ಕೆ ಬಂಡವಾಳ ಹೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Sun, 5 April 26

Follow Us