AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ’ ಕಥೆಯನ್ನು 2 ಪಾರ್ಟ್​ ಮಾಡೋಕೆ ಐಡಿಯಾ ಕೊಟ್ಟಿದ್ದು ಯಾರು? ಇಲ್ಲಿದೆ ಉತ್ತರ

ಒಂದು ಕಥೆಯನ್ನು ಎರಡು ಪಾರ್ಟ್​ಗಳಲ್ಲಿ ಸಿನಿಮಾ ಮಾಡುವ ಟ್ರೆಂಡ್ ಚಾಲ್ತಿಯಲ್ಲಿದೆ. ‘ಬಾಹುಬಲಿ 2’, ‘ಕೆಜಿಎಫ್​ 2’ ಮುಂತಾದ ಸಕ್ಸಸ್​ಫುಲ್​ ಸಿನಿಮಾಗಳೇ ಈ ಮಾತಿಗೆ ಉದಾಹರಣೆ. ಈಗ ‘ಪುಷ್ಪ 2’ ಸಿನಿಮಾ ಕೂಡ ಬರುತ್ತಿದೆ. ಸುಕುಮಾರ್​ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಸುಕುಮಾರ್​ ಅವರು ಮಾತನಾಡಿದ್ದಾರೆ.

‘ಪುಷ್ಪ’ ಕಥೆಯನ್ನು 2 ಪಾರ್ಟ್​ ಮಾಡೋಕೆ ಐಡಿಯಾ ಕೊಟ್ಟಿದ್ದು ಯಾರು? ಇಲ್ಲಿದೆ ಉತ್ತರ
ನಿರ್ದೇಶಕ ಸುಕುಮಾರ್​, ಅಲ್ಲು ಅರ್ಜುನ್​
ಮದನ್​ ಕುಮಾರ್​
|

Updated on: Dec 03, 2024 | 8:07 PM

Share

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾ 2021ರಲ್ಲಿ ಬಿಡುಗಡೆ ಆಯಿತು. ಬ್ಲಾಕ್ ಬಸ್ಟರ್​ ಹಿಟ್ ಆದ ಆ ಸಿನಿಮಾದಲ್ಲಿ ಪ್ರೇಕ್ಷಕರಿಗೆ ತೋರಿಸಿರುವುದು ಅರ್ಧ ಕಥೆ ಮಾತ್ರ. ಇನ್ನುಳಿದ ಕಥೆಯನ್ನು 2ನೇ ಪಾರ್ಟ್​ನಲ್ಲಿ ಹೇಳಲಾಗುತ್ತಿದೆ. ‘ಪುಷ್ಪ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್​ 5ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ನಿರ್ದೇಶಕ ಸುಕುಮಾರ್​ ಅವರು ಸಾಕಷ್ಟು ಸಮಯ ತೆಗೆದುಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ಸಿನಿಮಾದ ಪ್ರೀ-ರಿಲೀಸ್ ಇವೆಂಟ್​ ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆಯಿತು. ಆ ವೇದಿಕೆಯಲ್ಲಿ ಸುಕುಮಾರ್ ಅವರು ಒಂದು ವಿಷಯ ಹಂಚಿಕೊಂಡರು.

ಆರಂಭದಲ್ಲಿ ‘ಪುಷ್ಪ’ ಸಿನಿಮಾದ ಕಥೆ ಒಂದೇ ಪಾರ್ಟ್​ನಲ್ಲಿ ಮುಗಿಯುವಂತಿತ್ತು. ಆದರೆ ನಿರ್ದೇಶಕ ಸುಕುಮಾರ್​ ಅವರಿಗೆ ಒಂದು ಐಡಿಯಾ ಕೊಡಲಾಯಿತು. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆಯ ಸಿಇಓ ಚೆರಿ ಅವರು 2 ಪಾರ್ಟ್​ ಮಾಡುವ ಐಡಿಯಾ ಕೊಟ್ಟರು. ಆ ಕಾರಣದಿಂದ ಸುಕುಮಾರ್​ ಅವರು ಈ ಸಿನಿಮಾದ ಕಥೆಯನ್ನು ವಿಸ್ತರಿಸಿದರು. ಮೊದಲ ಪಾರ್ಟ್​ ಸೂಪರ್​ ಹಿಟ್ ಆಯಿತು. ಎರಡನೇ ಪಾರ್ಟ್​ ಕೂಡ ಅದ್ದೂರಿಯಾಗಿ ಮೂಡಿಬಂದಿದೆ.

‘ಪುಷ್ಪ’ ಸೂಪರ್​ ಹಿಟ್ ಆಗಿದ್ದರಿಂದ ‘ಪುಷ್ಪ 2’ ಸಿನಿಮಾಗೆ ಮೈತ್ರಿ ಮೂವೀ ಮೇಕರ್ಸ್​ ಸಂಸ್ಥೆಯು ನೂರಾರು ಕೋಟಿ ರೂಪಾಯಿ ಬಂಡವಾಳ ಹೂಡಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನವೇ ಬಹುಕೋಟಿ ರೂಪಾಯಿ ಬಿಸ್ನೆಸ್ ಆಗಿದೆ. ಜನರಿಗೆ ಇರುವ ನಿರೀಕ್ಷೆಯ ಮಟ್ಟವನ್ನು ಗಮನಿಸಿದರೆ ಬಾಕ್ಸ್ ಆಫೀಸ್​ನಲ್ಲಿ ಖಂಡಿತವಾಗಿಯೂ ‘ಪುಷ್ಪ 2’ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ.

ಇದನ್ನೂ ಓದಿ: ಲಂಡನ್​ ಬೀದಿಯಲ್ಲಿ ‘ಪುಷ್ಪ 2’ ಹಾಡಿಗೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್ ಫ್ಯಾನ್ಸ್

ಅಲ್ಲು ಅರ್ಜುನ್​ ಅವರ ವೃತ್ತಿಜೀವನದಲ್ಲಿ ‘ಪುಷ್ಪ 2’ ಸಿನಿಮಾ ಬಹಳ ಮಹತ್ವದ್ದಾಗಿದೆ. ಈ ಚಿತ್ರಕ್ಕಾಗಿ ಅವರು ಹಲವು ವರ್ಷಗಳ ಸಮಯವನ್ನು ಮೀಸಲಿಟ್ಟರು. ನಟಿ ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್​ ಮುಂತಾದವರು ಕೂಡ ಹೆಚ್ಚು ಸಮಯ ನೀಡಿದ್ದಾರೆ. ಅವರೆಲ್ಲರ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯ ಈಗ ಬಂದಿದೆ. ಹಾಡುಗಳು ಸೂಪರ್​ ಹಿಟ್ ಆಗಿವೆ. ಟ್ರೇಲರ್​ ನೋಡಿದ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More