ಬಿಗ್​ ಬಾಸ್​ ನಿರೂಪಕರ ಬದಲಾವಣೆ ಖಚಿತ; ಹೊಸ ಪ್ರೋಮೋ ಬಂತು ನೋಡಿ…

ಈ ಬಾರಿ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಹೊಸ ಮೆರುಗು ಬರಲಿದೆ ಎಂದು ವೀಕ್ಷಕರು ಕಮೆಂಟ್​ ಮಾಡುತ್ತಿದ್ದಾರೆ. ನಿರೂಪಕರ ಬದಲಾವಣೆಯಿಂದ ಜನರ ನಿರೀಕ್ಷೆ ಹೆಚ್ಚಾಗಿದೆ. ಹೊಸ ಪ್ರೋಮೋ ಕೂಡ ವೈರಲ್​ ಆಗಿದೆ. ನಿರೂಪಕರ ಬದಲಾವಣೆ ಆಗಿದ್ದು ಕೆಲವರಿಗೆ ಇಷ್ಟ ಆಗಿಲ್ಲ. ಆ ಬಗ್ಗೆಯೂ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಇಲ್ಲಿದೆ ವಿವರ..

ಬಿಗ್​ ಬಾಸ್​ ನಿರೂಪಕರ ಬದಲಾವಣೆ ಖಚಿತ; ಹೊಸ ಪ್ರೋಮೋ ಬಂತು ನೋಡಿ...
ಬಿಗ್​ ಬಾಸ್​
Follow us
ಮದನ್​ ಕುಮಾರ್​
|

Updated on: May 21, 2024 | 7:00 PM

ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ದೊಡ್ಡ ವೀಕ್ಷಕ ವರ್ಗ ಇದೆ. ‘ಬಿಗ್​ ಬಾಸ್ ಕನ್ನಡ’ (Bigg Boss Kannada) ಶೋ ಈಗಾಗಲೇ 10 ಸೀಸನ್​ಗಳನ್ನು ಪೂರೈಸಿದೆ. ಅದೇ ರೀತಿ ಬೇರೆ ಬೇರೆ ಭಾಷೆಯಲ್ಲಿ ಕೂಡ ಈ ಕಾರ್ಯಕ್ರಮ ಜನಪ್ರಿಯತೆ ಪಡೆದುಕೊಂಡಿದೆ. ಮರಾಠಿ ಬಿಗ್​ ಬಾಸ್​ ಈಗ ಹೊಸ ಸೀಸನ್​ ಆರಂಭಿಸುತ್ತಿದೆ. ‘ಬಿಗ್​ ಬಾಸ್​ ಮರಾಠಿ 5’ (Bigg Boss Marathi 5) ಪ್ರಸಾರಕ್ಕೆ ದಿನಗಣನೆ ಆರಂಭ ಆಗಿದೆ. ವಿಶೇಷ ಏನೆಂದರೆ, ಈ ಕಾರ್ಯಕ್ರಮದ ನಿರೂಪಕರ ಬದಲಾವಣೆ ಆಗಿದೆ. ಹೊಸ ನಿರೂಪಕನಾಗಿ ಬಾಲಿವುಡ್​ ನಟ ರಿತೇಶ್​ ದೇಶಮುಖ್​ (Riteish Deshmukh) ಎಂಟ್ರಿ ನೀಡಿದ್ದಾರೆ. ‘ಬಿಗ್​ ಬಾಸ್​ ಮರಾಠಿ ಸೀಸನ್​ 5’ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ.

ಈವರೆಗೂ ಮಹೇಶ್​ ಮಂಜ್ರೇಕರ್​ ಅವರು ‘ಬಿಗ್​ ಬಾಸ್​ ಮರಾಠಿ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಆದರೆ ಈಗ ಅವರ ಸ್ಥಾನಕ್ಕೆ ರಿತೇಶ್​ ದೇಶಮುಖ್​ ಬಂದಿದ್ದಾರೆ. ರಿತೇಶ್​ ದೇಶಮುಖ್​ ಅವರ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಸಖತ್​ ಖುಷಿ ಆಗಿದೆ. ಈ ಬಾರಿ ಬಿಗ್​ ಬಾಸ್​ ಶೋಗೆ ಹೊಸ ಕಳೆ ಬರಲಿದೆ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ. ವೀಕ್ಷಕರ ನಿರೀಕ್ಷೆ ಜಾಸ್ತಿ ಆಗಿದೆ.

ಈ ಬಿಗ್​ ಬಾಸ್​ ಚೆಲುವೆಯ ಅಂದಕ್ಕೆ ಮನ ಸೋಲದವರೇ ಇಲ್ಲ

‘ಕಲರ್ಸ್​ ಮರಾಠಿ’ ವಾಹಿನಿಯಲ್ಲಿ ‘ಬಿಗ್​ ಬಾಸ್​ ಮರಾಠಿ ಸೀಸನ್​ 5’ ಪ್ರಸಾರ ಆಗಲಿದೆ. ‘ನಾವು ಮಹೇಶ್​ ಮಂಜ್ರೇಕರ್​ ಅವರನ್ನು ಮಿಸ್​ ಮಾಡಿಕೊಳ್ಳುತ್ತೇನೆ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಜೊತೆಗೆ ರಿತೇಶ್​ ದೇಶಮುಖ್​ ಅವರಿಗೆ ಸ್ವಾಗತ ಕೋರಿದ್ದಾರೆ. ‘ಇವರಿಗೆ ನಿಜವಾದ ನಿರೂಪಕ ಅನ್ನೋದು’ ಎಂಬ ಕಮೆಂಟ್​​ ಕೂಡ ಬಂದಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್​ ಬಾಸ್​ ಮರಾಠಿ ಹೊಸ ಸೀಸನ್​ ಆರಂಭಕ್ಕೂ ಮುನ್ನ ಸದ್ದು ಮಾಡುತ್ತಿದೆ.

‘ಬಿಗ್​ ಬಾಸ್​ ಮರಾಠಿ ಸೀಸನ್​ 5’ ಹೊಸ ಪ್ರೋಮೋ:

View this post on Instagram

A post shared by @colorsmarathi

ಬಾಲಿವುಡ್​ನಲ್ಲಿ ರಿತೇಶ್​ ದೇಶಮುಖ್​ ಅವರು ಹಲವಾರು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ವಿಶೇಷವಾಗಿ ಕಾಮಿಡಿ ಸಿನಿಮಾಗಳನ್ನು ಮಾಡಿ ಜನಮನ ಗೆದ್ದಿದ್ದಾರೆ. ‘ಏಕ್​ ವಿಲನ್​’ ರೀತಿಯ ಥ್ರಿಲ್ಲರ್​ ಸಿನಿಮಾವನ್ನು ಕೂಡ ಅವರು ನೀಡಿದ್ದಾರೆ. ಹಿಂದಿ ಮಾತ್ರವಲ್ಲದೇ ಮರಾಠಿ ಚಿತ್ರರಂಗದ ಜೊತೆಗೆ ಅವರು ವಿಶೇಷ ನಂಟು ಹೊಂದಿದ್ದಾರೆ. ಮರಾಠಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಹಾಗೂ ನಟಿಸಿದ್ದಾರೆ ಕೂಡ. ಹಾಗಾಗಿ ಅವರು ಬಿಗ್​ ಬಾಸ್​ ಮರಾಠಿ ಶೋಗೆ ನಿರೂಪಕನಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಬೇಕರಿ ಮಾಲೀಕ ಹೇಳುವಂತೆ ಕೇಕ್ ಕಟ್ ಮಾಡುವ ಕ್ರೇಜ್ ಕಡಿಮೆಯಾಗಿದೆ!
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ
ಮೈಸೂರು; ಹುಚ್ಚು ಸಾಹಸಗಳನ್ನು ಸೆರೆಹಿಡಿಯಲು ಸಿಸಿಟಿವಿ ಕೆಮೆರಾಗಳು: ಡಿಸಿಪಿ