‘ಅವಳು ಬದಲಾಗಬಹುದು’; ಸಾನ್ಯಾ ಐಯ್ಯರ್ ಬಗ್ಗೆ ರೂಪೇಶ್ ಶೆಟ್ಟಿಗೆ ಕಾಡಿತು ಒಂದು ಆತಂಕ

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಬಿಗ್ ಬಾಸ್ ಒಟಿಟಿಯಲ್ಲಿ ಮೊದಲು ಗುರುತಿಸಿಕೊಂಡರು. ಅಲ್ಲಿ ಇಬ್ಬರ ಬಾಂಡಿಂಗ್ ಚೆನ್ನಾಗಿ ಬೆಳೆಯಿತು. ಟಿವಿ ಸೀಸನ್​ನಲ್ಲಿ ಆರು ವಾರಗಳ ಕಾಲ ಒಟ್ಟಾಗಿ ಇದ್ದರು.

‘ಅವಳು ಬದಲಾಗಬಹುದು’; ಸಾನ್ಯಾ ಐಯ್ಯರ್ ಬಗ್ಗೆ ರೂಪೇಶ್ ಶೆಟ್ಟಿಗೆ ಕಾಡಿತು ಒಂದು ಆತಂಕ
ಸಾನ್ಯಾ-ರೂಪೇಶ್​
Edited By:

Updated on: Nov 07, 2022 | 10:19 PM

ಸಾನ್ಯಾ ಐಯ್ಯರ್ (Sanya Iyer) ಅವರು ಬಿಗ್ ಬಾಸ್​ ಮನೆಯಿಂದ ಔಟ್ ಆಗಿದ್ದಾರೆ. ಇದರಿಂದ ರೂಪೇಶ್ ಶೆಟ್ಟಿ (Roopesh Shetty) ಅವರು ಒಂಟಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಅವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಅವರು ಹೋದ ನಂತರ ಬಹಳ ಹೊತ್ತು ರೂಪೇಶ್ ಶೆಟ್ಟಿ ಅವರು ಕಣ್ಣೀರು ಹಾಕುತ್ತಲೇ ಇದ್ದರು. ಮನೆ ಮಂದಿ ರೂಪೇಶ್ ಅವರಿಗೆ ಸಮಾಧಾನ ಮಾಡಲು ಪ್ರಯತ್ನಿಸಿದರು. ಈಗ ರೂಪೇಶ್ ಶೆಟ್ಟಿ ಅವರು ಸಾನ್ಯಾ ಐಯ್ಯರ್ ಬಗ್ಗೆ ಮನೆ ಮಂದಿ ಜತೆ ಒಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಬಿಗ್ ಬಾಸ್ ಒಟಿಟಿಯಲ್ಲಿ ಮೊದಲು ಗುರುತಿಸಿಕೊಂಡರು. ಅಲ್ಲಿ ಇಬ್ಬರ ಬಾಂಡಿಂಗ್ ಚೆನ್ನಾಗಿ ಬೆಳೆಯಿತು. ಟಿವಿ ಸೀಸನ್​ನಲ್ಲಿ ಆರು ವಾರಗಳ ಕಾಲ ಒಟ್ಟಾಗಿ ಇದ್ದರು. ಆದರೆ, ಕಳೆದ ವಾರ ಸಾನ್ಯಾ ಹೊರ ಹೋಗಿದ್ದಾರೆ. ಇದರಿಂದ ರೂಪೇಶ್ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

‘ಅವಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳಿಲ್ಲದೆ ಊಟ ಮಾಡಲು ಆಗುತ್ತಿಲ್ಲ. ನನಗೋಸ್ಕರ ಅವಳು ಊಟಕ್ಕಾಗಿ ಕಾಯುತ್ತಿದ್ದಳು. ಆಗ ನಾನು ನೆಗ್ಲೆಟ್ ಮಾಡುತ್ತಿದ್ದೆ. ಈಗ ಅದರ ಬೆಲೆ ಅರ್ಥ ಆಗುತ್ತಿದೆ. ನಿಜಕ್ಕೂ ಬೇಸರ ಆಗುತ್ತಿದೆ’ ಎಂದು ಊಟ ಮಾಡುತ್ತಲೇ ಕಣ್ಣೀರು ಹಾಕಿದರು ರೂಪೇಶ್ ಶೆಟ್ಟಿ. ಪ್ರತಿ ಬಾರಿ ಊಟ ಮಾಡುವಾಗಲೂ ರೂಪೇಶ್ ಶೆಟ್ಟಿ ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಇದನ್ನೂ ಓದಿ: Sanya Iyer: ಬಿಗ್​ ಬಾಸ್​ ಮನೆಯಿಂದ ಸಾನ್ಯಾ ಐಯ್ಯರ್​ ಔಟ್​: ಬಿಕ್ಕಿ ಬಿಕ್ಕಿ ಅತ್ತ ರೂಪೇಶ್​ ಶೆಟ್ಟಿ

ಸಾನ್ಯಾ ಐಯ್ಯರ್ ಅವರು ಹೊರಗೆ ಹೋದ ನಂತರ ಬ್ಯುಸಿ ಆಗಬಹುದು. ಈ ಬಾಡಿಂಗ್ ಇರದೇ ಇರಬಹುದು ಎನ್ನುವ ಆತಂಕ ರೂಪೇಶ್​ಗೆ ಕಾಡಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾವಿಬ್ಬರೂ ಇಲ್ಲಿ ಕ್ಲೋಸ್ ಆಗಿದ್ದೆವು. ಹೊರಗೆ ಹೋದಮೇಲೆ ಅವಳು ಬದಲಾಗಬಹುದು. ಬದಲಾಗುತ್ತಾಳೆ ಅಂದ್ರೆ ಆ ರೀತಿ ಅಲ್ಲ. ಅವಳು ತನ್ನದೇ ಕೆಲಸದಲ್ಲಿ ಬ್ಯುಸಿ ಆಗುತ್ತಾಳೆ. ಇಲ್ಲಿ ಇರುವಷ್ಟು ಕ್ಲೋಸ್​ನೆಸ್​ ಹೊರಗೆ ಹೋದಮೇಲೆ ಇರುತ್ತದೆಯೋ ಅಥವಾ ಇಲ್ಲವೋ ಅನ್ನೋದು ಗೊತ್ತಾಗುತ್ತಿಲ್ಲ’ ಎಂದಿದ್ದಾರೆ ರೂಪೇಶ್.