AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಮನೆ ಒಳಗೆ ಬಂದು ಯಾರಿಗೂ ಗೊತ್ತಾಗದ ರೀತಿ ಅಡುಗೆ ಮಾಡಿ ಹೋಗಿದ್ದ ಸುದೀಪ್

‘ಬಿಗ್ ಬಾಸ್ ಕನ್ನಡ ಸೀಸನ್ 6’ ಅನ್ನು ಸುದೀಪ್ ಅವರು ನಡೆಸಿಕೊಟ್ಟಿದ್ದರು. ಈ ಸೀಸನ್ ಗಮನ ಸೆಳೆದಿತ್ತು. ಅನುಪಮಾ ಗೌಡ, ನಿವೇದಿತಾ ಗೌಡ, ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್ ಮೊದಲಾದವರು ಈ ಸೀಸನ್​ನಲ್ಲಿ ಇದ್ದರು. ಈ ಸೀಸನ್​ನಲ್ಲಿ ಸರ್​ಪ್ರೈಸ್ ಕೊಟ್ಟಿದ್ದರು ಸುದೀಪ್.

ದೊಡ್ಮನೆ ಒಳಗೆ ಬಂದು ಯಾರಿಗೂ ಗೊತ್ತಾಗದ ರೀತಿ ಅಡುಗೆ ಮಾಡಿ ಹೋಗಿದ್ದ ಸುದೀಪ್
ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 03, 2024 | 7:31 AM

Share

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್’ನ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸುದೀಪ್ ಬಿಗ್ ಬಾಸ್ ನಡೆಸಿಕೊಡ್ತಾರೆ ಎಂದರೆ ಟಿಆರ್​ಪಿ ಬರೋದು ಪಕ್ಕಾ. ಈ ಮೊದಲು ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವಾಗ ದೊಡ್ಮನೆ ಒಳಗೆ ಬಂದು ಅಡುಗೆ ಮಾಡಿ ಹೋಗಿದ್ದರು. ಇದು ವೀಕ್ಷಕರಿಗೆ ಸರ್​ಪ್ರೈಸ್ ಆಗಿತ್ತು. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಬಿಗ್ ಬಾಸ್ ಕನ್ನಡ ಸೀಸನ್ 6’ ಅನ್ನು ಸುದೀಪ್ ಅವರು ನಡೆಸಿಕೊಟ್ಟಿದ್ದರು. ಈ ಸೀಸನ್ ಗಮನ ಸೆಳೆದಿತ್ತು. ಅನುಪಮಾ ಗೌಡ, ನಿವೇದಿತಾ ಗೌಡ, ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ದಿವಾಕರ್ ಮೊದಲಾದವರು ಈ ಸೀಸನ್​ನಲ್ಲಿ ಇದ್ದರು. ಈ ಸೀಸನ್​ನಲ್ಲಿ ಸರ್​ಪ್ರೈಸ್ ಕೊಟ್ಟಿದ್ದರು ಸುದೀಪ್.

ಅಡುಗೆ ಮನೆಗೆ ಬಂದು ಕೆಲವರು ಅಡುಗೆ ಮಾಡಿ ಹೋಗಿದ್ದರು. ಅಲ್ಲಿ ಮುಖ ರಿವೀಲ್ ಆಗಿರಲಿಲ್ಲ. ಎಲ್ಲರೂ ಮುಖಕ್ಕೆ ಏನನ್ನೂ ಹಾಕಿಕೊಂಡು ಬಂದು ಅಡುಗೆ ಮಾಡಿದ್ದರು. ಅಲ್ಲಿ ಅಡುಗೆ ಮಾಡಿದವರು ಯಾರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆ ಬಳಿಕ ಹೊರ ಬಂದು ಮುಖವನ್ನು ರಿವೀಲ್ ಮಾಡಲಾಯಿತು.

ಈ ವೇಳೆ ಒಬ್ಬೊಬ್ಬರಾಗಿಯೇ ಮುಖ ರಿವೀಲ್ ಮಾಡುತ್ತಾ ಹೋದರು. ಮೊದಲು ಚಂದನ್ ಕುಮಾರ್ ಅವರು ತಮ್ಮ ಮುಖ ತೋರಿಸಿದರು. ಹೀಗೆ, ಹಲವರು ಮುಖ ರಿವೀಲ್ ಮಾಡಿದರು. ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಮುಖವನ್ನು ತೋರಿಸಿದರು. ಆಗ ಎಲ್ಲರಿಗೂ ಶಾಕ್ ಆಯಿತು. ಅದು ಸುದೀಪ್ ಎನ್ನುವ ವಿಚಾರ ತಿಳಿದು ಅಚ್ಚರಿ ಆಯಿತು. ಆ ಸೀಸನ್​ನಲ್ಲಿ ಚಂದನ್ ಶೆಟ್ಟಿ ಅವರು ಗೆದ್ದಿದ್ದರು.

ಇದನ್ನೂ ಓದಿ: ಬಿಗ್​ಬಾಸ್​ನಿಂದ ಬಂದು ಕಿಚ್ಚ ಸುದೀಪ್​ ಉದ್ದೇಶಿಸಿ ಪೋಸ್ಟ್ ಹಾಕಿದ ಶೋಭಾ ಶೆಟ್ಟಿ

ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ ನಡೆಸಿಕೊಡುವಾಗ ಅನೇಕ ಬಾರಿ ಮನೆಯಿಂದ ಅಡುಗೆ ಮಾಡಿ ಕಳುಹಿಸಿದ್ದು ಇದೆ. ಈ ಬಾರಿಯೂ ಅದನ್ನು ಮುಂದುವರಿಸೋ ಸಾಧ್ಯತೆ ಇದೆ. ಈ ಬಾರಿಯೂ ಕಳೆದ ಸೀಸನ್ ರೀತಿಯೇ ಮನೆ ಒಳಗೆ ಬಂದು ಅಡುಗೆ ಮಾಡಿ ಹೋಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಇದು ನಿಜವಾಗಲಿ ಎಂಬುದು ಫ್ಯಾನ್ಸ್ ಕೋರಿಕೆ. ಇನ್ನುಮುಂದೆ ಸುದೀಪ್ ಬಿಗ್ ಬಾಸ್​ನಲ್ಲಿ ಇರುವುದಿಲ್ಲ ಎಂಬ ವಿಚಾರವೇ ಬೇಸರ ಮೂಡಿಸುವಂತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ