AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಚ್ಚುಗೆ ಪಡೆದ ಸಿಂಬು ಲುಕ್​; ‘ಥಗ್​ ಲೈಫ್​’ ಪೋಸ್ಟರ್​ ನೋಡಿ ಹೊಗಳಿದ ಫ್ಯಾನ್ಸ್​

ಕಮಲ್​ ಹಾಸನ್​, ಮಣಿರತ್ನಂ ಅವರ ಕಾಂಬಿನೇಷನ್​ನಿಂದ ‘ಥಗ್​ ಲೈಫ್​’ ಸಿನಿಮಾ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಈಗ ಈ ಚಿತ್ರತಂಡಕ್ಕೆ ಕಾಲಿವುಡ್​ನ ಖ್ಯಾತ ನಟ ಸಿಲಂಬರಸನ್​ ಅವರು ಸೇರ್ಪಡೆ ಆಗಿದ್ದಾರೆ. ಹೊಸ ಪೋಸ್ಟರ್ ಮೂಲಕ ಅವರ ಪಾತ್ರವನ್ನು ಪರಿಚಯಿಸಲಾಗಿದೆ. ಈ ಪೋಸ್ಟರ್​ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಮೆಚ್ಚುಗೆ ಪಡೆದ ಸಿಂಬು ಲುಕ್​; ‘ಥಗ್​ ಲೈಫ್​’ ಪೋಸ್ಟರ್​ ನೋಡಿ ಹೊಗಳಿದ ಫ್ಯಾನ್ಸ್​
ಸಿಲಂಬರಸನ್​
ಮದನ್​ ಕುಮಾರ್​
|

Updated on: May 10, 2024 | 9:02 PM

Share

ಕಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಥಗ್​ ಲೈಫ್​’ (Thug Life) ಚಿತ್ರ ಕೂಡ ಮುಂಚೂಣಿಯಲ್ಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳಲು ಅನೇಕ ಕಾರಣಗಳಿವೆ. ಮೂರು ದಶಕಗಳ ಬಳಿಕ ಖ್ಯಾತ ನಟ ಕಮಲ್ ಹಾಸನ್ (Kamal Haasan) ಹಾಗೂ ದಿಗ್ಗಜ ನಿರ್ದೇಶಕ ಮಣಿರತ್ನಂ ಅವರು ಈ ಚಿತ್ರದ ಮೂಲಕ ಕೈ ಜೋಡಿಸಿದ್ದಾರೆ. ಬರೋಬ್ಬರಿ 36 ವರ್ಷಗಳ ಹಿಂದೆ ಗ್ಯಾಂಗ್‌ಸ್ಟರ್ ಕಥೆಯುಳ್ಳ ‘ನಾಯಕನ್’ ಸಿನಿಮಾದಲ್ಲಿ ಈ ನಟ-ನಿರ್ದೇಶಕನ ಕಾಂಬಿನೇಷನ್​ ಮೋಡಿ ಮಾಡಿತ್ತು. ಈಗ ಅವರು ಮತ್ತೆ ‘ಥಗ್​ ಲೈಫ್​’ ಚಿತ್ರದಲ್ಲಿ ಒಂದಾಗಿದ್ದು, ಇವರಿಬ್ಬರ ಜೊತೆಗೆ ಸಿಲಂಬರಸ್ (Silambarasan)​ ಅಲಿಯಾಸ್​ ಸಿಂಬು ಕೂಡ ಸೇರಿಕೊಂಡಿದ್ದಾರೆ ಎಂಬುದು ವಿಶೇಷ.

‘ಥಗ್ ಲೈಫ್’ ಸಿನಿಮಾ ಅನೌನ್ಸ್​ ಆದಾಗಿನಿಂದಲೂ ಅಭಿಮಾನಿಗಳ ವಲಯದಲ್ಲಿ ಕ್ರೇಜ್​ ಸೃಷ್ಟಿ ಆಗಿದೆ. ಟೈಟಲ್ ಟೀಸರ್ ನೋಡಿದ ಎಲ್ಲರೂ ವಾವ್​ ಎಂದಿದ್ದಾರೆ. ಈಗ ಕಾಲಿವುಡ್​ನ ಖ್ಯಾತ ಸಿಲಂಬರಸನ್ ಕೂಡ ಈ ಚಿತ್ರತಂಡಕ್ಕೆ ಸೇರ್ಪಡೆ ಆಗಿರುವುದರಿಂದ ಸಿನಿಮಾದ ಸ್ಟಾರ್​ ಮೆಗುರು ಹೆಚ್ಚಿದೆ. ಸಿಂಬು ಅವರನ್ನು ಸ್ವಾಗತಿಸಲು ಖಡಕ್​ ಆದ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಎಂಟ್ರಿಯಲ್ಲೇ ಸಿಲಂಬರಸನ್ ಅವರು ಖಡಕ್​ ಲುಕ್​ ನೀಡಿದ್ದಾರೆ. ಮರುಭೂಮಿಯಲ್ಲಿ ಕಾರ್ ಚೇಸ್​ ಮಾಡುತ್ತಾ ಗನ್ ಹಿಡಿದು ಅವರು ದಾಳಿಗೆ ಮುಂದಾಗಿದ್ದಾರೆ. ಅವರ ಈ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೇ ಸಿನಿಮಾದಲ್ಲಿ ತ್ರಿಶಾ ಕೂಡ ನಟಿಸುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಕಮಲ್​, ಮಣಿರತ್ನಂ ಕಾಂಬಿನೇಷನ್​ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿ ಆಗಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ‘ಮಾನಾಡು’ ನಟ ಸಿಂಬುಗೆ ಗೌರವ ಡಾಕ್ಟರೇಟ್​; ಚಿತ್ರರಂಗದಲ್ಲಿ ಈ ಕಲಾವಿದನ ಸಾಧನೆ ಏನು?

‘ರಾಜ್​ಕಮಲ್​ ಇಂಟರ್​ನ್ಯಾಷನಲ್​’, ‘ಮದ್ರಾಸ್​ ಟಾಕೀಸ್​’, ‘ರೆಡ್​ಜೈಂಟ್​ ಮೂವೀಸ್​’ ಸಂಸ್ಥೆಗಳು ಜಂಟಿಯಾಗಿ ‘ಥಗ್​ ಲೈಫ್​’ ಸಿನಿಮಾವನ್ನು ನಿರ್ಮಿಸುತ್ತಿವೆ. ಕಮಲ್‌ ಹಾಸನ್‌, ಮಣಿರತ್ನಂ, ಆರ್‌. ಮಹೇಂದ್ರನ್‌, ಶಿವ ಅನಂತ್‌ ಅವರು ಜತೆಯಾಗಿ ಬಂಡವಾಳ ಹೂಡುತ್ತಿದ್ದಾರೆ. ಘಟಾನುಘಟಿ ಕಲಾವಿದರು ಪರದೆ ಮೇಲೆ ಕಾಣಿಸಿಕೊಂಡರೆ, ಪರದೆ ಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾಗೆ ಎ.ಆರ್‌. ರೆಹಮಾನ್‌ ಸಂಗೀತ ನೀಡುತ್ತಿದ್ದಾರೆ. ಶ್ರೀಕರ್‌ ಪ್ರಸಾದ್‌ ಸಂಕಲನ ಮಾಡುತ್ತಿದ್ದು, ರವಿ ಕೆ. ಚಂದ್ರನ್‌ ಅವರ ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ