‘ಗೋಟ್’ ತೇಲದೆ ಮುಳುಗಿದ ಬೋಟ್’: ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
GOAT Movie: ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾ ಇಂದು (ಸೆಪ್ಟೆಂಬರ್ 05) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಟ್ವಿಟ್ಟರ್ನಲ್ಲಿ ಹಲವು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿದೆ ಕೆಲವು ಆಯ್ದ ಟ್ವಿಟ್ಟರ್ ವಿಮರ್ಶೆಗಳು.
ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾ ಇಂದು (ಸೆಪ್ಟೆಂಬರ್ 05) ಬಿಡುಗಡೆ ಆಗಿದೆ. ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ಮೀನಾಕ್ಷಿ ಚೌಧರಿ ಹಾಗೂ ಮಾಳವಿಕಾ ಶರ್ಮಾ ನಾಯಕಿಯರಾಗಿ ನಟಿಸಿದ್ದಾರೆ. ಪ್ರಭುದೇವಾ, ರಾಘವ್ ಲಾರೆನ್ಸ್ ಇನ್ನಿತರೆ ಜನಪ್ರಿಯ ನಟರು ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾದ ಶೋಗಳು ಬೆಂಗಳೂರಿನಲ್ಲಿ ಬೆಳಿಗ್ಗೆ 4 ಗಂಟೆಗೆ ಆರಂಭವಾಗಿವೆ. ಹಲವೆಡೆ ಮೊದಲ ಶೋ ಮುಗಿದು ಎರಡನೇ ಶೋ ಆರಂಭವಾಗಿದೆ. ಅರ್ಲಿ ಮಾರ್ನಿಂಗ್ ಶೋ ನೋಡಿದ ಹಲವರು ಟ್ವಿಟ್ಟರ್ನಲ್ಲಿ ವಿಮರ್ಶೆಗಳನ್ನು ಹಂಚಿಕೊಂಡಿದ್ದಾರೆ. ಟ್ವಿಟ್ಟರ್ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಿನಿಮಾ ನೋಡಿದ ಒಬ್ಬರು, ‘ಗೋಟ್’ ಸಿನಿಮಾ ತೇಲದೆ ಮುಳುಗಲಿರುವ ಬೋಟ್’ ಒಂದು ಸಾಲಿನ ವಿಮರ್ಶೆ ಬರೆದಿದ್ದಾರೆ. ಇನ್ನು ಕೆಲವರು ಸಿನಿಮಾದ ಮೊದಲಾರ್ಧವಷ್ಟೆ ಬೋರು ಎರಡನೇ ಅರ್ಧ ಸಾಧಾರಣವಾಗಿದೆ ಎಂದಿದ್ದಾರೆ. ಇನ್ನು ದಳಪತಿ ವಿಜಯ್ ಅಭಿಮಾನಿಗಳು, ಪ್ರತಿ ಸಿನಿಮಾದಂತೆ ಈ ಸಿನಿಮಾವನ್ನೂ ಅದ್ಭುತ, ಅತ್ಯದ್ಭುತ ಎಂದು ಕೊಂಡಾಡಿದ್ದಾರೆ.
‘ಮೊದಲಾರ್ಧ ಸಾಧಾರಣವಾಗಿದೆ. ದ್ವಿತೀಯಾರ್ಧದ ಟ್ವಿಸ್ಟ್-ಟರ್ನ್ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ದೃಶ್ಯಗಳು ಚೆನ್ನಾಗಿವೆ. ವಿಮರ್ಶೆಗಳಿಗೆ ಕಾಯದೆ ಮೊದಲು ಹೋಗಿ ಸಿನಿಮಾ ನೋಡಿ. ಕೊನೆಗೂ ವಿಜಯ್ ಸಿನಿಮಾದಲ್ಲಿ ಒಂದೊಳ್ಳೆ ಕತೆ ನೋಡಿ ಖುಷಿಯಾಯ್ತು’ ಎಂದು ಎನ್ವಿಎನ್ ಎಂಬುವರು ಟ್ವೀಟ್ ಮಾಡಿದ್ದಾರೆ.
#Goat Film had so much potential considering the genre & director VP who previously directed Maanadu, failed to give his best
Overall a good commercial flick – 2.5/5 pic.twitter.com/enzGPBA7d6
— ScootyPep (@Bottlekaap) September 5, 2024
ಸ್ಕೂಟಿ ಪೆಪ್ ಎಂಬ ಖಾತೆಯಿಂದ ಮಾಡಲಾಗಿರುವ ಟ್ವೀಟ್ನಲ್ಲಿ, ‘ಸಿನಿಮಾದ ಕತೆಗೆ ಬಹಳ ಶಕ್ತಿ ಇತ್ತು, ಆದರೆ ಅದನ್ನು ಪರಿಪೂರ್ಣವಾಗಿ ಬಳಸಿಕೊಳ್ಳಲು ನಿರ್ದೇಶಕರು ಎಡವಿದ್ದಾರೆ. ‘ಮಾನಾಡು’ ಅಂಥಹಾ ಸಿನಿಮಾ ಮಾಡಿದ್ದ ವೆಂಕಟ್ ಪ್ರಭು ‘ಗೋಟ್’ ಸಿನಿಮಾದಲ್ಲಿ ಹಿಂದೆ ಬಿದ್ದಿದ್ದಾರೆ. ಸಿನಿಮಾ ಕ್ಕೆ 5 ರಲ್ಲಿ 2.5 ಅಂಕ ಕೊಡಬಹುದಷ್ಟೆ’ ಎಂದಿದ್ದಾರೆ.
ಇದನ್ನೂ ಓದಿ:ವಿಜಯ್ ಸಿನಿಮಾಕ್ಕೆ ಚೆನ್ನೈಗಿಂತಲೂ ಬೆಂಗಳೂರಿನಲ್ಲಿ ಹೆಚ್ಚು ಶೋ, ಟಿಕೆಟ್ ದರವೂ ಇಲ್ಲೇ ಹೆಚ್ಚು
ಮೂನ್ ನೈಟ್ ಹೆಸರಿನ ಟ್ವಿಟ್ಟರ್ ಬಳಕೆದಾರ 5 ಕ್ಕೆ 4.7 ಅಂಕವನ್ನು ಸಿನಿಮಾಕ್ಕೆ ನೀಡಿದ್ದಾರೆ. ‘ಇದೊಂದು ನೋಡಲೇ ಬೇಕಾದ ಸಿನಿಮಾ. ಎಲ್ಲ ನಿರೀಕ್ಷೆಗಳನ್ನು ಮೀರಿ ಅದ್ಭುತವಾಗಿದೆ. ಪಕ್ಕಾ ಕಮರ್ಶಿಯಲ್ ಸಿನಿಮಾ ಇದು. ಮೊದಲಾರ್ಧ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. ದ್ವಿತೀಯಾರ್ಧ ಪ್ರೇಕ್ಷಕನಿಗೆ ಅಚ್ಚರಿ ತರಿಸುತ್ತದೆ. ಕುತೂಹಲ ಮೂಡಿಸುವ ಕೆಲವು ಅತಿಥಿ ಪಾತ್ರಗಳ ಎಂಟ್ರಿ ಆಗುತ್ತದೆ. ಒಟ್ಟಾರೆಯಾಗಿ ಈ ಸಿನಿಮಾ ವಿಜಯ್ ಶೋ’ ಎಂದಿದ್ದಾರೆ.
#TheGreatestOfAllTime telugu review:
Worse than #MrBachchan.
At least bachchan had heroine but inga athuvum ila
– 1/5
Disaster 👎
— Shrik 🙂 (@shriktweets) September 5, 2024
‘ಮೊದಲಾರ್ಧ ಸುಲಭವಾಗಿ ನಿದ್ದೆ ಮಾಡಬಹುದು, ಆಕಳಿಸಿ ಆಕಳಿಸಿ ಸುಸ್ತಾಗುತ್ತದೆ. ಎರಡನೇ ಅರ್ಧ ಸಾಧಾರಣವಾಗಿದೆ. ವಿಜಯ್ರ ಸ್ಟಾರ್ ಪವರ್ ಸಹ ಈ ಕೆಟ್ಟ ಸಿನಿಮಾವನ್ನು ಉಳಿಸಿಕೊಳ್ಳುವುದು ಅಸಾಧ್ಯ’ ಎಂದು ಟ್ವೀಟ್ ಮಾಡಿರುವುದು ಹಾರ್ದಿಕ್. ಶ್ರೀಕಿ ಎಂಬ ತೆಲುಗು ವೀಕ್ಷಕ, ‘ಗೋಟ್’ ಸಿನಿಮಾ ತೆಲುಗಿನ ‘ಮಿಸ್ಟರ್ ಬಚ್ಚನ್’ ಸಿನಿಮಾಕ್ಕಿಂತಲೂ ಅದ್ವಾನವಾಗಿದೆ. 5 ರಲ್ಲಿ 1 ಅಂಕ ಕೊಡಬಹುದಷ್ಟೆ’ ಎಂದಿದ್ದಾರೆ. ಒಟ್ಟಾರೆಯಾಗಿ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ಹೆಚ್ಚಾಗಿ ವ್ಯಕ್ತವಾಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ