AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಸವಾಗಿದೆ ಎಂದು ಆರೋಪಿಸಿ ನಿರ್ಮಾಪಕನ ಮನೆ ಎದುರು ಬೆತ್ತಲೆ ಪ್ರತಿಭಟನೆ ಮಾಡಿದ ನಟಿ

ಅಲ್ಲು ಕುಟುಂಬದ ಜತೆ ಬನ್ನಿ ವಾಸು ಒಳ್ಳೆಯ ಒಡನಾಟ ಹೊಂದಿದ್ದಾರೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್​ ಕಚೇರಿ ಎದುರು ಸುನಿತಾ ಗುರುವಾರ ರಾತ್ರಿ (ನವೆಂಬರ್ 17) ಬೆತ್ತಲಾಗಿ ಪ್ರತಿಭಟನೆ ಮಾಡಿದ್ದಾರೆ.

ಮೋಸವಾಗಿದೆ ಎಂದು ಆರೋಪಿಸಿ ನಿರ್ಮಾಪಕನ ಮನೆ ಎದುರು ಬೆತ್ತಲೆ ಪ್ರತಿಭಟನೆ ಮಾಡಿದ ನಟಿ
ಬನ್ನಿ ವಾಸು-ಸುನಿತಾ
TV9 Web
| Edited By: |

Updated on: Nov 18, 2022 | 7:37 PM

Share

ಚಿತ್ರರಂಗ ಎಲ್ಲರನ್ನೂ ಆಕರ್ಷಿಸುತ್ತದೆ. ಬಣ್ಣದ ಲೋಕದಲ್ಲಿ ಬದುಕು ಕಟ್ಟಿಕೊಳ್ಳಲು ಬಂದು ಮೋಸ ಹೋದ ಉದಾಹರಣೆ ಸಾಕಷ್ಟು ಇದೆ. ಈಗ ತೆಲುಗು ನಟಿ ಸುನಿತಾ ಬೋಯಾ (Sunitha Boya) ಅವರು ತಮಗೆ ಮೋಸ ಆಗಿದೆ ಎಂದು ಆರೋಪಿಸಿ ಖ್ಯಾತ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್​ನ (Geetha Arts) ಹೈದರಾಬಾದ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಅವರು ಈ ರೀತಿ ಪ್ರತಿಭಟನೆ ಮಾಡಿದ್ದು ಇದೇ ಮೊದಲೇನು ಅಲ್ಲ. ಈ ಹಿಂದೆ ಹಲವು ಬಾರಿ ಅರೆ ಬೆತ್ತಲಾಗಿ ಪ್ರೊಟೆಸ್ಟ್ ಮಾಡಿದ್ದರು.

ನಿರ್ಮಾಪಕ ಬನ್ನಿ ವಾಸು ಅವರಿಂದ ಮೋಸ ಆಗಿದೆ ಎಂಬುದು ಸುನಿತಾ ಅವರ ಆರೋಪ. ಅಲ್ಲು ಕುಟುಂಬದ ಜತೆ ಬನ್ನಿ ವಾಸು ಒಳ್ಳೆಯ ಒಡನಾಟ ಹೊಂದಿದ್ದಾರೆ. ಈ ಕಾರಣಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್​ ಕಚೇರಿ ಎದುರು ಸುನಿತಾ ಗುರುವಾರ ರಾತ್ರಿ (ನವೆಂಬರ್ 17) ಬೆತ್ತಲಾಗಿ ಪ್ರತಿಭಟನೆ ಮಾಡಿದ್ದಾರೆ.

ಸುನಿತಾ ಹಲವು ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಬನ್ನಿ ವಾಸು ನಿರ್ಮಾಣದ ಕೆಲ ಸಿನಿಮಾಗಳಲ್ಲಿ ಸುನೀತಾ ನಟಿಸಿದ್ದರು. ಅವರು ಸರಿಯಾಗಿ ಸಂಭಾವನೆ ನೀಡಿಲ್ಲ ಎಂದು ನಟಿ ಆರೋಪಿಸುತ್ತಾ ಬಂದಿದ್ದಾರೆ. ಮಾನಸಿಕವಾಗಿ ಕುಗ್ಗಲು ಬನ್ನಿ ವಾಸು ಕಾರಣ ಎಂದು ನಟಿ ದೂರಿದ್ದಾರೆ. ಆದರೆ, ಯಾರಿಂದಲೂ ಸರಿಯಾಗಿ ಪ್ರತಿಕ್ರಿಯೆ ಸಿಗದ ಕಾರಣ ಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ
Image
Kantara Movie: ‘ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ಅದ್ಭುತ’; ರಿಷಬ್ ಸಿನಿಮಾಗೆ ಪ್ರಭಾಸ್​ ಹೊಗಳಿಕೆ
Image
Sapthami Gowda: ಜನರ ಮಧ್ಯೆ ‘ಕಾಂತಾರ’ ನಾಯಕಿ ಸಪ್ತಮಿ ಗೌಡ ಬಿಂದಾಸ್​ ಡ್ಯಾನ್ಸ್​; ಇಲ್ಲಿದೆ ವಿಡಿಯೋ
Image
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Image
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?

ಮೀ ಟೂ ಅಭಿಯಾನ ಶುರುವಾದಾಗ ನಟಿ ಶ್ರೀ ರೆಡ್ಡಿ ಕೂಡ ಇದೇ ರೀತಿ ಬೆತ್ತಲೆ ಪ್ರತಿಭಟನೆ ಮಾಡಿ ಸಂಚಲನ ಸೃಷ್ಟಿ ಮಾಡಿದ್ದರು. ತಮಗೆ ಅನೇಕರಿಂದ ಲೈಂಗಿಕ ಕಿರುಕುಳ ಆಗಿದೆ ಎಂದು ಅವರು ಹೇಳಿದ್ದರು. ಈಗ ಸುನಿತಾ ಬೋಯಾ ಅವರ ಪ್ರತಿಭಟನೆ ಶ್ರೀ ರೆಡ್ಡಿ ಅವರ ಪ್ರತಿಭಟನೆಯನ್ನು ನೆನಪಿಸಿದೆ.

ಇದನ್ನೂ ಓದಿ: ‘ನಮ್ಮ ಬ್ಯಾನರ್​ನಲ್ಲಿ ಸಿನಿಮಾ ಮಾಡಿ​’; ಅಲ್ಲು ಅರ್ಜುನ್ ತಂದೆ ಕೋರಿಕೆಗೆ ತಕ್ಷಣ ಒಪ್ಪಿದ ರಿಷಬ್ ಶೆಟ್ಟಿ

ಬನ್ನಿ ವಾಸು ಅವರು ಗೀತಾ ಆರ್ಟ್ಸ್​ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ಅಲ್ಲು ಅರ್ಜುನ್ ಹಾಗೂ ಅವರ ಕುಟುಂಬದ ಜತೆ ಒಳ್ಳೆಯ ನಂಟು ಹೊಂದಿದ್ದರಿಂದ ನಿರ್ಮಾಪಕರಾಗಿ ಹಾಗೂ ವಿತರಕರಾಗಿ ಬೆಳೆಯಲು ಸಹಾಯ ಆಯಿತು ಎನ್ನಲಾಗಿದೆ. ಸದ್ಯ ಅವರು ಈ ಪ್ರಕರಣದಲ್ಲಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು