ಅಪ್ಪ-ಅಮ್ಮ ಇಲ್ಲದೆ ಬದುಕಬಹುದು; ಫ್ರೆಂಡ್ಸ್ ಇಲ್ಲದೇ ಬದುಕೋಕೆ ಆಗಲ್ಲ! ಮಂಜು ಹೀಗೆ ಹೇಳಿದ್ದು ಯಾಕೆ?
Bigg Boss Kannada: ಮಂಜು ಪಾವಗಡ ಹೇಳಿದ ಈ ಮಾತು ಕೇಳಿದ ಬಳಿಕ ದಿವ್ಯಾ ಸುರೇಶ್ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ತಮಗೆ ಮಂಜು ಬಗ್ಗೆ ಯಾವ ಭಾವನೆ ಇದೆ ಎಂಬುದನ್ನು ಅವರು ಎಲ್ಲರ ಎದುರಿನಲ್ಲೂ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಎಂದರೆ ಒಂದು ವಿವಾದಾತ್ಮಕ ಶೋ ಎಂಬ ಅನಿಸಿಕೆ ಹಲವರ ಮನದಲ್ಲಿ ಇದೆ. ಆದರೆ ಬಿಗ್ ಬಾಸ್ ಮನೆಯೊಳಗೆ ಎಮೋಷನ್ಗಳಿಗೆ ಹೆಚ್ಚು ಜಾಗ ಇದೆ ಎಂಬುದು ಕೂಡ ನಿಜ. ಪ್ರತಿ ಸೀಸನ್ನಲ್ಲೂ ಅದು ಸಾಬೀತಾಗಿದೆ. ಪ್ರತಿ ದಿನ ಟಾಸ್ಕ್ ಎಂದು ಕಿತ್ತಾಡುವ ಸ್ಪರ್ಧಿಗಳು ಕೆಲವೊಮ್ಮೆ ತುಂಬ ಆತ್ಮೀಯವಾಗಿ ಪರಸ್ಪರ ಬೆರೆಯುತ್ತಾರೆ. ತಮ್ಮ ಬದುಕಿನ ಮಹತ್ವದ ಸಂಗತಿಗಳನ್ನು ಎಲ್ಲರ ಜೊತೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಅಂಥದ್ದೊಂದು ಘಟನೆ ನಡೆಯಿತು.
‘ಒಲವಿನ ಉಡುಗೊರೆ ಕೊಡಲೇನು’ ಎಂಬ ಟಾಸ್ಕ್ನಲ್ಲಿ ಹುಡುಗರು ತಮ್ಮಿಷ್ಟದ ಹುಡುಗಿಗೆ ಬಲೂನ್ ನೀಡಬೇಕಿತ್ತು. ಆಗ ಮಂಜು ಪಾವಗಡ ಅವರು ದಿವ್ಯಾ ಸುರೇಶ್ ಹೆಸರನ್ನು ಆಯ್ಕೆ ಮಾಡಿಕೊಂಡರು. ತಮ್ಮ ಮತ್ತು ದಿವ್ಯಾ ನಡುವಿನ ಸ್ನೇಹ ಯಾವ ರೀತಿಯಾಗಿದೆ ಎಂಬುದನ್ನು ಅವರು ವಿವರಿಸಿದರು. ಅಲ್ಲದೆ, ಜೀವನದಲ್ಲಿ ಫ್ರೆಂಡ್ಸ್ ಎಷ್ಟು ಮುಖ್ಯ ಎಂಬುದರ ಬಗ್ಗೆ ಮಂಜು ಮನಬಿಚ್ಚಿ ಮಾತನಾಡಿದರು.
‘ನನಗೆ ಫ್ರೆಂಡ್ಸ್ ಎಂದರೆ ತುಂಬಾ ಗೌರವ. ಈಗ ನನಗೆ 34 ವರ್ಷ. ಇಷ್ಟು ವರ್ಷಗಳಲ್ಲಿ ನಾನು ಮನೆಯಲ್ಲಿ ಇರುವುದಕ್ಕಿಂತ ಹೊರಗೆ ಇದ್ದಿದ್ದೇ ಹೆಚ್ಚು. 8ರಿಂದ 10 ವರ್ಷ ಮಾತ್ರ ಮನೆಯಲ್ಲಿ ಇದ್ದಿರಬಹುದು. ಇಬ್ಬರು ಮೂವರು ತುಂಬಾ ಬೆಸ್ಟ್ ಫ್ರೆಂಡ್ಸ್ ಇದಾರೆ. ಈಗ ಅವರ ಜೊತೆಗೆ ದಿವ್ಯಾ ಸುರೇಶ್ ಕೂಡ ಸೇರಿಕೊಂಡಿದ್ದಾಳೆ. ಅದನ್ನು ಹೇಳೋಕೆ ತುಂಬ ಖುಷಿ ಆಗುತ್ತದೆ’ ಎಂದು ಮಂಜು ಹೇಳಿದರು.
‘ನಾನು ಮಕ್ಕಳ ರೀತಿ ಆಟ ಆಡುತ್ತೇನೆ. ನನ್ನ ತಮ್ಮ ಇದ್ದಾನೆ. ಆದರೆ ಅವನ ಜೊತೆ ನನಗೆ ಹೆಚ್ಚು ಒಡನಾಟ ಇಲ್ಲ. ಆದರೆ ಫ್ರೆಂಡ್ಸ್ ಜೊತೆ ತುಂಬಾ ಸಲಿಗೆಯಿಂದ ಜಗಳವಾಡುತ್ತ ಬೆಳೆದಿದ್ದೇನೆ. ಒಮ್ಮೆ ಫ್ರೆಂಡ್ ಅಂತ ನಿರ್ಧಾರ ಮಾಡಿದ ಮೇಲೆ ಅವನು ಒಳ್ಳೆಯವನಾಗಲಿ, ಕೆಟ್ಟವನಾಗಲಿ, ಜಗಳ ಆಡಲಿ, ದೂರ ಹೋಗಲಿ. ಏನೇ ಮಾಡಿದರೂ ಸಾಯೋವರೆಗೂ ಅವನು ನನಗೆ ಸ್ನೇಹಿತನೇ. ತಂದೆ-ತಾಯಿ ಇಲ್ಲದೇ ಇರಬಹುದು. ಆದರೆ ಫ್ರೆಂಡ್ಸ್ ಇಲ್ಲದೇ ಇರೋಕೆ ಈ ಪ್ರಪಂಚದಲ್ಲಿ ಯಾರಿಗೂ ಸಾಧ್ಯವಿಲ್ಲ. ಜೀವನದಲ್ಲಿ ಫ್ರೆಂಡ್ಸ್ ತುಂಬಾ ಮುಖ್ಯ. ಅವರ ಬೆಂಬಲದಿಂದಲೇ ನಾನು ಇವತ್ತು ಈ ಮಟ್ಟಕ್ಕೆ ಬಂದಿದ್ದೇನೆ’ ಎನ್ನುತ್ತ ಮಂಜು ಎಮೋಷನಲ್ ಆಗಿದ್ದಾರೆ.
ಮಂಜು ಪಾವಗಡ ಹೇಳಿದ ಈ ಮಾತು ಕೇಳಿದ ಬಳಿಕ ದಿವ್ಯಾ ಸುರೇಶ್ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ತಮಗೆ ಮಂಜು ಬಗ್ಗೆ ಯಾವ ಭಾವನೆ ಇದೆ ಎಂಬುದನ್ನು ಅವರು ಎಲ್ಲರ ಎದುರಿನಲ್ಲೂ ಹೇಳಿಕೊಂಡಿದ್ದಾರೆ. ಸ್ವಲ್ಪ ಹೊತ್ತು ಮಂಜು ಕಾಣಿಸಿಕೊಳ್ಳದೇ ಇದ್ದರೆ ನನ್ನ ಸ್ವಂತದ್ದು ಏನೋ ಕಳೆದುಕೊಂಡಂತೆ ಅನಿಸುತ್ತದೆ. ಅವನನ್ನು ನಾನು ತುಂಬಾ ಪ್ರೀತಿಸುತ್ತೇನೆ’ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ 7ನೇ ವಾರ ಬಿಗ್ ಫೈಟ್! ಘಟಾನುಘಟಿಗಳೆಲ್ಲ ನಾಮಿನೇಟ್
ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್ ಬಾಸ್ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ
(Bigg Boss Kannada 8 : Manju Pavagada talks about his friendship with Divya Suresh in BBK8)
Published On - 3:48 pm, Tue, 13 April 21