ಜೂನಿಯರ್ ಎನ್ಟಿಆರ್ ‘ವಾರ್ 2’ ಬ್ಯಾನ್ ಮಾಡಿ ಎಂದ ಶಾಸಕನಿಗೆ ಈಗ ನಡುಕ; ಬಹಿರಂಗ ಕ್ಷಮೆ
ಟಿಡಿಪಿ ಶಾಸಕ ದಗ್ಗುಬಾಟಿ ವೆಂಕಟೇಶ್ವರ ಪ್ರಸಾದ್ ಅವರು ಜೂನಿಯರ್ ಎನ್ಟಿಆರ್ ಅಭಿನಯದ ‘ವಾರ್ 2’ ಚಿತ್ರವನ್ನು ಬಹಿಷ್ಕರಿಸುವಂತೆ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ ಎಂಬ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಇದರಿಂದ ಕೋಪಗೊಂಡ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದು, ಶಾಸಕರು ಕ್ಷಮೆ ಕೇಳಿದ್ದಾರೆ. ಆಡಿಯೋ ನಕಲಿ ಎಂದು ಅವರು ಹೇಳಿದ್ದಾರೆ. ಆದರೆ ಈ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ.

ತೆಲುಗು ದೇಶಂ ಪಕ್ಷದ (ಟಿಡಿಪಿ) ಅನಂತಪುರ ಶಾಸಕ ದಗ್ಗುಬಾಟಿ ವೆಂಕಟೇಶ್ವರ ಪ್ರಸಾದ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ಜೂನಿಯರ್ ಎನ್‌ಟಿಆರ್ (JR NTR) ನಟಿಸಿದ ‘ವಾರ್ 2’ ಸಿನಿಮಾ ನೋಡದಂತೆ ತನ್ನ ಬೆಂಬಲಿಗರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅವರದ್ದು ಎನ್ನಲಾದ ಆಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜೂ.ಎನ್ಟಿಆರ್ ಫ್ಯಾನ್ಸ್ ಸಿಟ್ಟಾಗಿದ್ದಾರೆ. ಅವರ ಮನೆ ಮುಂದೆ ಪ್ರತಿಭಟನೆ ನಡೆದಿದ್ದು, ಶಾಸಕ ಕ್ಷಮೆ ಕೇಳಿದ್ದಾರೆ.
‘ಟಿಡಿಪಿಯಿಂದ ದೂರವಿರುವ ಎನ್‌ಟಿಆರ್ ಚಿತ್ರವನ್ನು ಏಕೆ ನೋಡಬೇಕು’ ಎಂದು ದಗ್ಗುಬಾಟಿ ಪ್ರಸಾದ್ ಪ್ರಶ್ನಿಸಿದ್ದಾರೆ ಎಂಬ ಆಡಿಯೋ ಕ್ಲಿಪ್ ವೈರಲ್ ಆಗಿದೆ. ನಟನ ವಿರುದ್ಧ ಕೆಟ್ಟ ಪದ ಬಳಕೆ ಆಗಿದೆ ಎನ್ನಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಲೀಕ್ ಆಗಿರುವ ಆಡಿಯೋಗೂ ವಂಕಟೇಶ್ವರ ಪ್ರಸಾದ್ ಧ್ವನಿಗೂ ಸಾಮ್ಯತೆ ಇದೆ. ಹೀಗಾಗಿ, ಜೂನಿಯರ್ ಎನ್ಟಿಆರ್ ಅಭಿಮಾನಿಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು.
ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಅಲ್ಲಿ ಕಟ್ಟಲಾದ ಶಾಸಕನ ಫ್ಲೆಕ್ಸ್ಗಳನ್ನು ನೆಲಕ್ಕೆ ಉರುಳಿಸಿದ್ದಾರೆ. ಶಾಸಕರ ವಿರುದ್ಧ ಘೋಷಣೆ ಕೂಗಿದ್ದಾರೆ. ‘ನಂದಮೂರಿ ಅಭಿಮಾನಿಗಳು ಇಲ್ಲದಿದ್ದರೆ ಟಿಡಿಪಿ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ’ ಎಂದು ಕೆಲವರು ಹೇಳಿದ್ದಾರೆ.
ಸ್ಪಷ್ಟನೆ ಕೊಟ್ಟ ದಗ್ಗುಬಾಟಿ ವೆಂಕಟೇಶ್ವರ ಪ್ರಸಾದ್
ಪ್ರತಿಭಟನೆಯಿಂದ ದಗ್ಗುಬಾಟಿ ವೆಂಕಟೇಶ್ವರ ಪ್ರಸಾದ್ ಭಯ ಬಿದ್ದಿದ್ದಾರೆ. ಅವರು ಕ್ಷಮೆ ಕೇಳಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಆ ಆಡಿಯೋ ಕ್ಲಿಪ್ ನನ್ನದಲ್ಲ. ಇದು ರಾಜಕೀಯ ಪಿತೂರಿ. ಅದು ನನ್ನ ಧ್ವನಿ ಅಲ್ಲದೆ ಇದ್ದರೂ ಜೂನಿಯರ್ ಎನ್ಟಿಆರ್ ಅಭಿಮಾನಿಗಳ ಬಳಿಕ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.
#MLADaggupatiPrasad#AtpMLA#NTR@tarak9999 pic.twitter.com/YXbY1Hu1Xr
— Prasad Daggupati (@PrasadDOfficial) August 17, 2025
‘ನಾನು ಆರಂಭದಿಂದಲೂ ನಂದಮೂರಿ ಕುಟುಂಬವನ್ನು ಮೆಚ್ಚುತ್ತಾ ಬಂದಿರುವವನು. ಬಾಲಯ್ಯ ಹಾಗೂ ಎನ್ಟಿರಾ್ ಸಿನಿಮಾಗಳನ್ನು ನಾನು ಮೊದಲಿನಿಂದಲೂ ಇಷ್ಟಪಟ್ಟಿದ್ದೇನೆ. ಫೇಕ್ ಆಡಿಯೋ ಬಿಡಲಾಗಿದೆ. ಇದು ಸಂಪೂರ್ಣ ಸುಳ್ಳು’ ಎಂದಿದ್ದಾರೆ ಅವರು.
ಇದನ್ನೂ ಓದಿ: ಜೂನಿಯರ್ ಎನ್ಟಿಆರ್ ಕನ್ನಡ ಪ್ರೇಮಕ್ಕೆ ಈ ವ್ಯಕ್ತಿಯೇ ಕಾರಣ
ಜೂನಿಯರ್ ಎನ್ಟಿಆರ್ ಮೇಲೆ ಅಸಮಧಾನ
‘ವಾರ್ 2′ ಚಿತ್ರದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಜೂನಿಯರ್ ಎನ್‌ಟಿಆರ್ ನೀಡಿದ ಹೇಳಿಕೆಯಿಂದ ಟಿಡಿಪಿ ಬೆಂಬಲಿಗರ ಒಂದು ವರ್ಗ ಅಸಮಾಧಾನಗೊಂಡಿದೆ. ‘ಅಜ್ಜ ನಂದಮೂರಿ ತಾರಕ ರಾಮರಾವ್ ಅವರ ಆಶೀರ್ವಾದ ಇರುವುದರಿಂದ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ’ ಎಂದಿದ್ದರು. ಇದು ಟಿಡಿಪಿ ಅವರಿಗೆ ಕೊಟ್ಟ ಎಚ್ಚರಿಕೆ ಎನ್ನಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








