ಸಿಲ್ಕ್​ ಸ್ಮಿತಾ ಆತ್ಮಹತ್ಯೆಗೆ ಇನ್ನೂ ಸಿಕ್ಕಿಲ್ಲ ಕಾರಣ; ಹೇಗಿತ್ತು ನಟಿಯ ಬದುಕು?

ಸ್ಮಿತಾ ಕೌಟುಂಬಿಕ ಸ್ಥಿತಿ ಹದಗೆಟ್ಟಿತ್ತು. ಈ ಕಾರಣದಿಂದಾಗಿ ಅವರು 4ನೇ ತರಗತಿವರೆಗೆ ಮಾತ್ರ ಓದಿದ್ದರು. ಸ್ಮಿತಾ ನಿಜವಾದ ಹೆಸರು ವಿಜಯಲಕ್ಷ್ಮಿ. ಆಂಧ್ರಪ್ರದೇಶದ ಏಲೂರು ಮೂಲದ ವಿಜಯಲಕ್ಷ್ಮಿ ನಂತರ ದಕ್ಷಿಣ ಭಾರತದ ಚಿತ್ರರಂಗದ ಕೇಂದ್ರವಾದ ಚೆನ್ನೈನ ಕೊಡಂಬಾಕ್ಕಂಗೆ ಸ್ಥಳಾಂತರಗೊಂಡರು.

ಸಿಲ್ಕ್​ ಸ್ಮಿತಾ ಆತ್ಮಹತ್ಯೆಗೆ ಇನ್ನೂ ಸಿಕ್ಕಿಲ್ಲ ಕಾರಣ; ಹೇಗಿತ್ತು ನಟಿಯ ಬದುಕು?
ಸಿಲ್ಕ್ ಸ್ಮಿತಾ
Follow us
| Updated By: ರಾಜೇಶ್ ದುಗ್ಗುಮನೆ

Updated on:Sep 25, 2024 | 7:46 AM

ಚಿತ್ರರಂಗದಲ್ಲಿ ಮಿಂಚಿದ ಅನೇಕ ಸೆಲೆಬ್ರಿಟಿಗಳು ನಂತರ ದುರಂತ ಅಂತ್ಯ ಕಂಡ ಅನೇಕ ಉದಾಹರಣೆ ಇದೆ. ಕೆಲವರು ವೃತ್ತಿ ಜೀವನದಲ್ಲಿ ಮಿಂಚಿದರೂ ವೈಯಕ್ತಿಕ ಜೀವನದಲ್ಲಿ ಸೋಲು ಕಂಡಿರುತ್ತಾರೆ. ನಟಿ ಸಿಲ್ಕ್ ಸ್ಮಿತಾ ಅವರ ವಿಷಯದಲ್ಲೂ ಅದೇ ರೀತಿ ಆಗಿತ್ತು. ಸ್ಮಿತಾ ಅವರಂತಹ ಗುಣವಿರುವ ಮತ್ತೊಬ್ಬ ನಟಿ ಭಾರತ ಚಿತ್ರರಂಗದಲ್ಲಿ ಕಾಣೋದು ಅಪರೂಪ. ಈ ನಟಿ ಇಹಲೋಕ ತ್ಯಜಿಸಿ 28 ವರ್ಷಗಳಾಗಿವೆ. ಆದಾಗ್ಯೂ ಅವರ ಬಗ್ಗೆ ಚರ್ಚೆ ಇದೆ. ಆಗಾಗ ನಟಿಯ ವಿಚಾರ ಚರ್ಚೆಗೆ ಬರುತ್ತವೆ.

ಸ್ಮಿತಾ ಕೌಟುಂಬಿಕ ಸ್ಥಿತಿ ಹದಗೆಟ್ಟ ಕಾರಣ 4ನೇ ತರಗತಿವರೆಗೆ ಮಾತ್ರ ಓದಿದ್ದರು. ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. ಆಂಧ್ರಪ್ರದೇಶದ ಏಲೂರು ಮೂಲದ ವಿಜಯಲಕ್ಷ್ಮಿ ನಂತರ ದಕ್ಷಿಣ ಭಾರತದ ಚಿತ್ರರಂಗದ ಕೇಂದ್ರವಾದ ಚೆನ್ನೈನ ಕೊಡಂಬಾಕ್ಕಂಗೆ ಸ್ಥಳಾಂತರಗೊಂಡರು. ಅವರು 1978ರಲ್ಲಿ ಕನ್ನಡದ ಸಿನಿಮಾ ‘ಬೇಡಿ’ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

1978ರಲ್ಲಿ ತಮಿಳಿನ ‘ವಂದಿ ಚಕ್ರ’ ಚಿತ್ರದಲ್ಲಿ ರೇಶಮ್ ಪಾತ್ರವನ್ನು ನಿರ್ವಹಿಸುವ ಮೂಲಕ ಸ್ಮಿತಾ ಗಮನ ಸೆಳೆದರು. ಅದರ ನಂತರ ನಟಿ ಹಿಂತಿರುಗಿ ನೋಡಲಿಲ್ಲ. ಸಿಲ್ಕ್ ಜೊತೆ ಕೆಲಸ ಮಾಡಲು ನಿರ್ದೇಶಕರು ಮತ್ತು ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದರು. ಸ್ಮಿತಾ ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ನೂರಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಸಿಲ್ಕ್ ಸ್ಮಿತಾ ತಮ್ಮ ವೃತ್ತಿ ಜೀವನದಲ್ಲಿ ಅದ್ಭುತ ಯಶಸ್ಸನ್ನು ಗಳಿಸಿದರು. ಆದರೆ ಅವರ ಖಾಸಗಿ ಜೀವನದಲ್ಲಿ ಅವರು ಅನೇಕ ಬಿಕ್ಕಟ್ಟುಗಳನ್ನು ಎದುರಿಸಿದರು. ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಾಗ ಚಿತ್ರರಂಗದಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಅವರು ಕೊನೆಯುಸಿರೆಳೆದರೂ ಅವರ ಹತ್ತಿರ ಯಾರೂ ಇರಲಿಲ್ಲ. ಸ್ಮಿತಾ ತಮ್ಮ 36ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.

ಸೆಪ್ಟೆಂಬರ್ 23, 1996ರಂದು, ಸ್ಮಿತಾ ಕೋಡಂಬಾಕ್ಕಂನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ಸುದ್ದಿ ಹೊರಬಿದ್ದ ನಂತರ ಎಲ್ಲರೂ ಬೆಚ್ಚಿಬಿದ್ದರು. ಆದರೆ ಸಿಲ್ಕ್ ಸ್ಮಿತಾ ಯಾಕೆ ಇಂತಹ ನಿರ್ಧಾರ ತೆಗೆದುಕೊಂಡರು? ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ: ಮತ್ತೆ ತೆರೆಗೆ ಬರುತ್ತಿದೆ ಸಿಲ್ಕ್ ಸ್ಮಿತಾ ಜೀವನ: ಈ ಬಾರಿ ನಟಿ ಯಾರು?

ನಟಿ ಸಿಲ್ಕ್ ಸ್ಮಿತಾ ಅವರ ಜೀವನಾಧಾರಿತ ಸಿನಿಮಾ ಕೂಡ ತಯಾರಾಗಿದೆ. ಆ ಚಿತ್ರದ ಹೆಸರು ‘ದಿ ಡರ್ಟಿ ಪಿಕ್ಚರ್’. ಚಿತ್ರದಲ್ಲಿ ನಟಿ ವಿದ್ಯಾ ಬಾಲನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ನಟಿ ವಿದ್ಯಾ ಬಾಲನ್‌ಗೂ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಚಿತ್ರ ಎಲ್ಲರ ಮೆಚ್ಚುಗೆ ಪಡೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:42 am, Wed, 25 September 24

Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ