AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾಗೋಸ್ಕರ ಸ್ಕ್ರಿಪ್ಟ್ ಬದಲಿಸಿದ್ರಾ ಸುಕುಮಾರ್? ‘ಪುಷ್ಪ 2’ ಸೆಟ್​ನಲ್ಲಿ ಹೊಸ ಕಥೆ

‘ಪುಷ್ಪ’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಪುಷ್ಪರಾಜ್ ಹಾಗೂ ಶ್ರೀವಲ್ಲಿ ಮದುವೆ ನಡೆದಿದೆ. ಈಗ ಎರಡನೇ ಪಾರ್ಟ್​ನಲ್ಲಿ ರಶ್ಮಿಕಾ ಅವರು ಗೃಹಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರ ಯಾವ ರೀತಿಯಲ್ಲಿ ಮೂಡಿ ಬರಲಿದೆ, ಅವರಿಗೆ ಎಷ್ಟು ಸ್ಕ್ರೀನ್​ಸ್ಪೇಸ್ ಸಿಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ರಶ್ಮಿಕಾಗೋಸ್ಕರ ಸ್ಕ್ರಿಪ್ಟ್ ಬದಲಿಸಿದ್ರಾ ಸುಕುಮಾರ್? ‘ಪುಷ್ಪ 2’ ಸೆಟ್​ನಲ್ಲಿ ಹೊಸ ಕಥೆ
ರಶ್ಮಿಕಾ ಮಂದಣ್ಣ, ಸುಕುಮಾರ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 11, 2023 | 7:14 PM

Share

ಒಂದು ಚಿತ್ರ ಸೂಪರ್ ಹಿಟ್ ಆದರೆ ಬಿಗ್ ಬಜೆಟ್​ ಸಿನಿಮಾ ಮಾಡುವವರಿಗೆ ಹೊಸ ಹುಮ್ಮಸ್ಸು ಸಿಗುತ್ತದೆ. ಹಲವು ನಿರ್ಮಾಪಕರು ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಕಲಾವಿದರ ಖ್ಯಾತಿ ಕೂಡ ಹೆಚ್ಚುತ್ತದೆ. ಅವರನ್ನು ಹೊಸ ಹೊಸ ಆಫರ್ ಹುಡುಕಿ ಬರುತ್ತದೆ. ಈಗ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್’ ಸಿನಿಮಾ (Animal Movie) ವಿಶ್ವ ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್​ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ್ದಾರೆ. ಅವರ ಜನಪ್ರಿಯತೆ ಹೆಚ್ಚಾಗಿದೆ. ಈಗ ‘ಅನಿಮಲ್’ ಸಿನಿಮಾ ಎಫೆಕ್ಟ್ ‘ಪುಷ್ಪ 2’ (Pushpa 2) ಚಿತ್ರದ ಮೇಲೂ ಆಗಿದೆ ಎಂದು ವರದಿ ಆಗಿದೆ.

ರಶ್ಮಿಕಾ ಮಂದಣ್ಣ ಅವರು ‘ಅನಿಮಲ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರ ಪತ್ನಿ ಪಾತ್ರ ಮಾಡಿದ್ದಾರೆ. ಈ ಚಿತ್ರದಿಂದ ಹಿಂದಿ ಬೆಲ್ಟ್​ನಲ್ಲಿ ರಶ್ಮಿಕಾ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಅವರ ಮುಂಬರುವ ಸಿನಿಮಾಗಳ ಮೇಲೆ ಜನರು ಕಣ್ಣಿಡಲಿದ್ದಾರೆ. ಈ ಕಾರಣದಿಂದಲೇ ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾಗೆ ಈಗ ಇರುವುದಕ್ಕಿಂತ ಹೆಚ್ಚಿನ ಸ್ಕ್ರೀನ್​ಸ್ಪೇಸ್ ನೀಡಲು ‘ಪುಷ್ಪ 2’ ನಿರ್ದೇಶಕ ಸುಕುಮಾರ್ ನಿರ್ಧರಿಸಿದ್ದಾರಂತೆ. ಈ ಕಾರಣದಿಂದಲೇ ಸ್ಕ್ರಿಪ್ಟ್​ನಲ್ಲಿ ಕೆಲವು ಬದಲಾವಣೆಗೆ ಸುಕುಮಾರ್ ಮುಂದಾಗಿದ್ದಾರೆ.

ಕಳೆದ ಕೆಲವು ತಿಂಗಳಿಂದ ‘ಪುಷ್ಪ 2’ ಚಿತ್ರಕ್ಕೆ ಭರದಿಂದ ಶೂಟಿಂಗ್ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ ಕೂಡ ಶೀಘ್ರವೇ ಸೆಟ್​ ಸೇರಿಕೊಳ್ಳಲಿದ್ದಾರೆ. ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ನಟನೆ ಸುಕುಮಾರ್ ಅವರನ್ನು ಸಾಕಷ್ಟು ಇಂಪ್ರೆಸ್ ಮಾಡಿದೆ. ಹೀಗಾಗಿ, ರಶ್ಮಿಕಾ ಮಾಡಿರೋ ಶ್ರೀವಲ್ಲಿ ಪಾತ್ರದ ತೂಕ ಹೆಚ್ಚಿಸಲು ಸುಕುಮಾರ್ ಅವರು ನಿರ್ಧರಿಸಿದ್ದಾರಂತೆ. ಈ ವಿಚಾರ ಕೇಳಿ ರಶ್ಮಿಕಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ‘ಪುಷ್ಪ 2’ ಶೂಟಿಂಗ್​ ಅಪ್​ಡೇಟ್​: ರಶ್ಮಿಕಾ ಮಂದಣ್ಣ ಚಿತ್ರೀಕರಣಕ್ಕೆ ತೆರಳೋದು ಯಾವಾಗ?

‘ಪುಷ್ಪ’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಪುಷ್ಪರಾಜ್ ಹಾಗೂ ಶ್ರೀವಲ್ಲಿ ಮದುವೆ ನಡೆದಿದೆ. ಈಗ ಎರಡನೇ ಪಾರ್ಟ್​ನಲ್ಲಿ ರಶ್ಮಿಕಾ ಅವರು ಗೃಹಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರ ಯಾವ ರೀತಿಯಲ್ಲಿ ಮೂಡಿ ಬರಲಿದೆ, ಅವರಿಗೆ ಎಷ್ಟು ಸ್ಕ್ರೀನ್​ಸ್ಪೇಸ್ ಸಿಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ನಟಿಸುತ್ತಿದ್ದಾರೆ. ಪಾತ್ರವರ್ಗ ಮತ್ತಷ್ಟು ಹಿರಿದಾಗಲಿದೆ ಎನ್ನಲಾಗುತ್ತಿದೆ. ಮುಂದಿನ ವರ್ಷ ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More