Honganasu Kannada Serial: ಕೋಪ ಮರೆತು ಸಹಾಯ ಮಾಡಿದ ರಿಷಿ; ವಸು ಫುಲ್ ಖುಷ್

Honganasu Serial Update: ವಸು ಮತ್ತು ರಿಷಿಯನ್ನು ಒಂದು ಮಾಡಬೇಕೆಂದು ಮಹೇಂದ್ರ ಹಾಗೂ ಜಗತಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಅದಕ್ಕೆ ದೇವಯಾನಿ ಅಡ್ಡಗಾಲು ಹಾಕುತ್ತಿದ್ದಾಳೆ.

Honganasu Kannada Serial: ಕೋಪ ಮರೆತು ಸಹಾಯ ಮಾಡಿದ ರಿಷಿ; ವಸು ಫುಲ್ ಖುಷ್
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on:Dec 25, 2022 | 5:28 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಎಜುಕೇಶನ್ ಪ್ರಾಜೆಕ್ಟ್ ವಿಚಾರವಾಗಿ ವಸುಧರಾ ಮತ್ತು ಗೌತಮ್ ಇಬ್ಬರೂ ಹಳ್ಳಿಗೆ ಹೋದರು. ವಸುಧರಾಳನ್ನು ನೋಡಲು ರಿಷಿ ಕೂಡ ಎಂಟ್ರಿ ಕೊಟ್ಟ. ವಸುಧರಾಳ ನೋಡಿ ತಕ್ಷಣ ವಾಪಸ್ ಹೊರಟ ರಿಷಿ. ಕೆಲಸವೆಲ್ಲ ಮುಗಿದ ಬಳಿಕ ಗೌತಮ್‌ಗೆ ಕಾಲ್ ಮಾಡಿ ರಿಷಿ ವಿಚಾರಿಸಿಕೊಂಡ. ಪರೋಕ್ಷವಾಗಿ ವಸುಧರಾ ಬಗ್ಗೆ ಕೇಳಿದ. ಅವಳು ಸೈಕಲ್‌ನಲ್ಲಿ ಹೋದಳು ಎಂದು ಗೌತಮ್ ಮಾಹಿತಿ ನೀಡಿದ.

ಕಾಲೇಜಿನ ಕೆಲಸಕ್ಕೆ ಸೈಕಲ್‌ನಲ್ಲಿ ಓಡಾಡುತ್ತಿದ್ದಾಳೆ ವಸುಧರಾ. ಮನೆಗೆ ಹೋಗುವಾಗ ಸೈಕಲ್ ಹಾಳಾಗಿ ರಿಪೇರಿ ಮಾಡುತ್ತಾ ರಸ್ತೆಯಲ್ಲೇ ಕುಳಿತಳು. ಕಾರಿನಲ್ಲಿ ಹೋಗುತ್ತಿದ್ದ ರಿಷಿ ವಸುಧರಾಳನ್ನು ನೋಡಿದ. ಕಾರಿನಿಂದ ಇಳಿದು ಬಂದು ಸೈಕಲ್ ಸರಿಮಾಡಿ ಕೊಡುವುದಾಗಿ ಆತ ಕೇಳಿದ. ಇದು ನಿಮ್ಮಿಂದ ಆಗಲ್ಲ ಎಂದು ವಸು ಹೇಳಿದಳು. ಮತ್ತೇನು ಮಾಡುತ್ತೀಯಾ ಎಂದು ಕೇಳಿದ ರಿಷಿ. ಕಾರ್‌ನಲ್ಲಿ ಡ್ರಾಪ್ ಮಾಡುವಂತೆ ರಿಷಿಗೆ ಪರೋಕ್ಷವಾಗಿ ಹೇಳಿದಳು ವಸು. ಅರ್ಥವಾಯ್ತು ಎಂದು ವಸುಧರಾ ಮೇಲಿನ ಕೋಪ ಮರೆತು ಕಾರಿನಲ್ಲಿ ಕೂರಿಸಿಕೊಂಡ. ಇಬ್ಬರೂ ರಸ್ತೆ ಪಕ್ಕದಲ್ಲಿ ಇರುವ ಅಂಗಡಿಯಲ್ಲಿ ಟೀ ಕುಡಿದರು. ಕೊನೆಗೂ ರಿಷಿ ಸರ್ ಮಾತನಾಡಿಸಿದರು ಎಂದು ವಸು ಸಂತಸ ಪಟ್ಟಳು. ರಾತ್ರಿ ಮನೆಗೆ ಹೋದ ಆಕೆಗೆ ರಿಷಿದೇ ಚಿಂತೆ. ಪ್ರೀತಿ ರಿಜೆಕ್ಟ್ ಮಾಡಿ ನೋವು ಕೊಟ್ಟೆ, ಅದನ್ನು ತಾನೆ ಸರಿ ಮಾಡಬೇಕೆಂದು ಯೋಚಿಸಿದಳು. ಸಹಾಯ ಮಾಡಿದ್ದಕ್ಕೆ ರಿಷಿಗೆ ಧನ್ಯವಾದ ತಿಳಿಸಿದಳು.

ಇದನ್ನೂ ಓದಿ: Honganasu: ತನ್ನನ್ನು ರಿಜೆಕ್ಟ್ ಮಾಡಿದ್ರೂ ವಸುಧರಾ ಮೇಲೆ ರಿಷಿಗೆ ಬೆಟ್ಟದಷ್ಟು ಪ್ರೀತಿ

ಇತ್ತ ಬೇಕು ಅಂತನೆ ಜಗತಿಗೆ ಚುಚ್ಚು ಮಾತುಗಳನ್ನು ಆಡಿ ಜಗಳವಾಡುತ್ತಿದ್ದಾಳೆ ದೇವಯಾನಿ. ರಿಷಿಗೆ ಊಟ ಬಡಿಸಲು ಕಾಯುತ್ತಿದ್ದಳು ಜಗತಿ. ಆದರೆ ತಾನೇ ಬಡಿಸುತ್ತೇನೆ ಎಂದು ದೇವಯಾನಿ ಬಂದಳು. ಊಟ ಬಡಿಸಿ ಚೆನ್ನಾಗಿ ತಿನ್ನು ಕಂದ ಎಂದು ರಿಷಿಗೆ ಹೇಳಿದಳು ದೇವಯಾನಿ. ಜಗತಿ ಮಾಡಿದ ಅಡುಗೆಯನ್ನೂ ತಾನೆ ಮಾಡಿದ್ದು ಎಂದು ರಿಷಿ ಮುಂದೆ ದೇವಯಾನಿ ಹೇಳಿಕೊಂಡಳು. ಆಕೆಯ ಸುಳ್ಳುಗಳನ್ನು ಕೇಳಿ ಶಾಕ್ ಆದ ಮಹೇಂದ್ರ. ರಿಷಿ ಕೂಲ್ ಆಗಿ ಇದ್ದಾನೆ ಎಂದು ಮತ್ತೆ ಸಾಕ್ಷಿ ವಿಚಾರ ಎತ್ತಿದಳು ದೇವಯಾನಿ. ಸಾಕ್ಷಿ ಬಗ್ಗೆ ಮಾತನಾಡುತ್ತಿದ್ದಂತೆ ಅರ್ಧಕ್ಕೆ ಊಟ ನಿಲ್ಲಿಸಿ ಹೊರಟು ಹೋದ ರಿಷಿ. ತನ್ನ ಮಗನಿಗೆ ನೆಮ್ಮದಿಯಾಗಿ ಊಟ ಮಾಡಲು ಬಿಟ್ಟಿಲ್ಲಾ ಎಂದು ದೇವಯಾನಿ ಮೇಲೆ ರೇಗಿದಳು ಜಗತಿ. ಮಗ ಊಟ ಮಾಡಿಲ್ಲ ಎಂದು ಮಹೇಂದ್ರ ಕೂಡ ಹಾಗೆ ಎದ್ದು ಹೋದ.

ಇದನ್ನೂ ಓದಿ: ಹೊಂಗನಸು: ಗೌತಮ್‌ಗೆ ಚಳ್ಳೆ ಹಣ್ಣು ತಿನ್ನಿಸಿ ವಸು ಜೊತೆ ರಿಷಿಯ ರೊಮ್ಯಾಂಟಿಕ್ ಬೈಕ್ ರೈಡ್

ಬೆಳಗ್ಗೆ ಕಾಲೇಜಿಗೆ ಬಂದ ರಿಷಿಯನ್ನು ಆಡಿಕೊಂಡ ಮಹೇಂದ್ರ. ನಿಮ್ಮ ಸ್ಟೂಡೆಂಟ್‌ಗೆ ಸೈಕಲ್‌ನಲ್ಲಿ ಓಡಾಡುವುದು ಬೇಡ ಅಂತ ಹೇಳಿ ಎಂದು ವಸುಧರಾ ಬಗ್ಗೆ ಪರೋಕ್ಷವಾಗಿ ಜಗತಿಗೆ ಹೇಳಿದ ರಿಷಿ. ವಸು ಮತ್ತು ರಿಷಿಯನ್ನು ಒಂದು ಮಾಡಬೇಕೆಂದು ಮಹೇಂದ್ರ ಮತ್ತು ಜಗತಿ ಇಬ್ಬರೂ ಪ್ರಯತ್ನ ಪಡುತ್ತಿದ್ದಾರೆ. ರಿಷಿಗೆ ಪ್ರಾಜೆಕ್ಟ್ ಕೊಡುವಂತೆ ವಸುಧರಾಗೆ ಹೇಳಿದಳು ಜಗತಿ. ವಸುಧರಾ ಭಯದಲ್ಲೇ ರಿಷಿ ಚೇಂಬರ್‌ಗೆ ಎಂಟ್ರಿ ಕೊಟ್ಟಳು. ಪ್ರಾಜೆಕ್ಟ್ ವಿಚಾರವಾಗಿ ಬಂದಿದ್ದು ಎಂದಳು ವಸು. ಇದ್ಯಾವುದು ಅವಶ್ಯಕತೆ ಇಲ್ಲ ಎಂದು ವಸುಧರಾಳನ್ನು ವಾಪಸ್ ಕಳುಹಿಸಿದ ರಿಷಿ. ಬೇಸರದಲ್ಲೇ ಹೊರಟಳು ವಸುಧರಾ. ರಿಷಿ ಸಂಪೂರ್ಣ ಕೋಪ ಮರೆತು ವಸು ಜೊತೆ ಮೊದಲಿನ ಹಾಗೆ ಇರುತ್ತಾನಾ? ವಸು ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:28 pm, Sun, 25 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ