ಗಾನವಿಗೆ ಹೊಡೆಯುವ ಹಂತಕ್ಕೆ ಹೋದ ಗಗನ್; ಅವಾಚ್ಯ ಶಬ್ದಗಳ ಸುರಿಮಳೆ
ಬಿಗ್ ಬಾಸ್ ಮನೆಯಲ್ಲಿ ಗಗನ್ ಹಾಗೂ ಗಾನವಿ ನಡುವಿನ ಜಗಳ ತಾರಕಕ್ಕೇರಿದೆ. ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿರುವುದು ಮಾತ್ರವಲ್ಲದೆ, ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದೆ. ಗಾನವಿ ಉದ್ದೇಶಪೂರ್ವಕವಾಗಿ ಟ್ರಿಗರ್ ಮಾಡಿದ್ದಾಳೆ ಎಂದು ಆರೋಪಿಸಲಾಗುತ್ತಿದ್ದು, ಈ ವಿವಾದದ ಬಗ್ಗೆ ಈಗ ಭಾರಿ ಚರ್ಚೆಗಳು ನಡೆಯುತ್ತಿವೆ.

ಮುಖ್ಯಾಂಶಗಳು
- 'ಕುನ್ನಿ' ಪದದ ಬಳಕೆಯಿಂದ ಸ್ಫೋಟಗೊಂಡ ಕಿಚ್ಚು
- ಪ್ಯಾಂಟ್ ಹೇಳಿಕೆ ವಿವಾದ
- ಮುಗಿಬಿದ್ದ ಗಾನವಿ-ಗಗನ್
ಬಿಗ್ ಬಾಸ್ ಮನೆಯಲ್ಲಿ ಮಾಡರ್ನ್ ಮಹಾಕವಿ ಮಂಜು ಅವರಿಂದ ಅವಾಚ್ಯ ಶಬ್ದಗಳು ಬಂದವು. ಇದು ಇಡೀ ಮನೆಯ ವಾತಾವರಣವನ್ನೇ ಕೆಡಿಸಿತ್ತು. ಈ ವಿವಾದ ತಣ್ಣಗಾಗುವ ಮೊದಲೇ ಮತ್ತೆ ಅವಾಚ್ಯ ಶಬ್ದಗಳು ಮೊಳಗಿವೆ. ಈ ಬಾರಿ ಮಂಜು ಕಡೆಯಿಂದ ಅಲ್ಲ, ಗಗನ್ ಹಾಗೂ ಗಾನವಿ ಕಡೆಯಿಂದ. ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರ ಜಗಳ ತಾರಕಕ್ಕೇರಿ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದೆ.
ಬಿಗ್ ಬಾಸ್ ಮನೆಯಲ್ಲಿ ಗಾನವಿ ಹಾಗೂ ಗಗನ್ ಮಧ್ಯೆ ಮೊದಲಿನಿಂದಲೂ ಕಿರಿಕ್ ಇದೆ. ಈ ವಾರ ಗಂಧರ್ವರು ಹಾಗೂ ರಾಕ್ಷಸರು ಟಾಸ್ಕ್ ವೇಳೆ ಗಗನ್ ಅವರಿಗೆ ಕುನ್ನಿ ಎಂಬ ಪದ ಬಳಕೆ ಮಾಡಿದ್ದರು ಗಾನವಿ. ಇದರಿಂದ ಗಗನ್ ಟ್ರಿಗರ್ ಆದರು. ಕುನ್ನಿ ಪದ ಬಳಕೆ ಮಾಡಿದರೆ ಗಗನ್ ಟ್ರಿಗರ್ ಆಗುತ್ತಾರೆ ಎಂಬ ಸ್ಪಷ್ಟ ಚಿತ್ರಣ ಗಾನವಿಗೆ ಸಿಕ್ಕಿತು. ಇದಾದ ಬಳಿಕ ಅವರು ಇದೇ ವಿಷಯದಲ್ಲಿ ಗಗನ್ ಅವರನ್ನು ಅನೇಕ ಬಾರಿ ಟ್ರಿಗರ್ ಮಾಡಿದರು.
ಕಳಪೆ ಕೊಡುವ ಸಂದರ್ಭದಲ್ಲಿ ‘ನೀನು, ನಾನು ಹಾಕುವ ಪ್ಯಾಂಟ್ ಬೆಲೆ ಬಾಳಲ್ಲ’ ಎಂಬರ್ಥ ಬರುವಂತೆ ಗಗನ್ ಅವರು ಗಾನವಿಗೆ ಹೇಳಿದ್ದರಂತೆ. ಈ ಹೇಳಿಕೆಗೆ ನಾನಾ ಅರ್ಥವನ್ನು ಕಲ್ಪಿಸಲಾಯಿತು. ‘ಇದು ತುಂಬಾನೇ ಕೆಟ್ಟದಾಗಿ ಕೇಳುತ್ತಿದೆ’ ಎಂದು ಗಾನವಿ ಅವರು ಗಗನ್ ವಿರುದ್ಧ ಸಿಡಿದೆದ್ದರು. ಇಬ್ಬರೂ ವಾಗ್ವಾದ ಮಾಡಿಕೊಂಡರು. ಕೆರಳಿದ ಗಾನವಿ ಅವರು ಗಗನ್ ಕುಟುಂಬ ವಿಷಯವನ್ನು ಎಳೆದು ತಂದರು.
ಇದನ್ನೂ ಓದಿ: ಬಿಗ್ ಬಾಸ್ ತೊರೆಯುವ ನಿರ್ಧಾರ ಮಾಡಿದ ಗಗನ್; ಕಾರಣವೇನು?
ಇದು ಬೇರೆಯದೇ ಹಂತಕ್ಕೆ ಹೋಯಿತು. ಗಗನ್ ಹಾಗೂ ಗಾನವಿ ಅವಾಚ್ಯ ಶಬ್ದಗಳಿಂದ ಬೈದುಕೊಂಡರು. ಇದರಿಂದ ಯಥೇಚ್ಛವಾಗಿ ಮ್ಯೂಟ್ ಮಾಡಬೇಕಾದ ಪರಿಸ್ಥಿತಿ ಬಂತು. ಇಬ್ಬರೂ ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋದರು. ಈ ವಿಷಯ ಈಗ ಚರ್ಚೆಗೆ ಕಾರಣ ಆಗಿದೆ. ಗಗನ್ ಅವರು ‘ನಮ್ಮ ಕುಟುಂಬದವರು ಹಾಗೆ ಹೀಗೆ’ ಎಂದು ಹೇಳುತ್ತಾ ಇರುತ್ತಾರೆ. ಈ ರೀತಿ ಹೇಳುವ ಅವರು ಅವಾಚ್ಯ ಶಬ್ದ ಬಳಕೆ ಮಾಡಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ. ಇನ್ನು, ಗಾನವಿ ಕೂಡ ಉದ್ದೇಶಪೂರ್ವಕವಾಗಿ ಗಗನ್ ಅವರನ್ನು ಟ್ರಿಗರ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




