AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada Press Meet Live: ‘ಬಿಗ್ ಬಾಸ್ ಕನ್ನಡ ಸೀಸನ್​ 12’ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಸುದ್ದಿಗೋಷ್ಠಿ ಲೈವ್

‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್​ ಪ್ರಸಾರಕ್ಕೆ ತಯಾರಿ ನಡೆಯುತ್ತಿದೆ. ಆ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 12’ ಶೋ ಬಗ್ಗೆ ಹಬ್ಬಿರುವ ಅಂತೆ-ಕಂತೆಗಳಿಗೆ ಆಯೋಜಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಶೋ ನಿರೂಪಕರಾಗಿ ಕಿಚ್ಚ ಸುದೀಪ್ ಮುಂದುವರಿಯುತ್ತಾರಾ ಎಂಬ ಪ್ರಶ್ನೆಗೂ ಉತ್ತರ ಸಿಗಲಿದೆ.

Bigg Boss Kannada Press Meet Live: ‘ಬಿಗ್ ಬಾಸ್ ಕನ್ನಡ ಸೀಸನ್​ 12’ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಸುದ್ದಿಗೋಷ್ಠಿ ಲೈವ್
Bigg Boss Kannada, Kichcha Sudeep
ಮದನ್​ ಕುಮಾರ್​
|

Updated on:Jun 30, 2025 | 4:11 PM

Share

ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಶೋ ‘ಬಿಗ್ ಬಾಸ್’ (Bigg Boss) ವಿವಿಧ ಭಾಷೆಗಳಲ್ಲಿ ಸಕ್ಸಸ್ ಆಗಿದೆ. ಕನ್ನಡದಲ್ಲಿ ಕೂಡ ಯಶಸ್ವಿಯಾಗಿ 11 ಸೀಸನ್​ಗಳು ಪೂರ್ಣಗೊಂಡಿವೆ. 11ನೇ ಸೀಸನ್​ನಲ್ಲಿ ಸಿಂಗರ್ ಹನುಮಂತ ಅವರು ಟ್ರೋಫಿ ಗೆದ್ದರು. ಈಗ 12ನೇ ಸೀಸನ್​​ಗೆ ನಿರೀಕ್ಷೆ ಹೆಚ್ಚಾಗಿದೆ. ‘ಬಿಗ್ ಬಾಸ್​ ಕನ್ನಡ ಸೀಸನ್ 12’ (Bigg Boss Kannada 12) ಕಾರ್ಯಕ್ರಮವನ್ನು ಯಾರು ನಿರೂಪಣೆ ಮಾಡುತ್ತಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಇದೆ. ಮತ್ತೆ ಸುದೀಪ್ (Kichcha Sudeep) ಅವರೇ ನಿರೂಪಣೆ ಮಾಡಬೇಕು ಎಂಬುದು ಅಭಿಮಾನಿಗಳ ಆಸೆ. ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಏರ್ಪಡಿಸಲಾಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ‘ಕಲರ್ಸ್​ ಕನ್ನಡ’ ವಾಹಿನಿಯು ಸುದ್ದಿಗೋಷ್ಠಿ ಆಯೋಜಿಸಿದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ರಿಯಾಲಿಟಿ ಶೋನ ಆಯೋಜಕರು ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಯ ಬಗ್ಗೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ವಿವಿಧ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿದೆ.

ಕನ್ನಡದಲ್ಲಿ ಮೊದಲನೇ ಸೀಸನ್​ನಿಂದ 11ನೇ ಸೀಸನ್ ತನಕ ಕಿಚ್ಚ ಸುದೀಪ್ ಅವರೇ ಸತತವಾಗಿ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಆದರೆ 11ನೇ ಸೀಸನ್​ ತಮ್ಮ ಕೊನೆಯೇ ಸೀಸನ್​ ಎಂದು ಸುದೀಪ್ ಅವರು ಘೋಷಣೆ ಮಾಡಿದ ಬಳಿಕ ಅಭಿಮಾನಿಗಳಿಗೆ ನಿರಾಸೆ ಆಗಿತ್ತು. ಯಾಕೆಂದರೆ ಸುದೀಪ್ ಇಲ್ಲದೇ ಬಿಗ್ ಬಾಸ್ ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳಲು ಫ್ಯಾನ್ಸ್ ಸಿದ್ಧರಿಲ್ಲ.

ವರ್ಷದಿಂದ ವರ್ಷಕ್ಕೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅದ್ದೂರಿತನ ಹೆಚ್ಚುತ್ತಿದೆ. ಕೆಲವು ವಿವಾದಗಳು ಇದ್ದರೂ ಕೂಡ ಕಾರ್ಯಕ್ರಮದ ಜನಪ್ರಿಯತೆ ಕೂಡ ಜಾಸ್ತಿ ಆಗುತ್ತಿದೆ. ಪ್ರತಿ ಸೀಸನ್​ನಲ್ಲಿ ಉತ್ತಮ ಟಿಆರ್​ಪಿ ಬರುತ್ತಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಅತ್ಯಂತ ಯಶಸ್ವಿ ಆಯಿತು. ಈಗ ‘ಬಿಗ್ ಬಾಸ್ ಕನ್ನಡ 12’ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಕಾದಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಈ ಬಾರಿಯ ಬಿಗ್ ಬಾಸ್​ಗೆ ಪಡೆಯೋ ಸಂಭಾವನೆ ಇಷ್ಟೊಂದಾ?

ಪ್ರತಿಬಾರಿಯೂ ಬಿಗ್ ಬಾಸ್ ಶೋ ಆರಂಭಕ್ಕೂ ಮುನ್ನ ಒಂದಷ್ಟು ಗಾಸಿಪ್​ಗಳು ಹುಟ್ಟಿಕೊಳ್ಳುತ್ತವೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಅನೇಕ ಅಂತೆ-ಕಂತೆಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವುಗಳಿಗೆಲ್ಲ ಈ ಸುದ್ದಿಗೋಷ್ಠಿಯಲ್ಲಿ ‘ಕಲರ್ಸ್ ಕನ್ನಡ’ ವಾಹಿನಿಯವರು ಸ್ಪಷ್ಟನೆ ನೀಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:02 pm, Mon, 30 June 25

Follow Us
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
SSLC Results 2026: 1 ಅಂಕದಿಂದ ಫಸ್ಟ್ ರ‍್ಯಾಂಕ್ ಮಿಸ್!
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ಡೆನ್​ಮಾರ್ಕ್ನಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿ, 12 ಮಂದಿಗೆ ಗಾಯ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ತೃತೀಯ ಭಾಷೆ ಹಿಂದಿಯಲ್ಲಿ ಅನುತ್ತೀರ್ಣರಾದವರ ಸಂಖ್ಯೆ ಬಾರಿ ಇಳಿಕೆ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ
ವಿದ್ಯಾರ್ಥಿಗಳೇ ಗಮನಿಸಿ: SSLC ಫೇಲ್​​ ಆದವರಿಗೆ 3ನೇ ಬಾರಿ ಪರೀಕ್ಷೆ ಇರಲ್ಲ