AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಗದ್ಧಾತ್ರಿ’ ಪ್ರೋಮೋ: ಆ್ಯಕ್ಷನ್ ಅವತಾರದಲ್ಲಿ ಎಂಟ್ರಿ ಕೊಟ್ಟ ಮೋಕ್ಷಿತಾ ಪೈ-ವಿಜಯ್ ಸೂರ್ಯ 

ಜೀ ಕನ್ನಡ ವಾಹಿನಿಯು 'ಜಗದ್ಧಾತ್ರಿ' ಎಂಬ ಹೊಸ ಭಾವುಕ ಹಾಗೂ ಆ್ಯಕ್ಷನ್ ಪ್ರಧಾನ ಧಾರಾವಾಹಿಯನ್ನು ತರುತ್ತಿದೆ. ಮೋಕ್ಷಿತಾ ಪೈ ಮತ್ತು ವಿಜಯ್ ಸೂರ್ಯ ನಟಿಸುತ್ತಿರುವ ಈ ಸೀರಿಯಲ್, ಮನೆಯಲ್ಲಿ ಸಾತ್ವಿಕಳಾಗಿ, ಹೊರಗೆ ಅನ್ಯಾಯದ ವಿರುದ್ಧ ಹೋರಾಡುವ ಜಗದ್ಧಾತ್ರಿ ಕಥೆ ಹೇಳುತ್ತದೆ. ಹೈ-ವೋಲ್ಟೇಜ್ ಸಾಹಸಗಳು ಮತ್ತು ಕೌಟುಂಬಿಕ ಡ್ರಾಮಾ ಮಿಶ್ರಿತ ಈ ಧಾರಾವಾಹಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

‘ಜಗದ್ಧಾತ್ರಿ’ ಪ್ರೋಮೋ: ಆ್ಯಕ್ಷನ್ ಅವತಾರದಲ್ಲಿ ಎಂಟ್ರಿ ಕೊಟ್ಟ ಮೋಕ್ಷಿತಾ ಪೈ-ವಿಜಯ್ ಸೂರ್ಯ 
ಮೋಕ್ಷಿತಾ Image Credit source: Zee Kannada
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 27, 2026 | 7:59 AM

Share

ಮುಖ್ಯಾಂಶಗಳು

  • ಜಗದ್ಧಾತ್ರಿ: ಜೀ ಕನ್ನಡದ ಹೊಸ ಧಾರಾವಾಹಿಯ ಕಥಾಹಂದರ
  • ಮನೆ ಬೆಳಗೋ ದೀಪ, ಅಧರ್ಮ ಅಳಿಸೋ ಜ್ವಾಲೆ ಈ ಜಗದ್ಧಾತ್ರಿ
  • ಮೋಕ್ಷಿತಾ ಪೈ ಮತ್ತು ವಿಜಯ್ ಸೂರ್ಯ ಜೋಡಿ

ಕನ್ನಡ ಕಿರುತೆರೆಯಲ್ಲಿ ಸದಾ ವಿಭಿನ್ನ ಕಥೆಗಳ ಮೂಲಕ ಗಮನ ಸೆಳೆಯುವ ಜೀ ಕನ್ನಡ ವಾಹಿನಿ, ಈಗ ಮತ್ತೊಂದು ಭಾವುಕ ಹಾಗೂ ಆ್ಯಕ್ಷನ್ ಪ್ರಧಾನ ಸೀರಿಯಲ್ ಅನ್ನು ಹೊತ್ತು ತರುತ್ತಿದೆ. ಅದೇ ‘ಜಗದ್ಧಾತ್ರಿ’. ಮೋಕ್ಷಿತಾ ಪೈ (Mokshitha Pai) ಹಾಗೂ ವಿಜಯ್ ಸೂರ್ಯ ಇದರಲ್ಲಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಇತ್ತೀಚೆಗಷ್ಟೇ ರಿಲೀಸ್ ಆಗಿರುವ ಈ ಧಾರಾವಾಹಿಯ ಪ್ರೋಮೋ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ ಎಂದರೂ ತಪ್ಪಾಗಲಾರದು. ಈ ಧಾರಾವಾಹಿಯ ಪ್ರಸಾರ ದಿನಾಂಕಕ್ಕಾಗಿ ವೀಕ್ಷಕರು ಕಾದಿದ್ದಾರೆ.

‘ಮನೆ ಬೆಳಗೋ ದೀಪ.. ಅಧರ್ಮ ಅಳಿಸೋ ಜ್ವಾಲೆ!’

ಇದು ಈ ಧಾರಾವಾಹಿಯ ಮುಖ್ಯ ಥೀಮ್ ಆಗಿದೆ. ಪ್ರೋಮೋದ ಆರಂಭದಲ್ಲಿ ನಾಯಕಿ ಜಗದ್ಧಾತ್ರಿ ಮನೆಯಲ್ಲಿ ಎಲ್ಲರ ಮಾತು ಕೇಳಿಕೊಂಡು, ದೇವರಿಗೆ ಪೂಜೆ ಮಾಡುತ್ತಾ, ಅತ್ಯಂತ ಸಾತ್ವಿಕವಾಗಿ ಕಾಣಿಸಿಕೊಳ್ಳುತ್ತಾಳೆ. ಮನೆಯವರು ಆಕೆಯನ್ನು ದರಿದ್ರ ಎಂದು ಬೈದರೂ ಸುಮ್ಮನಿರುತ್ತಾಳೆ. ಆದರೆ, ಹೊರಗಿನ ಪ್ರಪಂಚದಲ್ಲಿ ಅಧರ್ಮ, ಅನ್ಯಾಯ ನಡೆದಾಗ ಅದೇ ಜಗದ್ಧಾತ್ರಿ ಮಹಾಕಾಳಿಯಂತೆ ರೌಡಿಗಳ ಹೆಡೆಮುರಿ ಕಟ್ಟಲು ಜ್ವಾಲೆಯಾಗಿ ಧುಮುಕುತ್ತಾಳೆ.

View this post on Instagram

A post shared by Zee Kannada (@zeekannada)

ಮೋಕ್ಷಿತಾ ಪೈ-ವಿಜಯ್ ಸೂರ್ಯ ಜುಗಲ್ಬಂದಿ

‘ಪಾರು’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ ಮೋಕ್ಷಿತಾ ಪೈ ಈ ಸೀರಿಯಲ್‌ನಲ್ಲಿ ಜಗದ್ಧಾತ್ರಿ ಆಗಿ ಕಥಾನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಸೀರೆಯಲ್ಲಿ ಎಷ್ಟು ಮುದ್ದಾಗಿ ಕಾಣುತ್ತಾರೋ, ಅಷ್ಟೇ ಭೀಕರವಾಗಿ ಬೈಕ್ ಸ್ಟಂಟ್ ಹಾಗೂ ಆ್ಯಕ್ಷನ್ ಸೀನ್‌ಗಳಲ್ಲಿ ಅಬ್ಬರಿಸಿದ್ದಾರೆ. ಇನ್ನು ಇವರಿಗೆ ಜೋಡಿಯಾಗಿ ಕಿರುತೆರೆಯ ‘ಡಿಂಪಲ್ ಕಿಂಗ್’ ವಿಜಯ್ ಸೂರ್ಯ ಹೀರೊ ಆಗಿ ಎಂಟ್ರಿ ಕೊಟ್ಟಿದ್ದಾರೆ. ಪ್ರೋಮೋದಲ್ಲಿ ವಿಜಯ್ ಸೂರ್ಯ ಕೂಡ ಸಖತ್ ಮಾಸ್ ಆಗಿ ಗನ್ ಹಿಡಿದು ಫೈಟ್ ಮಾಡುತ್ತಾ ಎಂಟ್ರಿ ನೀಡಿದ್ದು, ಇವರಿಬ್ಬರ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಜೀ ಕನ್ನಡದ ಹೊಸ ಧಾರಾವಾಹಿಗೆ ನಾಯಕಿಯಾದ ಮೋಕ್ಷಿತಾ ಪೈ

ಪ್ರೋಮೋದ ಹೈಲೈಟ್ಸ್:

ನಾಯಕಿ ಕಿವಿಗೆ ಹಿಯರಿಂಗ್ ಡಿವೈಸ್ ಹಾಕಿಕೊಂಡು, ರೌಡಿಗಳ ಕೈಯಿಂದ ಮಗುವನ್ನು ರಕ್ಷಿಸುವ ಸೀನ್ ಹೈಲೈಟ್ ಆಗಿದೆ. ಬೈಕ್ ಚೇಸಿಂಗ್, ಫೈಟಿಂಗ್ ಹಾಗೂ ಸ್ಕೈ-ಡೈವಿಂಗ್ ರೇಂಜ್‌ನ ಸಾಹಸಗಳು ಪ್ರೋಮೋದಲ್ಲಿವೆ. ನಾಯಕ ಮತ್ತು ನಾಯಕಿ ಇಬ್ಬರೂ ಯಾವುದೋ ಸೀಕ್ರೆಟ್ ಮಿಷನ್‌ನಲ್ಲಿ ಇರುವ ತನಿಖಾಧಿಕಾರಿಗಳಂತೆ ಕಾಣುತ್ತಿದ್ದಾರೆ.

ಒಟ್ಟಿನಲ್ಲಿ, ಕೌಟುಂಬಿಕ ಡ್ರಾಮಾ ಜೊತೆಗೆ ಹೈ-ವೋಲ್ಟೇಜ್ ಆ್ಯಕ್ಷನ್ ಕಥಾಹಂದರ ಹೊಂದಿರುವ ‘ಜಗದ್ಧಾತ್ರಿ’ ಸದ್ಯದಲ್ಲೇ ಜೀ ಕನ್ನಡದಲ್ಲಿ ಪ್ರಸಾರವಾಗಲಿದ್ದು, ಸ್ಯಾಂಡಲ್‌ವುಡ್ ಸಿನಿಮಾ ರೇಂಜ್‌ಗೆ ಹೈಪ್ ಕ್ರಿಯೇಟ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?