AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ಲವ್​​ಸ್ಟೋರಿ? ಕೊನೆಗೂ ಸಿಕ್ತಾ ತಾಂಡವ್​​ಗೆ ಜೋಡಿ?

ಈಗಾಗಲೇ ಬಿಗ್​​ಬಾಸ್ ಮನೆಯಲ್ಲಿ ಒಂದು ಜೋಡಿ ಇದೆ. ಯಶಸ್​​ ಮತ್ತು ಆಸಿಯಾರನ್ನು ಪ್ರೇಕ್ಷಕರು ಜೋಡಿಯಂತೆ ನೋಡುತ್ತಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ, ಕೆಲವೊಮ್ಮೆ ಪ್ರೀತಿ-ಪ್ರೇಮದ ಮಾತುಗಳು ಸಹ ಪರೋಕ್ಷವಾಗಿ ನುಸುಳುತ್ತವೆ. ಇದೀಗ ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ಜೋಡಿ ಆಗುವ ಸುಳಿವು ಸಣ್ಣಗೆ ಸಿಗುತ್ತಿದೆ.

ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ಲವ್​​ಸ್ಟೋರಿ? ಕೊನೆಗೂ ಸಿಕ್ತಾ ತಾಂಡವ್​​ಗೆ ಜೋಡಿ?
Tandav Ram
ಮಂಜುನಾಥ ಸಿ.
|

Updated on: Oct 30, 2026 | 11:16 PM

Share

ಮುಖ್ಯಾಂಶಗಳು

  • ಬಿಗ್​ಬಾಸ್ ಕನ್ನಡ ಸೀಸನ್ 13ರಲ್ಲಿ ಹೊಸ ಜೋಡಿ
  • ತಾಂಡವ್ ಹಾಗೂ ಸೋನಿಕಾ ನಡುವೆ ಗುಡ್ ಕೆಮಿಸ್ಟ್ರಿ
  • ಜೋಡಿ ಆಗ್ತಾರಾ ತಾಂಡವ್ ಮತ್ತು ಸೋನಿಕಾ

ಬಿಗ್​​ಬಾಸ್​​ನ ಪ್ರತಿ ಸೀಸನ್​​ನಲ್ಲೂ ಒಂದಲ್ಲ ಒಂದು ಜೋಡಿ ಆಗುತ್ತಲೇ ಇರುತ್ತದೆ. ಕೆಲ ಜೋಡಿ ಬಿಗ್​​ಬಾಸ್ ಮನೆಯ ಹೊರಗೂ ಉಳಿದುಕೊಂಡರೆ ಬಹುತೇಕ ಜೋಡಿಗಳು ಬಿಗ್​​ಬಾಸ್ ಮನೆಯಲ್ಲೇ ಅಂತ್ಯವಾಗುತ್ತವೆ. ಈಗಾಗಲೇ ಬಿಗ್​​ಬಾಸ್ ಮನೆಯಲ್ಲಿ ಒಂದು ಜೋಡಿ ಇದೆ. ಯಶಸ್​​ ಮತ್ತು ಆಸಿಯಾರನ್ನು ಪ್ರೇಕ್ಷಕರು ಜೋಡಿಯಂತೆ ನೋಡುತ್ತಿದ್ದಾರೆ. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ, ಕೆಲವೊಮ್ಮೆ ಪ್ರೀತಿ-ಪ್ರೇಮದ ಮಾತುಗಳು ಸಹ ಪರೋಕ್ಷವಾಗಿ ನುಸುಳುತ್ತವೆ. ಇದೀಗ ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ಜೋಡಿ ಆಗುವ ಸುಳಿವು ಸಣ್ಣಗೆ ಸಿಗುತ್ತಿದೆ.

ತಾಂಡವ್ ಹಾಗೂ ಸೋನಿಕಾ ನಡುವೆ ಇಂಥಹದ್ದೊಂದು ಕೆಮಿಸ್ಟ್ರಿ ಶುರುವಾಗುತ್ತಿರುವುದನ್ನು ಪ್ರೇಕ್ಷಕರು ಗಮನಿಸುತ್ತಿದ್ದಾರೆ. ಈ ವಾರವೆಲ್ಲ ಬಿಗ್​​ಬಾಸ್ ಮನೆಯಲ್ಲಿ ಸೌಂದರ್ಯಾ ಶೆಟ್ಟಿ ಸ್ವಯಂವರ ನಡೆಯಿತು. ಈ ಟಾಸ್ಕ್​​ನಲ್ಲಿ ತಾಂಡವ್ ಅವರು ಸೌಂದರ್ಯಾ ತಂದೆಯ ಪಾತ್ರವಹಿಸಿದ್ದರು. ಅವರಿಗೆ ಜೋಡಿಯಾಗಿ ಪ್ರಶಾಂತ್ ಅವರಿಗೆ ಮಹಿಳೆಯ ವೇಷ ತೊಡಿಸಲಾಗಿತ್ತು. ಆದರೆ ತಾಂಡವ್ ಆರಂಭದಲ್ಲಿಯೇ ತಮಗೆ ಪತ್ನಿಯಾಗಿ ಸೋನಿಕಾ ಅವರನ್ನು ನೀಡುವಂತೆ ಮನವಿ ಮಾಡಿದ್ದರು. ಆದರೆ ಬಿಗ್​ಬಾಸ್ ಒಪ್ಪಿರಲಿಲ್ಲ.

ಶುಕ್ರವಾರ ಪ್ರಸಾರವಾದ ಎಪಿಸೋಡಿನಲ್ಲಿ, ಟಾಸ್ಕಿನ ಮಧ್ಯೆ ಸೋನಿಕಾ, ಗಾನವಿ, ತಾಂಡವ್ ಮತ್ತು ಗಗನ್ ಸೋಫಾ ಮೇಲೆ ಕುಳಿತು ಮದುವೆಯ ವಿಷಯ, ಒಳ್ಳೆಯ ಗಂಡು ಸಿಗುವುದು ಎಷ್ಟು ಕಷ್ಟ ಎಂಬಿತ್ಯಾದಿ ವಿಷಯಗಳನ್ನು ಮಾತನಾಡುತ್ತಿದ್ದರು. ಈ ವೇಳೆ ತಾಂಡವ್ ಕೆಲ ತಮಾಷೆ ವಿಷಯಗಳನ್ನು ಹೇಳಿದರು. ಬಳಿಕ ಸೋನಿಕಾ, ತಾಂಡವ್ ಅವರನ್ನು ಉದ್ದೇಶಿಸಿ, ‘ನಿಮ್ಮನ್ನು ಮದುವೆ ಆಗುವ ಹುಡುಗಿ ಸಖತ್ ಲಕ್ಕಿ, ಅವಳಿಗೆ ಬೋರ್ ಆಗಲು ನೀವು ಬಿಡುವುದಿಲ್ಲ, ಸದಾ ಅವಳನ್ನು ಎಂಟರ್ಟೈನ್​​ ಮಾಡುತ್ತಲೇ ಇರುತ್ತೀರ’ ಎಂದು ಪ್ರಶಂಸಿದರು.

ಇದನ್ನೂ ಓದಿ:ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ

ಬಳಿಕ ಗಗನ್, ‘ಸೋನಿಕಾ ಮತ್ತು ತಾಂಡವ್ ಯಾಕೆ ಮದುವೆ ಆಗಬಾರದು?’ ಎಂದು ನೇರವಾಗಿ ಹೇಳಿದರು. ಆಗ ಇಬ್ಬರ ಮುಖದಲ್ಲಿಯೂ ಸಣ್ಣ ಮಂದಹಾಸ ಮೂಡಿತೇ ವಿನಃ ಇಬ್ಬರೂ ಸಹ ಬೇಡ, ಹಾಗಲ್ಲ ಹೀಗೆ ಎಂದೆಲ್ಲ ಸ್ಪಷ್ಟನೆ ಕೊಡುವ ಪ್ರಯತ್ನವನ್ನೂ ಮಾಡಲಿಲ್ಲ. ಸೋನಿಕಾ ಬಗ್ಗೆ ತಾಂಡವ್ ಅವರಿಗೆ ಸಣ್ಣ ಸಾಫ್ಟ್ ಕಾರ್ನರ್ ಇದ್ದೇ ಇದೆ. ಸೋನಿಕಾ ಅವರಿಗೂ ತಾಂಡವ್ ಅವರ ಬಗ್ಗೆ ಗೌರವ, ಕಾಳಜಿಗಳು ಸ್ಪಷ್ಟವಾಗಿ ಕಾಣುತ್ತದೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ಧನ್ವೀರ್ ವಿರುದ್ಧ ನಿರ್ಬಂಧಜಾಜ್ಞೆ: ದರ್ಶನ್ ಪರ ವಕೀಲರು ಹೇಳಿದ್ದಿಷ್ಟು
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ಹೆಲಿಕಾಪ್ಟರ್​​ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್​ಪೆಕ್ಟರ್ ಅರುಣ್ ಯಾರು
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
ದೇವೇಗೌಡರ ಭೇಟಿಯಾದ ಯಡಿಯೂರಪ್ಪ: ಕುತೂಹಲ ಮೂಡಿಸಿದ ಮಾಜಿ CM ನಡೆ
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
‘ಪ್ರೇಮದ ಊರಲಿ ಪಾರ್ಟ್ 2’ ಬರುತ್ತ? ನೇರವಾಗಿ ಉತ್ತರ ನೀಡಿದ ನಿರ್ದೇಶಕ ಮನೋಜ್
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಅಶೋಕ್​​ ಸವಾಲು
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
‘ಕೆಲಸ ಮಾಡಲ್ಲ ಅಂದ್ರೆ ಮಾಡಲ್ಲ’: ಸೌಂದರ್ಯಾ ಜೊತೆ ಗಗನ್ ಜಗಳ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ
ಬಿಗ್ ಬಾಸ್ ಮನೆಯಲ್ಲಿ ಸೋನಿಕಾ, ತಾಂಡವ್, ಗಗನ್ ಮದುವೆ ಮಾತುಕತೆ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರ: ಪೊಲೀಸರ ಜೊತೆಗೆ ಫೀಲ್ಡಿಗಿಳಿದ ಸಚಿವ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ
​​ಸ್ಟಿಂಗ್ ಆಪರೇಷನ್​ ಕೇಸಿಗೆ ಸ್ಫೋಟಕ ತಿರುವು:ಕುತೂಹಲ ಮೂಡಿಸಿದ ಸಿಸಿಬಿ ನಡೆ