‘ಅಪ್ಪು’ ನಿರ್ದೇಶಕ ಪುರಿ ಜಗನ್ನಾಥ್ ಹೊಸ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್ ನಟಿ ತಬು
ಪುರಿ ಜಗನ್ನಾಥ್ ಅವರು ವಿಜಯ್ ಸೇತುಪತಿ ಮತ್ತು ಬಾಲಿವುಡ್ ನಟಿ ತಬು ಅವರೊಂದಿಗೆ ಹೊಸ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಅವರಿಗೆ ದೊಡ್ಡ ಗೆಲುವು ತಂದುಕೊಡುವ ನಿರೀಕ್ಷೆಯಲ್ಲಿದೆ. ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದ ಮೂಲಕ ಪುರಿ ಜಗನ್ನಾಥ್ ತಮ್ಮ ನಿರ್ದೇಶನದ ಯಶಸ್ಸನ್ನು ಮರುಪಡೆಯಲು ಪ್ರಯತ್ನಿಸುತ್ತಿದ್ದಾರೆ.

ನಿರ್ದೇಶಕ ಪುರಿ ಜಗನ್ನಾಥ್ (Puri Jagannadh) ಅವರು ಸಾಲು ಸಾಲು ಸೋಲು ಕಂಡ ಕಂಗೆಟ್ಟಿದ್ದಾರೆ. ಅವರಿಗೆ ಈಗ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇದೆ. ಇದಕ್ಕಾಗಿ ಅವರು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಈಗ ಪುರಿ ಜಗನ್ನಾಥ್ ಅವರು ವಿಜಯ್ ಸೇತುಪತಿ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಿಂದ ಅವರು ಗೆಲ್ಲುವ ಕನಸು ಕಾಣುತ್ತಾ ಇದ್ದಾರೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ತಬು ಅವರು ನಾಯಕಿ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಅವರು ‘ಪುರಿ ಕನೆಕ್ಟ್’ ಮೂಲಕ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ರೆಡಿ ಆಗಲಿದೆ. ಇದಕ್ಕಾಗಿ ದೊಡ್ಡ ಬಜೆಟ್ನ ಹೂಡಲು ತಂಡ ರೆಡಿ ಆಗಿದೆ. ಬಾಲಿವುಡ್ ಮಂದಿಯನ್ನು ಸೆಳೆದುಕೊಳ್ಳಲು ಚಿತ್ರಕ್ಕೆ ತಬು ಆಯ್ಕೆ ಮಾಡಲಾಗಿದೆ. ತಬು ಜೊತೆ ಪುರಿ ಹಾಗೂ ಚಾರ್ಮಿ ಕುಳಿತಿರೋ ಫೋಟೋ ಗಮನ ಸೆಳೆದಿದೆ.
ಪುರಿ ಜಗನ್ನಾಥ್ ತೆಲುಗಿನವರು. ವಿಜಯ್ ಸೇತುಪತಿ ತಮಿಳಿನವರು. ತಬು ಬಾಲಿವುಡ್ನವರು. ಹೀಗಾಗಿ, ಮೂರು ಭಾಷೆಗಳಲ್ಲಿ ಚಿತ್ರಕ್ಕೆ ದೊಡ್ಡ ಮಾರುಕಟ್ಟೆ ಸೃಷ್ಟಿ ಆಗಲಿದೆ. ಈ ಮೊದಲು ತಬು ‘ಅತ್ತಾರೆಂಟಿಕಿ ದಾರಿದಿ’ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ. ಅವರು ಇದೇ ಮೊದಲ ಬಾರಿಗೆ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಜೊತೆ ಕೈ ಜೋಡಿಸುತ್ತಿದ್ದಾರೆ. ಅವರು ಕೊನೆಯದಾಗಿ ತೆಲುಗಿನಲ್ಲಿ ಕಾಣಿಸಿಕೊಂಡಿದ್ದು, ‘ಅಲಾ ವೈಕುಂಟಪುರಮುಲೋ’ ಸಿನಿಮಾದಲ್ಲಿ.
She’s electric. She’s explosive . She’s THE TABU.
Proudly welcoming THE GEM OF INDIAN CINEMA, Actress #Tabu on-board for a ROLE as DYNAMIC as her presence in #PuriSethupathi ❤️🔥
A #PuriJagannadh Film Starring Makkalselvan @VijaySethuOffl
Produced by Puri Jagannadh,… pic.twitter.com/WGp0kkuZDl
— Puri Connects (@PuriConnects) April 10, 2025
ಹಾಗಾದರೆ ಪುರಿ ಜಗನ್ನಾಥ್ ಅವರ ಸಿನಿಮಾ ಸೆಟ್ಟೇರೋದು ಯಾವಾಗ? ಇದಕ್ಕೂ ಉತ್ತರ ಇದೆ. ಸದ್ಯ ತಂಡದವರು ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ರಿವೀಲ್ ಆಗಬೇಕಿದೆ.
ಇದನ್ನೂ ಓದಿ: ಸತತ ಸೋಲು, ತಮಿಳು ಹೀರೋ ಕೈಹಿಡಿದ ಪುರಿ ಜಗನ್ನಾಥ್, ಶೈಲಿಯೂ ಬದಲು
ಪುರಿ ಜಗನ್ನಾಥ್ ಅವರು ‘ಅಪ್ಪು’ ರೀತಿಯ ಸಿನಿಮಾಗಳನ್ನು ನೀಡಿದವರು. ಈಗ ಅವರಿಗೆ ನಿರ್ದೇಶನದ ಮೇಲಿನ ಹಿಡಿತ ಹೋಗಿದೆ. ‘ಲೈಗರ್’ ರೀತಿಯ ಚಿತ್ರವನ್ನು ಕೊಟ್ಟು ಅವರ ಚಿತ್ರಕ್ಕೆ ಯಾವುದೇ ನಿರ್ಮಾಪಕರು ಸಿಗದಿರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ, ತಮ್ಮ ಚಿತ್ರವನ್ನು ತಾವೇ ನಿರ್ಮಾಣ ಮಾಡಿಕೊಳ್ಳುವ ಪರಿಸ್ಥಿತಿ ಅವರಿಗೆ ಒದಗಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:06 am, Fri, 11 April 25