ಬಾರ್​​ನಲ್ಲಿ ಕನ್ನಡ ಕಿರುತೆರೆ ನಟನ ಕಿರಿಕ್; ದಾಖಲಾಯ್ತು ಎಫ್​ಐಆರ್​

ಕನ್ನಡ ಕಿರುತೆರೆ ನಟ ಪ್ರಜ್ವಲ್ ಮೇಲೆ ಎಫ್​ಐಆರ್ ದಾಖಲಾಗಿದೆ. ಬಾರ್​ನಲ್ಲಿ ಉಂಟಾದ ಕಿರಿಕ್​ನಿಂದ ಅವರು ಹೆಸರು ಕೆಡಿಸಿಕೊಂಡಿದ್ದಾರೆ.

ಬಾರ್​​ನಲ್ಲಿ ಕನ್ನಡ ಕಿರುತೆರೆ ನಟನ ಕಿರಿಕ್; ದಾಖಲಾಯ್ತು ಎಫ್​ಐಆರ್​
ಪ್ರಜ್ವಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 21, 2023 | 8:18 AM

ಬಣ್ಣದ ಲೋಕದಲ್ಲಿ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕವಾಗಿ ಅವರು ಹೆಚ್ಚು ಕನೆಕ್ಟ್ ಆಗಿ ಇರುವುದರಿಂದ ಜನರು ಬೇಗ ಗುರುತಿಸುತ್ತಾರೆ. ಏನಾದರೂ ಕಿರಿಕ್ ಮಾಡಿಕೊಂಡರೆ ಬಹುಬೇಗ ಸುದ್ದಿ ಆಗುತ್ತಾರೆ. ಈಗ ಕನ್ನಡ ಕಿರುತೆರೆ ನಟ ಪ್ರಜ್ವಲ್ (Prajwal) ಮೇಲೆ ಎಫ್​ಐಆರ್ ದಾಖಲಾಗಿದೆ. ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಬಾರ್​ನಲ್ಲಿ ಉಂಟಾದ ಕಿರಿಕ್​ನಿಂದ ಅವರು ಹೆಸರು ಕೆಡಿಸಿಕೊಂಡಿದ್ದಾರೆ. ಸದ್ಯ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಪ್ರಜ್ವಲ್ ವಿರುದ್ಧ ಆರ್​ಆರ್​ ನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು ಆಗಿದೆ. ‘ಅಮೃತವರ್ಷಿಣಿ’ ಹಾಗೂ ‘ಅಣ್ಣ ತಂಗಿ’ ಧಾರಾವಾಹಿ ಮೂಲಕ ಪ್ರಜ್ವಲ್ ಖ್ಯಾತಿ ಪಡೆದಿದ್ದಾರೆ. ಮೂರು ದಿನದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚೇತನ್ ಎಂಬುವರ ಜೊತೆ ಪ್ರಜ್ವಲ್​ ಬಾರ್​​ನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.

ಆರ್​ಆರ್ ನಗರದ ‘ಅಮೃತ ಬಾರ್ ಆ್ಯಂಡ್ ರೆಸ್ಟೋರೆಂಟ್’ನಲ್ಲಿ ಈ ಗಲಾಟೆ ನಡೆದಿದೆ. ಪ್ರಜ್ವಲ್ ತಮ್ಮ ಸ್ನೇಹಿತರ ಜೊತೆ ಅಮೃತ ಬಾರ್​ಗೆ ಹೋಗಿದ್ದರು. ಇದೇ ಬಾರ್​ಗೆ ಚೇತನ್ ಕೂಡ ತನ್ನ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಪ್ರಜ್ವಲ್​ನ ಸ್ನೇಹಿತ ಮನು ಎಂಬುವವರನ್ನು ಚೇತನ್ ಕರೆದಿದ್ದಾರೆ. ಇದರಿಂದ ಅಲ್ಲಿಯೇ ಇದ್ದ ಪ್ರಜ್ವಲ್ ಅವರು ಚೇತನ್ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಒಟಿಟಿಗೆ ಬರುತ್ತಿದೆ ‘ಮತ್ತೆ ಮದುವೆ’ ಸಿನಿಮಾ; ಜೂನ್​ 23ರಿಂದ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ಪ್ರಸಾರ

ಮರದ ಪೀಸ್​​​ನಿಂದ ಚೇತನ್ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದ ಆರೋಪವನ್ನು ಚೇತನ್ ಮಾಡಿದ್ದಾರೆ. ಬಾರ್​ನಲ್ಲಿ ಅಷ್ಟೇ ಅಲ್ಲದೆ ರಸ್ತೆಯಲ್ಲಿ ಈ ಗುಂಪು ಮತ್ತೆ ಗಲಾಟೆ ಮಾಡಿಕೊಂಡಿದೆ. ಅಮೃತ ಬಾರ್​​ನಲ್ಲಿ ಗಲಾಟೆ ಆದ ಬಳಿಕ ಚೇತನ್ ಸ್ನೇಹಿತರ ಮೇಲೆ ಪ್ರಜ್ವಲ್ ಮತ್ತೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ ದೂರು ದಾಖಲಾಗಿದೆ. ಸದ್ಯ ಚೇತನ್ ಕೊಟ್ಟು ದೂರಿನನ್ವಯ ಎಫ್​ಐಆರ್​ ದಾಖಲು ಮಾಡಿಕೊಂಡು ಪೊಲೀಸರು‌‌ ನೊಟೀಸ್ ನೀಡಿದ್ದಾರೆ. ಇದರ ಜೊತೆಗೆ ಬಾರ್​​ನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಹ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ