AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರ ಜಗಳದಲ್ಲಿ ಲಾಭ ಪಡೆಯುತ್ತಿದ್ದಾರಾ ಆಸಿಯಾ? ಕೇಳಿಬಂತು ಆರೋಪ

ಬಿಗ್ ಬಾಸ್ ಕನ್ನಡ ವೀಕೆಂಡ್ ಎಪಿಸೋಡ್‌ನಲ್ಲಿ ನಡೆದ ಯೆಸ್ ಆರ್ ನೋ ರೌಂಡ್ ಗರಂ ವಾತಾವರಣ ಸೃಷ್ಟಿಸಿತ್ತು. ಇಬ್ಬರ ಜಗಳದಲ್ಲಿ ಲಾಭ ಪಡೆಯುವ ಮೂರನೇ ವ್ಯಕ್ತಿ ಆಸಿಯಾ ಎಂಬ ಪ್ರಶ್ನೆಗೆ ಸ್ಪರ್ಧಿಗಳು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಗಾನವಿ ಸೋನಿಕಾ ಆರೋಪಕ್ಕೆ ಆಸಿಯಾ ನೀಡಿದ ತಿರುಗೇಟು ಇಲ್ಲಿದೆ.

ಇಬ್ಬರ ಜಗಳದಲ್ಲಿ ಲಾಭ ಪಡೆಯುತ್ತಿದ್ದಾರಾ ಆಸಿಯಾ? ಕೇಳಿಬಂತು ಆರೋಪ
ಆಸಿಯಾ
ರಾಜೇಶ್ ದುಗ್ಗುಮನೆ
|

Updated on: Nov 02, 2026 | 7:31 AM

Share

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ಯೆಸ್ ಆರ್ ನೋ ರೌಂಡ್
  • ಆಸಿಯಾ ವಿರುದ್ಧ ಸ್ಪರ್ಧಿಗಳ ಆರೋಪ
  • ಆಸಿಯಾ ನೀಡಿದ ಖಡಕ್ ಸ್ಪಷ್ಟನೆ

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನ ವೀಕೆಂಡ್ ಎಪಿಸೋಡ್‌ನಲ್ಲಿ ಈ ಬಾರಿ ‘ಯೆಸ್ ಆರ್ ನೋ’ ರೌಂಡ್ ಸಾಕಷ್ಟು ಕುತೂಹಲ ಮೂಡಿಸಿತು. ಆರಂಭದ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಸಿಯಾ ಅವರು ಈಗ ಡಲ್ ಆಗಿದ್ದಾರೆ. ಈ ಬಗ್ಗೆ ಸುದೀಪ್ ಪ್ರಶ್ನೆ ಮಾಡಿದರು. ಇದಕ್ಕೆ ಎಲ್ಲಾ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸುದೀಪ್ ಅವರು ‘ಇಬ್ಬರ ಜಗಳದಲ್ಲಿ ಲಾಭ ಪಡೆಯುವ ಮೂರನೇ ವ್ಯಕ್ತಿ ಅಂದ್ರೆ ಅದು ಆಸಿಯಾ’ ಎಂಬ ಪ್ರಶ್ನೆಯನ್ನು ಸ್ಪರ್ಧಿಗಳ ಮುಂದಿಟ್ಟರು. ಇದಕ್ಕೆ ಮನೆಯ ಬಹುತೇಕ ಸದಸ್ಯರು ‘ನೋ’ ಎಂದು ಉತ್ತರಿಸಿದರೆ, ಗಗನ್, ಗಾನವಿ ಹಾಗೂ ಸೋನಿಕಾ ಮಾತ್ರ ‘ಯೆಸ್’ ಎಂದು ಪ್ರತಿಕ್ರಿಯಿಸಿದರು. ಈ ಮೂಲಕ ಆಸಿಯಾ ಅವರ ಆಟದ ಶೈಲಿ ಹಾಗೂ ಇತರೆ ಸ್ಪರ್ಧಿಗಳ ಜಗಳದಲ್ಲಿ ಅವರ ಅನಗತ್ಯ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ಹೊರಹಾಕಿದರು.

ಈ ಕುರಿತು ಮಾತನಾಡಿರುವ ಸೋನಿಕಾ, ‘ಆಸಿಯಾ ಅವರು ಮೊಟ್ಟೆ ಮತ್ತು ಹಾಲಿನ ವಿಷಯಕ್ಕೂ ಜಗಳ ಆಡುತ್ತಾರೆ ಹಾಗೂ ಯಾರದ್ದೋ ಜಗಳದ ಮಧ್ಯೆ ಹೋಗುತ್ತಾರೆ’ ಎಂದು ಆರೋಪಿಸಿದರು. ‘ಇದಕ್ಕೆ ದನಿಗೂಡಿಸಿದ ಗಾನವಿ, ಸಂಬಂಧವೇ ಇಲ್ಲದ ವಿಷಯಗಳಿಗೂ ಆಸಿಯಾ ಮಧ್ಯೆ ಪ್ರವೇಶಿಸುತ್ತಾರೆ. ಅದರಲ್ಲೂ ಯಶಸ್ ವಿಷಯ ಬಂದಾಗ ಅವರು ಯಾಕಿಷ್ಟು ತಲೆಹಾಕಬೇಕು? ಯಶಸ್ ಪರವಾಗಿ ಯಶಸ್ ಹಾಗೂ ಆಸಿಯಾ ಪರವಾಗಿ ಆಸಿಯಾ ಮಾತನಾಡಬೇಕು. ಆದರೆ ಬೇರೆಯವರ ವಿಚಾರದಲ್ಲಿ ಆಸಿಯಾ ಮೂಗು ತೂರಿಸುತ್ತಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಆಸಿಯಾ, ತಾನು ಯಾರ ಜಗಳಕ್ಕೂ ಸುಖಾಸುಮ್ಮನೆ ಹೋಗುವುದಿಲ್ಲ ಎಂದು ಸಮರ್ಥಿಸಿಕೊಂಡರು. ತನ್ನದೇ ವಿಷಯ ಬಂದಾಗ ಮಾತ್ರ ತಾನು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪ್ರಶಾಂತ್​-ತಾಂಡವ್ ಅದ್ಭುತವಾಗಿ ಆಡಿದ್ರೂ ಚಪ್ಪಾಳೆ ಏಕೆ ಕೊಟ್ಟಿಲ್ಲ? ಕಾರಣ ಕೊಟ್ಟ ಕಿಚ್ಚ

‘ಯಶಸ್ ಹಾಗೂ ಗಗನ್ ಜಗಳವಾಡುತ್ತಿದ್ದಾಗ ತಮ್ಮ ಹೆಸರು ಪ್ರಸ್ತಾಪವಾದ ಕಾರಣದಿಂದಲೇ ತಾನು ಮಧ್ಯಪ್ರವೇಶಿಸಬೇಕಾಯಿತು. ಆದರೆ ಆ ಒಂದು ಕಾರಣದಿಂದ ನಾನು ಮನೆಯೊಳಗೆ ಸಾಕಷ್ಟು ತೊಂದರೆ ಹಾಗೂ ಮಾನಸಿಕ ಅಶಾಂತಿ ಅನುಭವಿಸಿದೆ’ ಎಂದು ಅಳಲು ತೋಡಿಕೊಂಡರು. ಒಟ್ಟಿನಲ್ಲಿ ಈ ಯೆಸ್ ಆರ್ ನೋ ರೌಂಡ್ ಆಸಿಯಾ ಅವರ ಆಟದ ತಂತ್ರಗಾರಿಕೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More