AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡೆತಡೆಗಳು ದೂರ: ಬಿಗ್​​ಬಾಸ್ ಕನ್ನಡ 13ಕ್ಕೆ ಸಿಕ್ಕಿತು ಸರ್ಕಾರದ ಅನುಮತಿ

ಬಿಗ್​​ಬಾಸ್ ಕನ್ನಡ ಸೀಸನ್ 13 ನಾಳೆ (ಭಾನುವಾರ) ಆರಂಭ ಆಗಲಿದೆ. ಸುದೀಪ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಶೋನ ನಿರೂಪಣೆ ಮಾಡಲಿದ್ದಾರೆ, ಕಳೆದ ಸೀಸನ್​​ನಲ್ಲಿ ಸರ್ಕಾರದ ಕೆಲ ಕಠಿಣ ನಿಯಮಗಳಿಂದಾಗಿ ಶೋ ಅನ್ನು ಒಂದು ದಿನದ ಕಾಲ ಬಂದ್ ಮಾಡಬೇಕಾಗಿತ್ತು. ಬಿಗ್​​ಬಾಸ್ ಮನೆಗೆ ಬೀಗ ಸಹ ಹಾಕಲಾಗಿತ್ತು. ಆ ರೀತಿಯ ಸಮಸ್ಯೆಗಳು ಮತ್ತೆ ಎದುರಾಗದೇ ಇರಲೆಂದು ಈ ಬಾರಿ ಮುಂಚಿತವಾಗಿ ಬಿಗ್​​ಬಾಸ್​​ ಆಯೋಜಕರು ಎಚ್ಚರಿಕೆ ವಹಿಸಿದ್ದಾರೆ.

ಅಡೆತಡೆಗಳು ದೂರ: ಬಿಗ್​​ಬಾಸ್ ಕನ್ನಡ 13ಕ್ಕೆ ಸಿಕ್ಕಿತು ಸರ್ಕಾರದ ಅನುಮತಿ
Bigg Boss Kannada12
ಮಂಜುನಾಥ ಸಿ.
|

Updated on:Sep 05, 2026 | 9:24 PM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಶೋಕ್ಕೆ ಅನುಮತಿ ದೊರೆತಿದೆ.
  • ಮಾಲಿನ್ಯ ನಿಯಂತ್ರಣ ಇಲಾಖೆಯು ಶೋಗೆ ಅನುಮತಿ ನೀಡಿದೆ
  • ಕಳೆದ ಬಾರಿ ಶೋ ಅನ್ನು ಬಂದ್ ಮಾಡಲಾಗಿತ್ತು.

ಬಿಗ್​​ಬಾಸ್ ಕನ್ನಡ ಸೀಸನ್ 13 ಪ್ರಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದೆ. ಕರ್ನಾಟಕದ ಅತಿ ಜನಪ್ರಿಯ ರಿಯಾಲಿಟಿ ಶೋ ಇದಾಗಿದೆ. ಈ ಹಿಂದೆ ಕೆಲ ಬಾರಿ ಬಿಗ್​​ಬಾಸ್ ಶೋ ಸರ್ಕಾರದ ಕೆಂಗಣ್ಣಿಗೆ ಗುರಿ ಆಗಿತ್ತು. ವಿಶೇಷವಾಗಿ ಕಳೆದ ಬಾರಿ ಕರ್ನಾಟಕ ರಾಜ್ಯ ಮಾಲಿನ್ಯ ‌ನಿಯಂತ್ರಣ ಮಂಡಳಿ ತಳೆದ ನಿರ್ಧಾರದಿಂದಾಗಿ ಸ್ಪರ್ಧಿಗಳೆಲ್ಲ ಶೋ ಬಿಟ್ಟು ಬರಬೇಕಾಗಿತ್ತು ಹಾಗೂ ಬಿಗ್​​ಬಾಸ್ ಮನೆಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿತ್ತು. ಸುದೀಪ್ ಹಾಗೂ ಇತರರ ಸಹಾಯದಿಂದ ಶೋ ಮತ್ತೆ ಪುನರಾರಂಭ ಆಯ್ತು. ಈ ಬಾರಿಯೂ ಸಹ ಬಿಗ್​​ಬಾಸ್ ಮನೆಗೆ ಸರ್ಕಾರದ ನಿಯಮಗಳ ಜಂಜಡ ಇತ್ತು. ಇತ್ತೀಚೆಗಷ್ಟೆ ಮಾತನಾಡಿದ್ದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ರಾಮಲಿಂಗಾರೆಡ್ಡಿ ‘ಬಿಗ್​​ಬಾಸ್​​ನವರು ಇನ್ನೂ ಅನುಮತಿ ಕೇಳಿಲ್ಲ, ಕೇಳಿದರೆ ನೋಡೋಣ’ ಎಂದಿದ್ದರು. ಆದರೆ ಇದೀಗ ಬಿಗ್​​ಬಾಸ್​​ ಶೋಗೆ ಅನುಮತಿ ದೊರೆತಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ನ ಒಳಭಾಗದಲ್ಲಿ ಬಿಗ್​​ಬಾಸ್ ಮನೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಕರ್ನಾಟಕ ರಾಜ್ಯ ‌ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯಿಂದ ಬಿಗ್​​ಬಾಸ್ ಆಯೋಜಕರಿಗೆ ‘ಕನ್ಸೆಂಟ್ ಫಾರ್ ಆಪರೇಷನ್ಸ್ (ಪ್ರಕ್ರಿಯೆ ನಡೆಸಲು ಅನುಮತಿ) ಬಿಗ್​​ಬಾಸ್ ಆಯೋಜಕರಿಗೆ ದೊರೆತಿದೆ. ಈ ಮೂಲಕ ಈ ಬಾರಿ ಯಾವುದೇ ಸಮಸ್ಯೆಗಳಿಲ್ಲದೆ ಬಿಗ್​​ಬಾಸ್ ಶೋ ನಡೆಯುವುದು ಸಾಧ್ಯವಾಗಲಿದೆ.

ಇದನ್ನೂ ಓದಿ:ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು

ಕಳೆದ ಸೀಸನ್​​ನಲ್ಲಿ ಜಾಲಿವುಡ್​​ಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ನೊಟೀಸ್ ನೀಡಿ ಸ್ಟುಡಿಯೋ ಅನ್ನು ಬಂದ್ ಮಾಡಿಸಿತ್ತು. ನೇರವಾಗಿ ಬಿಗ್​​ಬಾಸ್​​ ಮೇಲಾಗಲಿ, ಬಿಗ್​​ಬಾಸ್ ಮನೆಯಿಂದ ನಿಯಮಗಳ ಉಲ್ಲಂಘನೆ ಬಗ್ಗೆ ಆಗಲಿ ದೂರು ಇರಲಿಲ್ಲವಾದರೂ ಜಾಲಿವುಡ್​​ ಬಂದ್ ಮಾಡಿದ್ದ ಕಾರಣ ಬಿಗ್​​ಬಾಸ್ ಶೋ ಅನ್ನು ಸಹ ಒಂದು ದಿನದ ಮಟ್ಟಿಗೆ ನಿಲ್ಲಿಸಬೇಕಾಗಿತ್ತು. ಆದರೆ ಸುದೀಪ್ ಅವರು ಆಗ ಡಿಸಿಎಂ ಆಗಿದ್ದ ಶಿವರಾಜ್ ಕುಮಾರ್ ಅವರ ಬಳಿ ಮನವಿ ಮಾಡಿ ಬಿಗ್​​ಬಾಸ್ ಶೋ ಶೂಟಿಂಗ್​​ಗೆ ಅನುಮತಿ ಕೊಡಿಸಿದ್ದರು. ಕೇವಲ ಬಿಗ್​​ಬಾಸ್​​​ ಸ್ಪರ್ಧಿಗಳು ಮತ್ತು ತಂತ್ರಜ್ಞರನ್ನು ಮಾತ್ರವೇ ಸ್ಟುಡಿಯೋ ಒಳಗೆ ಬಿಡಲಾಗಿತ್ತು.

ಆದರೆ ಈ ಬಾರಿ ಆ ರೀತಿಯ ಯಾವುದೇ ಸಮಸ್ಯೆ ಶೋಗೆ ಬರದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಮುಂಚಿತವಾಗಿ ಅಗತ್ಯ ಅನುಮತಿಗಳನ್ನು ತೆಗೆದುಕೊಳ್ಳಲಾಗಿದೆ. ಅದರ ಭಾಗವಾಗಿಯೇ ಈಗ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ಅನುಮತಿಯನ್ನು ತೆಗೆದುಕೊಳ್ಳಲಾಗಿದೆ.

ಬಿಗ್​​ಬಾಸ್ ಕನ್ನಡ ಸೀಸನ್ 13 ನಾಳೆ (ಭಾನುವಾರ) ಆರಂಭ ಆಗಲಿದೆ. ಸುದೀಪ್ ಅವರು ಪ್ರತಿ ಬಾರಿಯಂತೆ ಈ ಬಾರಿಯೂ ಶೋನ ನಿರೂಪಣೆ ಮಾಡಲಿದ್ದಾರೆ, ಕೆಲ ಮೂಲಗಳ ಪ್ರಕಾರ ಸುಮಾರು 20 ಮಂದಿ ಸ್ಪರ್ಧಿಗಳು ಈ ಬಾರಿ ಬಿಗ್​​ಬಾಸ್ ಮನೆ ಸೇರಲಿದ್ದಾರಂತೆ. ಕೆಲವರ ಹೆಸರುಗಳು ಈಗಾಗಲೇ ಬಹಿರಂಗ ಸಹ ಆಗಿದೆ. ನಾಳೆ ಸಂಜೆ ಏಳು ಗಂಟೆಗೆ ಅಧಿಕೃತವಾಗಿ ಶೋ ಆರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Sat, 5 September 26

Follow Us