AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಗೆ ‘ದಾದಾ’ ಎಂಟ್ರಿ: ಬೆಂಗಾಲಿ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕ

‘ಬಿಗ್ ಬಾಸ್ ಬಾಂಗ್ಲಾ’ ಆವೃತ್ತಿಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೊಸ ನಿರೂಪಕರಾಗಿ ಎಂಟ್ರಿ ಕೊಡುತ್ತಿರುವುದು ಈ ಸೀಸನ್‌ನ ದೊಡ್ಡ ವಿಶೇಷತೆಯಾಗಿದೆ. ಹಲವು ವರ್ಷಗಳ ನಂತರ ಬೆಂಗಾಲಿ ಬಿಗ್ ಬಾಸ್ ಮರಳಿ ಬರುತ್ತಿರುವುದರಿಂದ ರಿಯಾಲಿಟಿ ಶೋ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಬಿಗ್ ಬಾಸ್ ಮನೆಗೆ ‘ದಾದಾ’ ಎಂಟ್ರಿ: ಬೆಂಗಾಲಿ ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕ
Bigg Boss BanglaImage Credit source: Star Jalsha
ಮದನ್​ ಕುಮಾರ್​
|

Updated on: Jul 20, 2026 | 7:36 PM

Share

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಅಭಿಮಾನಿಗಳ ಹೆಮ್ಮೆಯ ‘ದಾದಾ’ ಸೌರವ್ ಗಂಗೂಲಿ (Sourav Ganguly) ಈಗ ಬಿಗ್ ಬಾಸ್ ಸಾಮ್ರಾಜ್ಯಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಮುಂಬರುವ ಸೆಪ್ಟೆಂಬರ್ 2026ರಿಂದ ಆರಂಭವಾಗಲಿರುವ ಜಿಯೋಸ್ಟಾರ್ (JioStar) ಸಂಸ್ಥೆಯ ‘ಬಿಗ್ ಬಾಸ್’ ಮೆಗಾ ಲಾಂಚ್‌ನಲ್ಲಿ ಗಂಗೂಲಿ ಅವರು ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ದೀರ್ಘಾವಧಿಯ ಬಿಡುವಿನ ನಂತರ ಕಂಬ್ಯಾಕ್ ಮಾಡುತ್ತಿರುವ ‘ಬಿಗ್ ಬಾಸ್ ಬಾಂಗ್ಲಾ’ (Bigg Boss Bangla) ಆವೃತ್ತಿಗೆ ಸೌರವ್ ಗಂಗೂಲಿ ನಿರೂಪಕರಾಗಿ ಆಯ್ಕೆಯಾಗಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ನಾಯಕತ್ವ ಹಾಗೂ ಟಿವಿ ಶೋಗಳಲ್ಲಿ ತಮ್ಮ ಚಾಣಾಕ್ಷ ನಿರೂಪಣೆಯಿಂದ ಜನಪ್ರಿಯರಾಗಿರುವ ಸೌರವ್ ಗಂಗೂಲಿ, ಈಗ ಬಿಗ್ ಬಾಸ್ ಮನೆಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ‘ಸ್ಟಾರ್ ಜಲ್ಸಾ’ ವಾಹಿನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಬಿಗ್ ಬಾಸ್ ಬಾಂಗ್ಲಾ ಬರುತ್ತಿದೆ’ ಎಂದು ಸಣ್ಣ ಝಲಕ್ ಹಂಚಿಕೊಂಡಿದೆ.

ಪ್ರಸಾರ ಎಲ್ಲಿ ಮತ್ತು ಯಾವಾಗ?

ಸೆಪ್ಟೆಂಬರ್ 2026ರ ಹಬ್ಬದ ಸೀಸನ್‌ನಿಂದ ಏಕಕಾಲದಲ್ಲಿ ಆರಂಭವಾಗಲಿರುವ ಆರು ಭಾಷೆಗಳ ಬಿಗ್ ಬಾಸ್ ಪೈಕಿ ಬಾಂಗ್ಲಾ ಆವೃತ್ತಿಯೂ ಒಂದಾಗಿದೆ. ವೀಕ್ಷಕರು ಈ ಕಾರ್ಯಕ್ರಮವನ್ನು ‘ಸ್ಟಾರ್ ಜಲ್ಸಾ’ ವಾಹಿನಿಯಲ್ಲಿ ವೀಕ್ಷಿಸಬಹುದು. ಮೊಬೈಲ್ ಅಥವಾ ಡಿಜಿಟಲ್ ಪರದೆಯಲ್ಲಿ ವೀಕ್ಷಿಸಲು ಇಚ್ಛಿಸುವವರು ‘ಜಿಯೋಹಾಟ್‌ಸ್ಟಾರ್’ ಆ್ಯಪ್‌ನಲ್ಲಿ ಲೈವ್ ವೀಕ್ಷಿಸಬಹುದಾಗಿದೆ.

View this post on Instagram

A post shared by Star Jalsha (@starjalsha)

ಕ್ರಿಕೆಟ್‌ನಿಂದ ರಿಯಾಲಿಟಿ ಶೋವರೆಗೆ ‘ದಾದಾ’ ಜರ್ನಿ:

ಸೌರವ್ ಗಂಗೂಲಿ ಪ್ರಸ್ತುತ ‘ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್’ ಅಧ್ಯಕ್ಷರಾಗಿ ಹಾಗೂ ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಬಂಗಾಳಿ ಕಿರುತೆರೆಯಲ್ಲಿ ಈಗಾಗಲೇ ಯಶಸ್ವಿ ಕ್ವಿಜ್ ಶೋ ನಡೆಸಿಕೊಟ್ಟಿರುವ ಗಂಗೂಲಿ ಅವರಿಗೆ ಬಿಗ್ ಬಾಸ್ ಸಂಪೂರ್ಣ ವಿಭಿನ್ನ ಹಾಗೂ ಸವಾಲಿನ ವೇದಿಕೆಯಾಗಲಿದೆ.

ಇದನ್ನೂ ಓದಿ: ತೆರೆಗೆ ಬರುತ್ತಿದೆ ‘ದಾದಾ’ನ ದಾದಾಗಿರಿ, ಬಿಡುಗಡೆ ದಿನಾಂಕ ಘೋಷಣೆ

6 ಭಾಷೆಗಳಲ್ಲಿ ಬಿಗ್ ಬಾಸ್ ಅಬ್ಬರ:

ಜಿಯೋಸ್ಟಾರ್ ನೆಟ್‌ವರ್ಕ್‌ನಲ್ಲಿ ಸೆಪ್ಟೆಂಬರ್‌ನಿಂದ ಭಾರತದಾದ್ಯಂತ ಒಟ್ಟು 6 ಭಾಷೆಗಳಲ್ಲಿ ಬಿಗ್ ಬಾಸ್ ಅಬ್ಬರ ಶುರುವಾಗಲಿದ್ದು, ಆಯಾ ಭಾಷೆಯ ಸೂಪರ್‌ಸ್ಟಾರ್‌ಗಳು ಶೋ ಮುನ್ನಡೆಸಲಿದ್ದಾರೆ. ಈ ಬಾರಿಯ ಬಿಗ್ ಬಾಸ್ ಕನ್ನಡ ಆವೃತ್ತಿಯನ್ನು ಎಂದಿನಂತೆ ಕಿಚ್ಚ ಸುದೀಪ್ ಮುನ್ನಡೆಸಿದರೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಹಿಂದಿ ಆವೃತ್ತಿಯ ಸಾರಥ್ಯ ವಹಿಸಲಿದ್ದಾರೆ. ಇನ್ನು, ತಮಿಳಿನಲ್ಲಿ ವಿಜಯ್ ಸೇತುಪತಿ, ತೆಲುಗಿನಲ್ಲಿ ನಾಗಾರ್ಜುನ ಹಾಗೂ ಮಲಯಾಳಂನಲ್ಲಿ ಮೋಹನ್ ಲಾಲ್ ಅವರು ನಿರೂಪಕರಾಗಿ ವೀಕ್ಷಕರನ್ನು ರಂಜಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ