AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್ ಕನ್ನಡ 13: ಈ ಬಾರಿ ಮನೆಯೊಳಗೆ ಹೋಗಲಿರುವ ಸೆಲೆಬ್ರಿಟಿಗಳು ಇವರೇ?

ಬಿಗ್​​ಬಾಸ್ ಕನ್ನಡ ಸೀಸನ್ 13 ಶುರುವಾಗಲು ಕೆಲ ಗಂಟೆಗಳಷ್ಟೆ ಬಾಕಿ ಇದೆ. ಭಾನುವಾರ ಸಂಜೆ 6 ಗಂಟೆಗೆ ಶೋ ಅಧಿಕೃತವಾಗಿ ಶುರು ಆಗಲಿದೆ. ಈ ಬಾರಿ ಬಿಗ್​​ಬಾಸ್ ಮನೆಗೆ ಯಾರ್ಯಾರು ಹೋಗಲಿದ್ದಾರೆ ಎಂಬುದು ಈಗಾಗಲೇ ನಿಗದಿ ಆಗಿದೆ. ಆಯೋಜಕರು ಪ್ರತಿ ಬಾರಿ ಸ್ಪರ್ಧಿಗಳ ಹೆಸರನ್ನು ಗೌಪ್ಯವಾಗಿಟ್ಟಿರುತ್ತಾರೆ. ಈ ಬಾರಿಯೂ ಸಹ ಆ ಗೌಪ್ಯತೆ ಕಾಪಾಡಿದ್ದಾರೆ. ಆದರೆ ಕಲರ್ಸ್ ವಾಹಿನಿ ನಿನ್ನೆ (ಸೆಪ್ಟೆಂಬರ್ 04) ಬಿಡುಗಡೆ ಮಾಡಿರುವ ಪ್ರೋಮೊನಲ್ಲಿ ಕೆಲ ಸ್ಪರ್ಧಿಗಳ ಝಲಕ್ ಅನ್ನು ನೀಡಿದ್ದು, ಆ ಝಲಕ್ ಮೂಲಕವೇ ಈ ಬಾರಿ ಯಾವ ಯಾವ ಸೆಲೆಬ್ರಿಟಿಗಳು ಬಿಗ್​​ಬಾಸ್ ಮನೆಗೆ ಹೋಗಲಿದ್ದಾರೆ ಬಹಿರಂಗವಾಗಿದೆ.

ಮಂಜುನಾಥ ಸಿ.
|

Updated on: Sep 05, 2026 | 6:15 PM

Share
‘ಬೆಂಗಳೂರು ಬಾಯ್ಸ್’ ಸಿನಿಮಾನಲ್ಲಿ ನಟಿಸಿರುವ ನಟಿ ಸೋನಿ ಮುಲೆವಾ ಬಿಗ್​​ಬಾಸ್​​ಗೆ ಎಂಟ್ರಿ ಕೊಡುತ್ತಿದ್ದಾರೆ. ನಟಿ ಆಗಿರುವ ಜೊತೆಗೆ ಇನ್​​ಸ್ಟಾಗ್ರಾಂ ಮಾಡೆಲ್ ಸಹ ಆಗಿದ್ದಾರೆ ಸೋನಿ ಮುಲೆವಾ

1 / 10
ಅಂಕಿತಾ ಅಮರ್ ಅವರ ಸಹೋದರಿ ಅನನ್ಯಾ ಅಮರ್ ಈ ಬಾರಿ ಬಿಗ್​​ಬಾಸ್ ಮನೆಗೆ ಬರುತ್ತಿದ್ದಾರೆ. ಅನನ್ಯಾ ಅವರಿಗೆ ಒಳ್ಳೆಯ ಹಾಡುಗಾರ್ತಿ, ನೃತ್ಯ ಪ್ರವೀಣೆಯೂ ಹೌದು.

2 / 10
ನಟಿ ಸೌಂದರ್ಯಾ ಶೆಟ್ಟಿ ಈ ಬಾರಿ ಬಿಗ್​​ಬಾಸ್​​ ಮನೆಗೆ ಹೋಗುವುದು ಖಾತ್ರಿ ಎನ್ನಲಾಗುತ್ತಿದೆ. ಮಂಗಳೂರು ಮೂಲದ ಈ ಚೆಲುವೆ ಕೆಲ ಹಿಂದಿ ರಿಯಾಲಿಟಿ ಶೋನಲ್ಲೂ ಪಾಲ್ಗೊಂಡಿದ್ದರು. ವಿಶೇಷವಾಗಿ ಜನಪ್ರಿಯ ಸ್ಪ್ಲಿಟ್ ವಿಲ್ಲಾನಲ್ಲಿ ಭಾಗಿ ಆಗಿದ್ದರು.

3 / 10
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ನಟಿ ಆಸಿಯಾ ಫಿರ್ದೋಸ್ ಈ ಬಾರಿ ಬಿಗ್​​ಬಾಸ್​​ಗೆ ಹೋಗುತ್ತಿದ್ದಾರೆ. ಆಸಿಯಾ ಅವರು ‘ಕನ್ಯಾಕುಮಾರಿ’ ಧಾರಾವಾಹಿಯಲ್ಲೂ ಸಹ ನಟಿಸಿದ್ದರು. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆಸಿಯಾ ಈ ಬಾರಿ ಬಿಗ್​​ಬಾಸ್​​ಗೆ ಕಾಲಿಡುತ್ತಿದ್ದಾರೆ.

4 / 10
ಕನ್ನಡ ಚಿತ್ರರಂಗದ ಖ್ಯಾತ ನಟಿ ಸಂಗೀತಾ ಭಟ್ ಸಹ ಈ ಬಾರಿ ಬಿಗ್​​ಬಾಸ್​​ಗೆ ಬರುತ್ತಿದ್ದಾರೆ. ಸುಮಾರು 15 ವರ್ಷಗಳಿಂದಲೂ ಅವರು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಎರಡನೇ ಸಲ’, ‘ದಯವಿಟ್ಟು ಗಮನಿಸಿ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

5 / 10
ಈ ಹಿಂದೆ ‘ಕ್ವಾಟ್ಲೆ ಕಿಚನ್’ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗಿ ಆಗಿದ್ದ ಆಸಿಯಾ ಬೇಗಂ ಅವರು ಈ ಬಾರಿ ಬಿಗ್​​ಬಾಸ್​​ಗೆ ಬರುತ್ತಿದ್ದಾರೆ.

6 / 10
ದೈತ್ಯ ದೇಹಿ ಡ್ರ್ಯಾಗನ್ ಮಂಜು ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗಲಿದ್ದಾರೆ. ದುನಿಯಾ ವಿಜಿ ನಟನೆಯ ‘ಭೀಮ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ಡ್ರ್ಯಾಗನ್ ಮಂಜು, ತಮ್ಮ ದೈತ್ಯ ಮತ್ತು ಫಿಟ್ ದೇಹದಿಂದ ಜನಪ್ರಿಯರು.

7 / 10
‘ಲವ್ ಮಾಕ್ಟೆಲ್ 2’ ಸಿನಿಮಾದ ಹಾಸ್ಯಪಾತ್ರದಲ್ಲಿ ನಟಿಸಿದ್ದ ಜಗ್ಗ ಮಮ್ಮಿ ಅವರು ಈ ಬಾರಿ ಬಿಗ್​​ಬಾಸ್​​ಗೆ ಹೋಗುತ್ತಿದ್ದಾರೆ. ಬಹಳ ಒಳ್ಳೆಯ ಹಾಸ್ಯಕಲಾವಿದರು ಅವರಾಗಿದ್ದು, ಬಿಗ್​​ಬಾಸ್​ ಮನೆಯಲ್ಲಿ ಹಾಸ್ಯದ ಹೊನಲು ಹರಿಸುತ್ತಾರೆಯೇ ಕಾದು ನೋಡಬೇಕಿದೆ.

8 / 10
‘ಕಾಮಿಡಿ ಕಿಲಾಡಿಗಳು’ ಮೂಲಕ ಸಾಕಷ್ಟು ಹೆಸರು, ಅಭಿಮಾನಿಳನ್ನು ಗಳಿಸಿರುವ ಸೂರಜ್ ಅವರು ಈ ಬಾರಿ ಬಿಗ್​​ಬಾಸ್ ಮನೆಗೆ ಹೋಗುತ್ತಿದ್ದಾರೆ. ಅವರಿಂದಲೂ ಸಹ ಸಾಕಷ್ಟು ನಿರೀಕ್ಷೆಗಳು ಇವೆ.

9 / 10
ತಾಂಡವ್ ರಾಮ್, ಕಿರುತೆರೆಯ ಜನಪ್ರಿಯ ನಟ. ‘ಜೋಡಿ ಹಕ್ಕಿ’ ಸೇರಿದಂತೆ ಇನ್ನೂ ಕೆಲವು ಧಾರಾವಾಹಿ ಹಾಗೂ ‘ಕ್ವಾಟ್ಲೆ ಕಿಚನ್’ ಸೇರಿದಂತೆ ಇನ್ನೂ ಕೆಲ ಶೋಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ತಾಂಡವ್ ಅವರು, ನಿರ್ದೇಶಕನ ಮೇಲೆ ಶೂಟೌಟ್ ಮಾಡಿಯೂ ಸುದ್ದಿಯಾಗಿದ್ದರು.

10 / 10
Follow Us