ಮತ್ತೆ ವೈಲೆಂಟ್ ಆದ ಪ್ರಶಾಂತ್; ಗೆಳೆಯನ ವಿರುದ್ಧವೇ ತಿರುಗಿ ಬಿದ್ದ ಸಂಬರ್ಗಿ
ಈ ಎರಡೂ ಟೀಂಗಳಿಗೆ ವಿವಿಧ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಮೊದಲ ಟಾಸ್ಕ್ನಲ್ಲಿ ಪ್ರಶಾಂತ್ ಸಂಬರ್ಗಿ ರಾಂಗ್ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 8’ರಲ್ಲಿ ಪ್ರಶಾಂತ್ ಸಂಬರ್ಗಿ ಸಾಕಷ್ಟು ವೈಲೆಂಟ್ ಆಗಿ ಗುರುತಿಸಿಕೊಂಡಿದ್ದರು. ದೊಡ್ಮನೆಯಲ್ಲಿ ಅವರು ಉಪವಾಸ ಸತ್ಯಾಗ್ರಹ ಮಾಡಿದ್ದೂ ಇದೆ. ಈ ಬಾರಿಯೂ ಅವರು ಬಿಗ್ ಬಾಸ್ (Bigg Boss) ಮನೆಗೆ ಬಂದಿದ್ದಾರೆ. ಕಳೆದ ಸೀಸನ್ನಂತೆ ಈ ಬಾರಿ ನಡೆದುಕೊಳ್ಳುವುದಿಲ್ಲ ಎಂದು ಆರಂಭದಲ್ಲಿ ಹೇಳಿದ್ದರು ಪ್ರಶಾಂತ್ ಸಂಬರ್ಗಿ (Prashanth Sambargi). ಆದರೆ, ಆ ರೀತಿ ಆಗುತ್ತಿಲ್ಲ. ಪ್ರಶಾಂತ್ ಸಂಬರ್ಗಿ ಮತ್ತೆ ವೈಲೆಂಟ್ ಆಗಿದ್ದಾರೆ. ಗೆಳೆಯ ವಿನೋದ್ ಗೊಬ್ಬರಗಾಲ ವಿರುದ್ಧವೇ ಅವರು ತಿರುಗಿ ಬಿದ್ದಿದ್ದಾರೆ. ಇಡೀ ಮನೆ ರಣರಂಗವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆಗೆ ವಿವಿಧ ಟಾಸ್ಕ್ಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಮನೆಯಲ್ಲಿ ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಒಂದು ಗುಂಪಿಗೆ ಅನುಪಮಾ ಗೌಡ ಕ್ಯಾಪ್ಟನ್ ಆದರೆ, ಮತ್ತೊಂದು ಟೀಂಗೆ ದೀಪಿಕಾ ದಾಸ್ ನಾಯಕಿ. ಈ ಎರಡೂ ಟೀಂಗಳಿಗೆ ವಿವಿಧ ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಮೊದಲ ಟಾಸ್ಕ್ನಲ್ಲಿ ಪ್ರಶಾಂತ್ ಸಂಬರ್ಗಿ ರಾಂಗ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನ ಪ್ರಕಾರ ಸ್ಪರ್ಧಿಗಳು ಜಿಮ್ ಸೈಕಲ್ ತುಳಿಯುತ್ತಾ ಸ್ಯಾಂಡ್ವಿಚ್ ಮಾಡಬೇಕಿತ್ತು. ಈ ಟಾಸ್ಕ್ ಮುಗಿದ ಮೇಲೆ ಪ್ರಶಾಂತ್ ಸಂಬರ್ಗಿ ಸಖತ್ ವೈಲೆಂಟ್ ಆದರು. ಕ್ಯಾಪ್ಟನ್ ಆಗಿದ್ದ ವಿನೋದ್ ಅವರು ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಟಾಸ್ಕ್ನ ಕೆಲ ನಿಯಮಗಳನ್ನು ವಿವಿಧ ರೀತಿಯಲ್ಲಿ ಬದಲಾಯಿಸಿ ಹೇಳಿದ್ದರು ಎಂಬುದು ಪ್ರಶಾಂತ್ ಸಂಬರ್ಗಿ ವಾದ. ವಿನೋದ್ ನಡೆ ಅನೇಕರ ಸಿಟ್ಟಿಗೆ ಕಾರಣವಾಗಿದೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಅವರು ಸಖತ್ ವೈಲೆಂಟ್ ಆಗಿ ವರ್ತಿಸಿದ್ದಾರೆ.
ಕಳೆದ ವಾರ ಪ್ರಶಾಂತ್ ಹಾಗೂ ವಿನೋದ್ ಜೋಡಿಯಾಗಿ ಆಡಿದ್ದರು. ಇಬ್ಬರೂ ಕ್ಯಾಪ್ಟನ್ಸಿ ಟಾಸ್ಕ್ಗೆ ಬರೋಕೆ ಪ್ರಶಾಂತ್ ಸಂಬರ್ಗಿ ಅವರು ಮಾಡಿದ್ದ ಐಡಿಯಾವೇ ಕಾರಣವಾಗಿತ್ತು. ಕೊನೆಗೆ ವಿನೋದ್ ಕ್ಯಾಪ್ಟನ್ ಆದರು. ಆದರೆ, ಈಗ ಪ್ರಶಾಂತ್ ಸಂಬರ್ಗಿಯೇ ಕ್ಯಾಪ್ಟನ್ ವಿನೋದ್ ವಿರುದ್ಧ ತಿರುಗಿಬಿದ್ದಿದ್ದಾರೆ
ಸ್ಯಾಂಡ್ವಿಚ್ ಟಾಸ್ಕಲ್ಲಿ ಎರಡು ಸ್ಲೈಸ್ ಈರುಳ್ಳಿ, ಎರಡು ಸ್ಲೈಸ್ ಜಗಳ!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಪ್ರತಿ ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/4GbW1yil5C
— Colors Kannada (@ColorsKannada) October 4, 2022
ಇದನ್ನೂ ಓದಿ: ‘ನೀವು ನನ್ನನ್ನು ಆ ದೃಷ್ಟಿಕೋನದಲ್ಲಿ ನೋಡಬೇಡಿ’; ಪ್ರಶಾಂತ್ ಸಂಬರ್ಗಿಗೆ ಸಾನ್ಯಾ ಐಯ್ಯರ್ ಮನವಿ
ಪ್ರಶಾಂತ್ ಸಂಬರ್ಗಿ ಅವರು ಈ ಸೀಸನ್ನ ಆರಂಭದಲ್ಲಿ ಸೈಲೆಂಟ್ ಆಗಿದ್ದರು. ಆದರೆ, ಬರುಬರುತ್ತಾ ಅವರು ವೈಲೆಂಟ್ ಆದರು. ಸಾನ್ಯಾ ಐಯ್ಯರ್ ಜತೆ ಸಾಕಷ್ಟು ಜಗಳ ಮಾಡಿಕೊಂಡಿದ್ದಾರೆ. ಅನೇಕರ ಜತೆ ಪ್ರಶಾಂತ್ ಸಂಬರ್ಗಿ ಕಿರಿಕ್ ಮಾಡಿಕೊಂಡಿದ್ದಾರೆ. ಈಗ ಅವರು ಮತ್ತೊಂದು ಜಗಳಕ್ಕೆ ನಾಂದಿ ಹಾಡಿದ್ದಾರೆ.