ನಿಮ್ಮ ಅಕ್ಕ-ತಂಗಿಯರನ್ನು ನೀವು ಇದೇ ರೀತಿ ನೋಡ್ಕೊಳ್ತೀರಾ?; ರಾಂಗ್​ ಆದ ಪ್ರಶಾಂತ್​ ಸಂಬರಗಿ

Prashanth Sambargi: ಮನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ಮಾಡಲು ಸೂಚನೆ ನೀಡಲಾಗಿತ್ತು. ಮನೆಯ ಸದಸ್ಯರೆಲ್ಲರೂ ಕೂತು ಇದಕ್ಕೆ ಪ್ಲ್ಯಾನ್​ ಮಾಡುತ್ತಿದ್ದರು. ಆಗ ಈ ಘಟನೆ ನಡೆದಿದೆ.

  • TV9 Web Team
  • Published On - 6:39 AM, 9 Mar 2021
ನಿಮ್ಮ ಅಕ್ಕ-ತಂಗಿಯರನ್ನು ನೀವು ಇದೇ ರೀತಿ ನೋಡ್ಕೊಳ್ತೀರಾ?; ರಾಂಗ್​ ಆದ ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ-ಲ್ಯಾಗ್​ ಮಂಜು

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಡಾಮಿನೇಟ್​ ಮಾಡೋಕೆ ನೋಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಅವರು ಈ ಬಾರಿಯ ಎಲಿಮಿನೇಷನ್​ಗೆ ನಾಮಿನೇಟ್​ ಕೂಡ ಆಗಿದ್ದಾರೆ. ಈ ಮಧ್ಯೆ ಬಿಗ್​ ಬಾಸ್​ ಮನೆಯಲ್ಲಿ ನಡೆದ ಜಗಳವೊಂದರಲ್ಲಿ ನಿಮ್ಮ ಅಕ್ಕ-ತಂಗಿಯರನ್ನು ನೀವು ಇದೇ ತರಹ ನೋಡಿ ಕೊಳ್ಳುತ್ತೀರಾ ಎಂದು ಲ್ಯಾಗ್​ ಮಂಜುಗೆ ಪ್ರಶಾಂತ್​ ಪ್ರಶ್ನೆ ಮಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ಮಾಡಲು ಸೂಚನೆ ನೀಡಲಾಗಿತ್ತು. ಮನೆಯ ಸದಸ್ಯರೆಲ್ಲರೂ ಕೂತು ಇದಕ್ಕೆ ಪ್ಲ್ಯಾನ್​ ಮಾಡುತ್ತಿದ್ದರು. ಈ ವೇಳೆ ಮಂಜು ಒಂದು ಆಲೋಚನೆಯ ಬಗ್ಗೆ ಹೇಳಿದರು.

ಹೆಣ್ಣಾಗಿ ಹುಟ್ಟಿದವಳೊಬ್ಬಳು ಓದೋಕೆ ಹೋಗುತ್ತಾಳೆ. ಅವಳಿಗೆ ಮನೆಯವರಿಂದಲೇ ತೊಂದರೆ ಎದುರಾಗುತ್ತದೆ. ತಂದೆ-ತಾಯಿ ಯಾರೂ ಅವರಿಗೆ ಬೆಂಬಲ ನೀಡುವುದಿಲ್ಲ. ಅವಳು ಪ್ರತಿ ಹಂತದಲ್ಲೂ ತೊಂದರೆ ಅನುಭವಿಸುತ್ತಾಳೆ. ಹೀಗೆ ತೊಂದರೆ ಅನುಭವಿಸುವ ಅವಳು ನಂತರ ಗೆಲ್ಲುತ್ತಾಳೆ. ಈ ಮೂಲಕ ಅವಳು ಸಮಾಜಕ್ಕೆ ಒಂದು ಸಂದೇಶ ರವಾನೆ ಮಾಡುತ್ತಾಳೆ. ಇದು ನಾಟಕದ ಸಾರಾಂಶ ಎಂದು ಹೇಳಿದರು.

ಇದಕ್ಕೆ ಪ್ರಶಾಂತ್​ ಸಂಬರಗಿ ವಿರೋಧ ವ್ಯಕ್ತಪಡಿಸಿದರು. ನಾವು 21ನೇ ಶತಮಾನದಲ್ಲಿದ್ದೇವೆ. ಇಲ್ಲಿ ಎಲ್ಲವೂ ಬದಲಾಗಿದೆ. ಈಗ ಮನೆಯ ಹೆಣ್ಣುಮಕ್ಕಳಿಗೆ ಬೆಂಬಲ ಕೊಡುತ್ತಾರೆ. ಬ್ರೂಣ ಹತ್ಯೆ ಸಂಪೂರ್ಣವಾಗಿ ನಿಂತಿದೆ. ನಿಮ್ಮ ಕಥೆಯಲ್ಲಿ ಇದ್ದಂತೆ ನಿಮ್ಮ ಅಕ್ಕ ತಂಗಿಯರನ್ನು ನೀವು ಇದೇ ತರ ನೋಡಿ ಕೊಳ್ತೀರಾ ಎಂದು ಪ್ರಶ್ನೆ ಮಾಡಿದರು. ನಂತರ ಈ ಚರ್ಚೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ: BBK8: ಬಿಗ್​ ಬಾಸ್​ ಕನ್ನಡ ಎರಡನೇ ವಾರದ ಎಲಿಮಿನೇಷನ್​ಗೆ 8 ಸದಸ್ಯರು ನಾಮಿನೇಟ್​

BBK8: ನಾನು ಕ್ಯಾಪ್ಟನ್​ ಆದ್ರೆ ನಿಂಗ್​ ಐತೆ ಹಬ್ಬ; ಶಮಂತ್​ಗೆ ಎಚ್ಚರಿಕೆ ನೀಡಿದ ಲ್ಯಾಗ್​ ಮಂಜು