ಕರಾಳ ವೈರಸ್​ನಿಂದ ದೇಶದ ಜನರನ್ನು ರಕ್ಷಿಸಲು ಮತ್ತೆ ಬಂದ ‘ನಾಗಿನ್’!; ಥರಹೇವಾರಿ ಮೀಮ್ ಮೂಲಕ ಕಾಲೆಳೆದ ನೆಟ್ಟಿಗರು

ಕರಾಳ ವೈರಸ್​ನಿಂದ ದೇಶದ ಜನರನ್ನು ರಕ್ಷಿಸಲು ಮತ್ತೆ ಬಂದ ‘ನಾಗಿನ್’!; ಥರಹೇವಾರಿ ಮೀಮ್ ಮೂಲಕ ಕಾಲೆಳೆದ ನೆಟ್ಟಿಗರು
‘ನಾಗಿನ್ 6’ ಪ್ರೋಮೋದಿಂದ ಸೆರೆಹಿಡಿಯಲಾದ ಚಿತ್ರ

Naagin 6 Promo: ಹಿಂದಿಯ ಜನಪ್ರಿಯ ಧಾರವಾಹಿ ‘ನಾಗಿನ್’ 6ನೇ ಸೀಸನ್​ಗೆ ಸಜ್ಜಾಗಿದೆ. ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದ್ದು, ವೀಕ್ಷಕರ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದೇ ವೇಳೆ ಕಥಾ ವಸ್ತುವಿನ ಕಾರಣ, ಹಲವು ರೀತಿಯ ಮೀಮ್​ಗಳಿಗೆ ಪ್ರೋಮೋ ಕಾರಣವಾಗಿದೆ.

TV9kannada Web Team

| Edited By: shivaprasad.hs

Jan 22, 2022 | 3:34 PM

ಹಿಂದಿ ಕಿರುತೆರೆಯ ಸೂಪರ್ ಹಿಟ್ ಧಾರವಾಹಿ ‘ನಾಗಿನ್’ (Naagin 6) ಹೊಸ ಸೀಸನ್​ಗೆ ಸಜ್ಜಾಗಿದೆ. 5 ಸೀಸನ್​ನ ಯಶಸ್ಸಿನಲ್ಲಿ, 6ನೇ ಸೀಸನ್ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದ್ದು, ಈ ಬಾರಿ ಹೊಸ ಪರಿಕಲ್ಪನೆಯೊಂದಿಗೆ ಪ್ರೇಕ್ಷಕರೆದುರು ‘ನಾಗಿನ್’ ಕಾಣಿಸಿಕೊಳ್ಳಲಿದ್ದಾಳೆ. ಭಾರತವನ್ನು ಆತಂಕಕಾರಿ ವೈರಸ್​ನಿಂದ ರಕ್ಷಿಸುವ ಕಲ್ಪನೆಯಲ್ಲಿ ಕತೆಯನ್ನು ಹೆಣೆಯಲಾಗಿದ್ದು, ವಾಹಿನಿ ಪ್ರೋಮೋ ಬಿಡುಗಡೆ ಮಾಡಿದೆ. 2020ರಲ್ಲಿ ದೇಶವನ್ನು ಕಾಡುವ ಕರಾಳ ವೈರಸ್​, ಜನರನ್ನು ಆತಂಕಕ್ಕೆ ತಳ್ಳಿರುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು’ ಎಂಬ ಗಾದೆಯನ್ನು ಉದಾಹರಿಸಲಾಗಿದ್ದು, ನಂತರ ನಾಗಿನ್ ಆಗಮನವಾಗುತ್ತದೆ ಎಂಬ ಪರಿಕಲ್ಪನೆಯಲ್ಲಿ ಪ್ರೋಮೋ ರೂಪಿಸಲಾಗಿದೆ. ಏಕ್ತಾ ಕಪೂರ್ (Ekta Kapoor) ‘ನಾಗಿನ್ 6’ಅನ್ನು ನಿರ್ಮಾಣ ಮಾಡುತ್ತಿದ್ದು, ವಾಹಿನಿ ಹಂಚಿಕೊಂಡಿರುವ ಪ್ರೋಮೋ ಇಲ್ಲಿದೆ. ಈ ಪ್ರೋಮೋವನ್ನು ನೆಟ್ಟಿಗರ ಕಾಳೆಳೆಯುತ್ತಿದ್ದು, ವಿವಿಧ ರೀತಿಯ ಮೀಮ್​ಗಳಿಗೆ ಆಹಾರವಾಗಿದೆ. 

‘ನಾಗಿನ್ 6’ ಪ್ರೋಮೋ ಇಲ್ಲಿದೆ:

ಥರಹೇವಾರಿ ಮೀಮ್​ಗಳಿಗೆ ಕಾರಣವಾದ ‘ನಾಗಿನ್ 6’: ‘ನಾಗಿನ್ 6’ ಪ್ರೋಮೋ ಎರಡು ಕಾರಣಕ್ಕೆ ಸಖತ್ ಸುದ್ದಿಯಾಗಿದೆ. ಒಂದು, ನಾಗಿನ್ ಆಗಿ ಕಾಣಿಸಿಕೊಳ್ಳುತ್ತಿರುವುದು ಯಾರು ಎಂಬುದು ವೀಕ್ಷಕರಲ್ಲಿ ಮೂಡಿದ ಪ್ರಶ್ನೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿರುವ ಹೆಸರು ರುಬಿನಾ ದಿಲೈಕ್. ಇದರ ಹೊರತಾಗಿ ಚರ್ಚೆಯಾಗುತ್ತಿರುವುದು ‘ನಾಗಿನ್ 6’ರ ಕತಾ ವಸ್ತು. ಜಗತ್ತು ಕರೊನಾ ವೈರಸ್​ನಿಂದ ತತ್ತರಿಸಿ, ಇನ್ನೂ ಅದರಿಂದ ಹೊರಬಂದಿಲ್ಲ. ಕಿರುತೆರೆಯ ಸೂಪರ್ ಹಿಟ್ ಫ್ಯಾಂಟಸಿ ಕಥನಕ್ಕೆ ಈಗ ಇದೇ ವಿಷಯದಿಂದ ಪ್ರೇರಣೆ ಪಡೆದು, ಕತೆ ರಚಿಸಲಾಗಿದೆ. ಇದು ಜನರು ಕಾಲೆಳೆಯಲು ಕಾರಣವಾಗಿದ್ದು, ಮೀಮ್​ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಓರ್ವ ನೆಟ್ಟಿಗರು, ‘‘ನಾಗಿನ್ ವೈರಸ್​ಅನ್ನು ನಾಶ ಮಾಡುತ್ತಾಳೆ.. ಇದೇ ವೇಳೆ ಒಂದು ಮೂಲೆಯಲ್ಲಿ ವ್ಯಾಕ್ಸೀನ್ ಅಳುತ್ತಾ ಇರುವ ದೃಶ್ಯ’ ಎಂದು ವಿಡಿಯೋ ತುಣಕನ್ನು ಹಂಚಿಕೊಂಡು ಕಾಲೆಳೆದಿದದ್ಧಾರೆ.

ಮತ್ತೋರ್ವ ನೆಟ್ಟಿಗರು ‘ನಾಗಿನ್ ಎನ್ನುವುದೇ ಭಾರತದ ನಿಜವಾದ ಸಾಂಕ್ರಾಮಿಕ ಸಮಸ್ಯೆ’ ಎಂದು ಕಾಲೆಳೆದಿದ್ದಾರೆ. ಇದೇ ರೀತಿ ಹಲವರು ಮೀಮ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಹಿಯ ಕುರಿತು ಬರುವುದಾದರೆ, ಭಾರತೀಯ ಕಿರುತೆರೆಯಲ್ಲಿ ‘ನಾಗಿನ್’ಗೆ ತನ್ನದೇ ಆದ ಬಹುದೊಡ್ಡ ವೀಕ್ಷಕ ವರ್ಗವಿದೆ. ಜನರು ಮುಂದಿನ ಸೀಸನ್​ಗೆ ಕಾಯುತ್ತಿದ್ದಾರೆ. ಈ ಕುರಿತು ಮತ್ತಷ್ಟು ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

ಇದನ್ನೂ ಓದಿ:

ಪುನೀತ್​ ಫೋಟೋ ಇಟ್ಟು ಶೂಟಿಂಗ್​ ಪೂರ್ಣಗೊಳಿಸಿದ ‘ಜೇಮ್ಸ್​’ ಚಿತ್ರತಂಡ; ಇಲ್ಲಿವೆ ಫೋಟೋಗಳು

ಆಸ್ಕರ್​ ರೇಸ್​ನಲ್ಲಿ ‘ಜೈ ಭೀಮ್​’ ಮತ್ತು ‘ಮರಕ್ಕರ್’​; ಭಾರತೀಯ ಚಿತ್ರಕ್ಕೆ ಈ ಬಾರಿಯಾದರೂ ಒಲಿಯುತ್ತಾ ಪ್ರಶಸ್ತಿ?

Follow us on

Most Read Stories

Click on your DTH Provider to Add TV9 Kannada